ನಿಡ್ಲೆ : ಮನೆಯಿಂದ ರೂ. 1.75 ಲಕ್ಷ ಮೌಲ್ಯದ 6 ಪವನ್ ಚಿನ್ನಾಭರಣ ಕಳವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ನಿಡ್ಲೆ: ಇಲ್ಲಿಯ ಮನೆಯೊಂದರಲ್ಲಿ ಯಾರೂ ಇಲ್ಲದ ವಿಷಯವನ್ನು ತಿಳಿದು ಮನೆಗೆ ನುಗ್ಗಿದ ಕಳ್ಳರು
ಅಂದಾಜು ರೂ. 1,75,000 ಮೌಲ್ಯದ 6 ಪವನ್ ಚಿನ್ನದ ಅಭರಣಗಳನ್ನು ಕಳವು ಗೈದ ಘಟನೆ ಸೆ.8ರಂದು ವರದಿಯಾಗಿದೆ.
ನಿಡ್ಲೆ ಗ್ರಾಮದ ಮಡಂಗಲ್ಲು ನಿವಾಸಿ
ಗಣೇಶ ಗೌಡ ಎಂ . ಎಂಬವರ ಮನೆಯಿಂದ ಈ ಕಳ್ಳತನ ಮಾಡಲಾಗಿದೆ.
ಘಟನೆ ವಿವರ:
ಸೆ.8 ರಂದು ಸಂಜೆ 4.30ಕ್ಕೆ ಗಣೇಶ್ ಗೌಡ ಅವರು ತನ್ನಮನೆಯಾದ ನಿಡ್ಲೆ ಗ್ರಾಮದ ಮಾಡಂಕಲ್ಲು ಎಂಬಲ್ಲಿಂದ ಹೆಂಡ್ತಿ ಹಾಗೂ ಮಕ್ಕಳನ್ನು ಕರೆದುಕೊಂಡು ಹೆಂಡತಿ ಮನೆಯಾದ ಮಿತ್ತಬಾಗಿಲು ಗ್ರಾಮದ ಬಂಗಾಡಿ ಎಂಬಲ್ಲಿಗೆ ಹೋಗಿದ್ದರು. ಅವರ ತಾಯಿ ಮಾತ್ರ ಮನೆಯಲ್ಲಿದ್ದು ಹೋಗುವ ಸಮಯ ಅವರಲ್ಲಿ ರಾತ್ರಿ ವೇಳೆ ಪಕ್ಕದ ಚಂದಪ್ಪ ರವರ ಮನೆಯಲ್ಲಿ ಮಲಗುವಂತೆ ತಿಳಿಸಿ ಹೋಗಿದ್ದರು ಎಂದು ಹೇಳಲಾಗಿದೆ.
ಅದರಂತೆ ತಾಯಿ ರಾತ್ರಿ 7ಕ್ಕೆ ಮನೆಗೆ ಬೀಗ ಹಾಕಿ ಚಂದಪ್ಪ ರವರ ಮನೆಗೆ ಹೋಗಿ ರಾತ್ರಿ ಅಲ್ಲೇ ಮಲಗಿದ್ದರು.
ಸೆ.9 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದ್ದು ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿದ್ದ ಕಪಾಟಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಒಳಗೆ ಇಟ್ಟಿದ್ದ 6 ಪವನ ಚಿನ್ನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಕಳವಾದ ಚಿನ್ನದ ಅಂದಾಜು ಒಟ್ಟು ಮೌಲ್ಯ ರೂ.1,75,000 ರೂ ಆಗಹಬಹುದು
ಧಮ೯ಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.