
ಧರ್ಮಸ್ಥಳದಲ್ಲಿ ಪ್ರಶಾಂತ ಹಾಗೂ ಸ್ವಚ್ಛ ಪರಿಸರದಲ್ಲಿ ಸಿಬ್ಬಂದಿಯ ಸೌಜನ್ಯ ಪೂರ್ಣ ಸೇವೆಯನ್ನು ಅವರು ಶ್ಲಾಘಿಸಿದರು.
ಸಿಯೋನ್ ಆಶ್ರಮಕ್ಕೆ 2 ಕೋಟಿ ರೂ. ಗೂ ಮಿಕ್ಕಿ ಆರ್ಥಿಕ ನೆರವು ನೀಡಿರುವುದಲ್ಲದೆ, ಆಗಾಗ ಅಕ್ಕಿ, ತರಕಾರಿ ಹಾಗೂ ದಿನಬಳಕೆಯ ಪರಿಕರಗಳನ್ನು ನೀಡಿ ನಿರಂತರ ಸಹಕರಿಸುತ್ತಿರುವುದರ ಬಗ್ಗೆ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.
ಅಂಗವಿಕಲರು, ಮಾನಸಿಕ ರೋಗಿಗಳು ಹಾಗೂ ದೀನ-ದಲಿತರಿಗೆ ಸಿಯೋನ್ ಆಶ್ರಮದ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಹೇಮಾವತಿ ವೀ. ಹೆಗ್ಗಡೆಯವರು ಆಶ್ರಮದ ಸೇವಾ ಕಾರ್ಯಗಳಿಗೆ ಶುಭ ಹಾರೈಸಿದರು.
ಸಿಯೋನ್ ಆಶ್ರಮದ ಮೇರಿ ಯು.ಪಿ., ಶೋಭಾ ಯು.ಪಿ., ಸುಭಾಶ್ ಯು.ಪಿ., ಸೌಮ್ಯ ಯು.ಪಿ., ಮ್ಯಾಥ್ಯು ಸಿ.ಎ., ಮತ್ತು ಲಿಡ್ವಿನ್ ಆಂಟೊನಿ ಉಪಸ್ಥಿತರಿದ್ದರು.