ರೋಟರಿ ಕ್ಲಬ್ ವತಿಯಿಂದ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿಗೆ 15 ಕಂಪ್ಯೂಟರ್ ಕೊಡುಗೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ-ಮಡಂತ್ಯಾರು, ರೋಟರಿ ಕ್ಲಬ್ ಮಂಗಳೂರು ಮಿಡ್ ಟೌನ್, ರೋಟರಿ ಕ್ಲಬ್ ಮಂಗಳೂರು ಡೌನ್ ಟೌನ್, ರೋಟರಿ ಕ್ಲಬ್ ಮಂಗಳೂರು ಸೀ ಸೈಡ್ ಹಾಗೂ ಪ್ರಖ್ಯಾತ ಕೋಗ್ನಿಸೆಂಟ್ ಕಂಪೆನಿ ಇವುಗಳ ಪ್ರಾಯೋಜಕತ್ವದಲ್ಲಿ, ರೋಟರಿ ಜಿಲ್ಲೆ 3181ರ ನಿಯೋಜಿತ ಗವರ್ನರ್ ಎಚ್.ಆರ್.ಕೇಶವ್ ರವರ ನೇತೃತ್ವದಲ್ಲಿ,ರೋಟರಿ ಸಹಕಾರಿತ ಯೋಜನೆಯಡಿಯಲ್ಲಿ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ರೂ. 4,50,೦೦೦ ಮೌಲ್ಯದ 15 ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ  ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ರೊ| ಧನಂಜಯ ರಾವ್, ನಿಕಟಪೂರ್ವ ಕಾರ್ಯದರ್ಶಿ ಶ್ರೀಧರ ಕೆ.ವಿ, ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿ ಅಬೂಬಕ್ಕರ್, ಶ್ರೀಕಾಂತ ಕಾಮತ್, ಡಾ| ಶಶಿಧರ ಡೋಂಗ್ರೆ, ರಕ್ಷಾ ರಾಘ್ನೇಶ್, ಮಂಗಳೂರು ರೋಟರಿ ಕ್ಲಬ್ ಡೌನ್ ಟೌನ್‌ನ ಪೂರ್ವಾಧ್ಯಕ್ಷ ಸೂರಜ್ ಹೆಬ್ಬಾರ್, ರೋಟರಿ ಕ್ಲಬ್ ಮಿಡ್ ಟೌನ್ ಪೂರ್ವಾಧ್ಯಕ್ಷ ರಾಧಾಕೃಷ್ಣ ಹೆಬ್ಬಾರ್, ಸುರೇಶ್ ಕುಂದರ್, ರಾಜ್ ಮೋಹನ್ ಭಂಡಾರಿ, ರೋಟರಿ ಕ್ಲಬ್ ಸೀ ಸೈಡ್ ಅಧ್ಯಕ್ಷ  ಅಶೋಕ್ ಕುಮಾರ್, ಪೂರ್ವಾಧ್ಯಕ್ಷ  ಸುರೇಶ್, ಕಾರ್ಯದರ್ಶಿ ಹೀರಾಚಂದ್, ಮಡಂತ್ಯಾರು ರೋಟರಿ ಕ್ಲಬ್  ಅಧ್ಯಕ್ಷ  ಕಾಂತಪ್ಪ ಗೌಡ, ಪೂರ್ವಾಧ್ಯಕ್ಷ  ಜಯಂತ ಶೆಟ್ಟಿ, ಕಾರ್ಯದರ್ಶಿ ಮಾಕ್ಸಿಮ್ ಅಲ್ಬುಕರ್ಕ್, ಕಾಲೇಜು ಪ್ರಾಂಶುಪಾಲಡಾ| ಆಂಟೊನಿ ಟಿ.ಪಿ, ಉಪನ್ಯಾಸಕರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.