ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಇದರ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧದ ಆವರಣದಲ್ಲಿ ನಡೆದ 75ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ನೆರವೇರಿಸಿ ಸ್ವಾಂತತ್ರೋತ್ಸವದ ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ಅವರು ವಹಿಸಿ, 75ನೇ ಸ್ವಾತಂತ್ರೋತ್ಸವ ಒಂದು ದಿನದ ಕಾರ್ಯಕ್ರಮವಲ್ಲ, ಮುಂದಿನ ಆ.15ರವರೆಗೆ ತಾಲೂಕಿನಲ್ಲಿ ನಿರಂತರವಾಗಿ ಗ್ರಾಮ ಪಂಚಾಯತದಿಂದ ಹಿಡಿದು ತಾಲೂಕು ಮಟ್ಟದವರೆಗೆ ಜನಪರ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭತ್ತದ ಕೃಷಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವೀತಿಯ ಪ್ರಶಸ್ತಿ ಪಡೆದ ಶ್ರೀಧರ ರಾವ್ ಕಳೆಂಜ, ತೃತೀಯ ಪ್ರಶಸ್ತಿ ಪಡೆದ ಯು. ಸದಾಶಿವ ಶೆಟ್ಟಿ ಉಜಿರೆ, ತಾಲೂಕು ಮಟ್ಟದಲ್ಲಿ ಪ್ರಶಸ್ತಿ ಪ್ರಥಮ ಪ್ರಶಸ್ತಿ ಪಡೆದ ಸೇಸಪ್ಪ ಶೆಟ್ಟಿ ಸುಲ್ಕೇರಿ, ದ್ವೀತಿಯ ಪ್ರಶಸ್ತಿ ಪಡೆದ ಸುರೇಶ್ ಶೆಟ್ಟಿಗಾರ ಬೆಳಾಲು, ತೃತೀಯ ಪ್ರಶಸ್ತಿ ಪಡೆದ ಸುಂದರ ಪೂಜಾರಿ ಕಳೆಂಜ ಇವರನ್ನು ಶಾಸಕರು ಗೌರವಿಸಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತು ಅಧ್ಯಕ್ಷೆ ರಜನಿ ಕುಡ್ವ, ನಿವೃತ್ತ ಸೇನಾನಿ ಎಂ.ಆರ್ ಜೈನ್, ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್, ವಿವಿಧ ಇಲಾಖೆಗಳ ಮುಖ್ಯಸ್ಥರಾದ ಶಿವಪ್ರಸಾದ ಅಜಿಲ, ಹೇಮಚಂದ್ರ, ವಿರೂಪಾಕ್ಷ, ಭುವನೇಶ್, ಶಿವಶಂಕರ್, ಸುಕನ್ಯಾ, ಶಂಭು ಶಂಕರ್, ಡಾ. ಕಲಾಮಧು ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಧರಣೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು.