ಕಾಶಿಪಟ್ನ ಗ್ರಾಮದ ಪಡ್ಯೋಡಿ ಮನೆಯ ಶ್ರೀಮತಿ ಮುತ್ತು ನಿಧನ

ಕಾಶಿಪಟ್ನ ಗ್ರಾಮದ ಪಡ್ಯೋಡಿ ಮನೆಯ ಪ್ರಗತಿಪರ ಕೃಷಿಕ, ನಾಟಿವೈದ್ಯ ದಿ.ಚೆನ್ನಯ್ಯ ಪೂಜಾರಿಯವರ ಧರ್ಮಪತ್ನಿ ಮುತ್ತು (ವ85) ಅವರು ವಯೋಸಹಜ ಕಳೆದ ರಾತ್ರಿ ಆ 7ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಪಡ್ಯೋಡಿ ಕುಟುಂಬದಲ್ಲಿ ಹಿರಿಯರಾಗಿದ್ದು ಸರಳ ಸಜ್ಜನಿಕೆಯಿಂದ ಎಲ್ಲರೊಂದಿಗೂ ಉತ್ತಮ ಭಾಂದವ್ಯ ಹೊಂದಿದ್ದರು.

ಮೃತರು 3 ಪುತ್ರರಾದ  ಶಿವರಾಮ್,ದಾಮೋಧರ್, ಪಡ್ಯೋಡಿಗುತ್ತು ಮಾಗಣೆ ಗುರಿಕಾರ ಅಶೋಕ್, 2 ಪುತ್ರಿಯರಾದ ಶೋಭಾ,ಉಷಾ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಹಾಗೂ ಪ್ರಮುಖರು, ಊರವರು ಮೃತರ ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.