ತಾಲೂಕು ಭಾರತೀಯ ಮಜ್ದೂರ್ ಸಂಘದಿಂದ ಕಾರ್ಮಿಕರಿಗೆ ಮಾಹಿತಿ ಕಾರ್ಯಗಾರ

ಕಳೆಂಜ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿಯ ವತಿಯಿಂದ ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಟೂರಿಸ್ಟ್ ಚಾಲಕರು ಹಾಗೂ ಇತರ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಮಾಹಿತಿ ಕಾರ್ಯಗಾರವು  ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಜರುಗಿತು.

ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ಬೀಡಿ ಕಾರ್ಮಿಕರ ತಾಲೂಕು ಸಂಚಾಲಕಿ ಸಿ.ಕೆ ಚಂದ್ರಕಲಾ ಹಾಗೂ ಸಹ ಸಂಚಾಲಕಿ ಶಶಿಕಲಾ ಕೊಯ್ಯೂರು ಇವರುಗಳು ಕಾರ್ಮಿಕರಿಗೆ ಮಾಹಿತಿ ನೀಡಿದರು.

ಕಳೆಂಜ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ಸಿ.ಎ ಬ್ಯಾಂಕ್ ಅಧ್ಯಕ್ಷರು, ಬಿ.ಎಂ.ಎಸ್. ಕಳೆಂಜ ಗ್ರಾಮ ಸಮಿತಿ ಅಧ್ಯಕ್ಷರು, ಗ್ರಾಮ ಸಮಿತಿ ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರು ಹಾಗೂ ಎಲ್ಲಾ ವರ್ಗದ ಕಾರ್ಮಿಕರು ಕಾರ್ಯಾಗಾರದಲ್ಲಿ  ಭಾಗವಹಿಸಿದ್ದರು.

ಅಶೋಕ ಗೌಡ  ಸ್ವಾಗತಿಸಿ, ಹರೀಶ್ ಕೆ.ಬಿ ಕಾರ್ಯಕ್ರಮ ನಿರೂಪಿಸಿ, ಗಂಗಾಧರ  ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.