ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ ತಾಲೂಕು ಸಮಿತಿಯಿಂದ ಪ್ರತಿಭಟನೆ

ಕಟ್ಟಡ ಕಾರ್ಮಿಕರ ಆಹಾರ ಕಿಟ್ ವಿತರಣೆಯಲ್ಲಿ ಶಾಸಕರು ರಾಜಕೀಯ ನಡೆಸಿದ್ದಾರೆ – ಕೆ.ವಸಂತ ಬಂಗೇರ

ಬೆಳ್ತಂಗಡಿ: ಕಟ್ಟಡ ಕಾರ್ಮಿಕರ ಕಿಟ್ ವಿತರಣೆಯಲ್ಲಿ ಶಾಸಕ ಹರೀಶ್ ಪೂಂಜರಿಂದ ಕಾರ್ಮಿಕರಿಗೆ ದ್ರೋಹವಾಗಿದೆ ಹಾಗೂ ಮಂಡಳಿಯ ಹಣದಲ್ಲಿ ರಾಜಕೀಯ ನಡೆಸಿದ್ದಾರೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ರವರು  ಆರೋಪಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತಾನಾಡಿದರು.

ಸರಕಾರ ಇಂದು ಕಾರ್ಮಿಕರ ಬದುಕಿನ ಜೊತೆ ಆಟವಾಡುತ್ತಿದೆ, ವಿಪರೀತ ಬೆಲೆ ಏರಿಕೆಯ ಜೊತೆ ಕೆಲಸವೂ ಇಲ್ಲದೆ ಕಷ್ಟ ಪಡುವ ಜನರ ಬದುಕಿನ ನಾಶ ಮಾಡಲು ಹೊರಟ ಸರಕಾರದ ವಿರುದ್ದ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸಿ, ಕಾರ್ಮಿಕರಿಗೆ ನ್ಯಾಯ ಕೊಡಿಸುವುದಾಗಿ ತಿಳಿಸಿದರು.

ದ.ಕ. ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ ಬಿ.ಎಂ.ಭಟ್ ಮಾತನಾಡಿ, ಕೊರೋನಾ ಲಾಕ್‌ಡೌನ್ ಸಮಸ್ಯೆಯಿಂದ ಕೆಲಸ ಇಲ್ಲದೆ ಬಳಲುತ್ತಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಅವರ ಶ್ರಮದಿಂದಲೇ ಶೇಖರವಾದ ಮಂಡಳಿಯ ನಿಧಿಯಿಂದ ತಲಾ ರೂ.3000 ನಗದು ಹಾಗೂ ಕಿಟ್ ಮೂಲಕ ಆಹಾರ ಸಾಮಗ್ರಿಗಳು ಮತ್ತು ರಕ್ಷಣಾ ಕಿಟ್ ನೀಡಲು ತೀರ್ಮಾನವಾಗಿದ್ದರೂ ಬೆಳ್ತಂಗಡಿಯಲ್ಲಿ ಬಿಜೆಪಿ ಪಕ್ಷ ನಡೆಸಿದ ರಾಜಕೀಯದ ಪರಿಣಾಮ ಸಾಬೂನು, ಸಾನಿಟೈಸರ್, ಮಾಸ್ಕುಗಳನ್ನ ಮಾತ್ರಾ ಕಾರ್ಮಿಕ ಇಲಾಖೆಯು ನ್ಯಾಯಾದೀಶರ ಮೂಲಕ ನೀಡಿದೆ. ಹಾಗೂ ಆಹಾರ ಕಿಟ್ಟುಗಳನ್ನು ಬೆಳ್ತಂಗಡಿ ಶಾಸಕರು ನೀಡುವುದೆಂದು ಅದನ್ನು ರಾಜಕೀಯಗೊಳಿಸಿ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರಕಾರದಿಂದ ದ್ರೋಹವಾಗುವಂತೆ ಮಾಡಲಾಗಿದೆ ಎಂದರು.

ಕಾರ್ಮಿಕರಿಗೆ ಕಳೆದ ಎರಡು ವರ್ಷಗಳಿಂದ ಯಾವುದೇ ಸವಲತ್ತು  ಬಿಡುಗಡೆ ಆಗಿಲ್ಲ ಹಾಗೂ ಇದೀಗ ಈ ವರ್ಷ 3000 ರೂ ಬಿಡುಗಡೆಗೊಳಿಸಿದ್ದರೂ, ಇನ್ನೂ ಹೆಚ್ಚಿನ ಕಾರ್ಮಿಕರ ಖಾತೆಗೆ ಹಣ ಬಂದು ತಲುಪಿಲ್ಲ, ಇದನ್ನು ತಕ್ಷಣ ನೀಡಬೇಕು ಮತ್ತು ಆಹಾರದ ಕಿಟ್‌ನ್ನೂ ಎಲ್ಲರಿಗೂ ಒದಗಿಸಬೇಕು ಎಂದು  ಆಗ್ರಹಿಸಿ  ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ನೀಡಲಾಯಿತು.
ಸಂಘದ ತಾಲೂಕು ಅದ್ಯಕ್ಷ ನಾರಾಯಣ ಕೈಕಂಬ, ಕಾರ್ಯದರ್ಶಿ ರಾಮಚಂದ್ರ, ಕಟ್ಟಡ ಕಾರ್ಮಿಕ ಮುಖಂಡರಾದ ಧನಂಜಯ ಗೌಡ, ವಸಂತ ಪಟ್ರಮೆ, ಜನಾರ್ಧನ ಆಚಾರ್ಯ, ಕಾರ್ಮಿಕ ಮುಖಂಡರಾದ ಜಯರಾಮ ಮಯ್ಯ, ನೆಬಿಸಾ, ಜಯಶ್ರೀ, ಪುಷ್ಪಾ, ಅದಿತಿ, ಮೊದಲಾದವರು  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.