ಅಳದಂಗಡಿ: ಮದುವೆ ಸಮಾರಂಭಕ್ಕೆ ತಹಶೀಲ್ದಾರ್ ತಂಡದ ಧಿಡೀರ್ ದಾಳಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮದುವೆ ಮನೆಯವರಿಗೆ ಮತ್ತು  ಹಾಲ್ ಮಾಲಕರಿಗೆ ದಂಡ ವಿಧಿಸಿದ ತಹಶೀಲ್ದಾರ್

ಅಳದಂಗಡಿ: ಅಳದಂಗಡಿ ಸಭಾಭವನವೊಂದರಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಅನುಮತಿ ಪಡೆದುಕೊಂಡಿರುವುದಕ್ಕಿಂದ ಹೆಚ್ಚಿನ ಜನರು ಇರುವುದನ್ನು ತಿಳಿದ ತಾಲೂಕು ತಹಶೀಲ್ದಾರ್  ತಂಡದವರು ಸ್ಥಳಕ್ಕೆ ಧಾಳಿ ನಡೆಸಿ ದಂಡ ವಿಧಿಸಿದ ಘಟನೆ ಆ.26 ರಂದು ನಡೆದಿದೆ.

ಸದ್ರಿ ಮದುವೆಗೆ ಅಳದಂಗಡಿ ಗ್ರಾಮ ಪಂಚಾಯತ್ ನಿಂದ 50 ಜನರಿಗೆ ಅನುಮತಿ ಪಡೆದಿದ್ದು, ಸರಕಾರದ ಕೋವಿಡ್  ಮಾರ್ಗಸೂಚಿಯನ್ನು ಮೀರಿ 50 ಕ್ಕಿಂತಲೂ  ಅಧಿಕ ಜನರು ನೆರೆದಿರುವುದನ್ನು ಗಮನಿಸಿದ ತಹಶೀಲ್ದಾರರ  ತಂಡ ಸಬಾಭವನದ ಮಾಲಕರಿಗೆ ರೂ 7500  ಹಾಗೂ ಮದುವೆ ಮನೆಯವರಿಗೆ ರೂ5000  ಸೇರಿದಂತೆ ಒಟ್ಟು 12500/- ದಂಡ ವಿಧಿಸಿ, ಮುನ್ನೆಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ  ತಹಶೀಲ್ದಾರ್ ಮಹೇಶ್ ಜೆ, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಪ್ರೊಬೆಷನರಿ ತಹಶಿಲ್ದಾರ್ ಮಹಮ್ಮದ್ ಅಲಿ ಅಕ್ರಂ ಷಾ, ಅಳದಂಗಡಿ ಗ್ರಾ.ಪಂ ಕಾರ್ಯದರ್ಶಿ ಶ್ರೀನಿವಾಸ್ , ಗ್ರಾಮ ಕರಣಿಕ ನಿತೇಶ್ ಜೈನ್, ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

Copy Protected by Chetan's WP-Copyprotect.