ಉಜಿರೆ: ನೂತನವಾಗಿ ಪ್ರಾರಂಭಗೊಂಡಿರುವ ಶೀತಲ್ ಗಾರ್ಡನ್ ಉಜಿರೆ ಬೆಳ್ತಂಗಡಿ, ಬೋರ್ಡಿಂಗ್& ಲಾಡ್ಜಿಂಗ್, ಫ್ಯಾಮಿಲಿ ಬಾರ್& ರೆಸ್ಟೋರೆಂಟ್ ಆ.20 ರಂದು ಶುಭಾರಂಭಗೊಂಡಿದೆ.
ಉಜಿರೆ ಭಾರತ್ ಐರನ್ ವರ್ಕ್ಸ್ನ ಬಿ ಪಾಂಡುರಂಗ ಬಾಳಿಗ ನೂತನವಾಗಿ ನಿರ್ಮಿಸಿದ ಶೀತಲ್ ಗಾರ್ಡನ್ ನ್ನು ಉದ್ಘಾಟಸಿ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪವತಿ ಆರ್ ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಕೆನರಾ ಬ್ಯಾಂಕ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಲೀನಾ ಪಿಂಟೊ, ಬೆಳ್ತಂಗಡಿ ಯುವ ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್,ಉಡುಪಿ ಚಾರ್ಟರ್ಡ್ ಅಕೌಂಟೆಂಟ್ ಸುರೇಂದ್ರ ನಾಯಕ್,ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ಶಿವರಾಮ ಶೆಟ್ಟಿ ತಲ್ಲೂರು, ಜಿ.ಪಂ ಮಾಜಿ ಅಧ್ಯಕ್ಷ ಸುಂದರ ಗೌಡ ಇಚ್ಚಿಲ, ಉಡುಪಿ ನಿವೃತ್ತ ಪುಡ್ ಇನ್ಸ್ಪೆಕ್ಟರ್ ಎಂ.ಎಸ್ ಬಂಗೇರ, ಉಡುಪಿ ಸಿರಿಗಳ ದೇವಸ್ಥಾನದ ಅಧ್ಯಕ್ಷ ರಾಘವೇಂದ್ರ ಭಟ್, ಭಾಗವಹಿಸಿದರು.
ಈ ಸಂದರ್ಭದಲ್ಲಿ ಪಡಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಯೋಗೀಶ್ ಕುಮಾರ್ ಕೆಎಸ್, ಪ್ರಮುಖರಾದ ಗಂಗಾಧರ ಮಿತ್ತಮಾರ್, ನವೀನ್ ಕೆ ಸಾಮಾನಿ, ಸಂತೋಷ್ ಕುಮಾರ್ ಕಾಪಿನಡ್ಕ, ಸಂತೋಷ್ ಹೆಗ್ಡೆ ತೆಂಕಕಾರಂದೂರು, ಸುಭಾಶ್ಚಂದ್ರ ರೈ ಅಳದಂಗಡಿ, ತುಕರಾಮ್ ಬೆಳ್ತಂಗಡಿ, ಕೊಳ್ಳಾಜೆ ವಿಶ್ವನಾಥ್, ಸಂಜೀವ ಸುವರ್ಣ ಬಜಿರೆ, ಪ್ರಶಾಂತ್ ಬೆಳ್ತಂಗಡಿ, ಜೋಶಿಲ್ ವೈ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ವಿಜಯ -ಗೋಪಾಲ ಸಿ ಬಂಗೇರ ಉಡುಪಿ, ಶೀತಲ್-ಸಾಹಿಲ್ ವೈ ಕುಮಾರ್ ಬದ್ಯಾರು, ಡಾ. ಸುಶ್ಮಿತಾ- ಅಶ್ವತ್ ರಾಜ್ ಉಡುಪಿ ಆಗಮಿಸಿದ ಅತಿಥಿ ಗಣ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿ, ಸತ್ಕರಿಸಿದರು.
ಈ ಸಂದರ್ಭದಲ್ಲಿ ಸುಂದರ ವಿನ್ಯಾಸ ರಚಿಸಿದ ತಾಹಿರ್ ಹಾಗೂ ಪ್ರಸಾದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಉಡುಪಿ ಗೋಪಾಲ್ ಬಂಗೇರ ಹಾಗೂ ಯೋಗೀಶ್ ಕುಮಾರ್ ಕೆ.ಎಸ್ ಅವರ ಬಂಧು ಮಿತ್ರರು ಆಗಮಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.
ಶೀತಲ್ ಗಾರ್ಡನ್ನಲ್ಲಿ ಬೋರ್ಡಿಂಗ್ & ಲಾಡ್ಜಿಂಗ್ (ಎ.ಸಿ ಡಿಲಕ್ಸ್, ಸೂಟ್ ರೂಮ್) ಫ್ಯಾಮಿಲಿ ರೆಸ್ಟೋರೆಂಟ್, ವೆಜ್ & ನಾನ್ ವೆಜ್, ಪಾರ್ಟಿ ಹಾಲ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆಯೆಂದು ಸಂಸ್ಥೆಯ ಮಾಲಕರು ತಿಳಿಸಿದರು.
ಶುಭ ವಾಗಲಿ