ಅಳದಂಗಡಿ: 2021-2022ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಗೇರುಕಟ್ಟೆ ಪ್ರೌಢ ಶಾಲಾ ಶಿಕ್ಷಕ, ನಿರೂಪಕ ಅಜಿತ್ ಕುಮಾರ್ ಕೊಕ್ರಾಡಿಯವರನ್ನು ಶ್ರೀ ಸೋಮನಾಥೇಶ್ವರಿ ದೇವಸ್ಥಾನ ಹಾಗೂ ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿ ವತಿಯಿಂದ ಸೆ 10 ರಂದು ಸನ್ಮಾನಿಸಲಾಯಿತು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ಹಾಗೂ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೋಕ್ತೇಶರ ಶಿವಪ್ರಸಾದ್ ಅಜಿಲರು ಹೂ, ಹಾರ, ಶಾಲು, ಪೇಟ, ಅಭಿನಂದನಾ ಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿರ್ಲಾಲು ಸಿ. ಎ ಬ್ಯಾಂಕಿನ ನಿವೃತ್ತ ಸಿ.ಇ.ಓ ಪಿ.ಹೆಚ್ ನಿತ್ಯಾನಂದ ಶೆಟ್ಟಿ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕಾಪಿನಡ್ಕ, ಪ್ರಮುಖರಾದ ಮೋಹನ್ ದಾಸ್, ವಿಜಯ್ ಜೈನ್, ಸುಪ್ರೀತ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.