ನಾಪತ್ತೆ ಯಾಗಿದ್ದ ರೆಖ್ಯ ಗ್ರಾಮದ ಮಹಿಳೆಯ ಮೃತ ದೇಹ ಎಂಜಿರ ನದಿ ಬದಿ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

 

ಬೆಳ್ತಂಗಡಿ: ತೋಟದಲ್ಲಿ ನೆಲನೆಲ್ಲಿ ಗಿಡ ತೆಗೆದು ನದಿಯಲ್ಲಿ ತೊಳೆಯಲು ಹೋಗಿ ನದಿಗೆ ಜಾರಿ ಬಿದ್ದು ,ನಾಪತ್ತೆಯಾಗಿದ್ದ ಮಹಿಳೆಯ ಮೃತ ದೇಹ ಅವರ ಮನೆಯಿಂದ 1 ಕಿ.ಮೀ ದೂರದ ಎಂಜಿರ ಎಂಬಲ್ಲಿ ನದಿ ಬದಿಯಲ್ಲಿ ಆ.1 ರಂದು ಬೆಳಗ್ಗೆ ಪತ್ತೆ ಯಾಗಿದೆ.

ರೆಖ್ಯ ಗ್ರಾಮದ ಉನ೯ಡ್ಕ ನಿವಾಸಿ ಯು. ಆರ್. ಸುಂದರ ಗೌಡ, ಎಂಬವರ ಪತ್ನಿ ಶ್ರೀಮತಿ ಶಕುಂತಲಾ
(57ವ ) ಅವರು ಪಿತ್ತ ಖಾಯಿಲೆ ಇರುವ ಕಾರಣ ತಲೆ ಸುತ್ತುವಿಕೆ ಇದ್ದುದರಿಂದ ನಾಟಿ ಔಷಧಿಯಾಗಿ ನೆಲನೆಲ್ಲಿ ಯನ್ನು ಕಷಾಯವಾಗಿ ಸೇವಿಸಲು ಜು.31ರಂದು ಬೆಳಿಗ್ಗೆ ತೋಟಕ್ಕೆ ಹೋದವರು ನಂತರ ನಾಪತ್ತೆ ಯಾಗಿದ್ದರು.
ಮನೆಯ ಹುಡುಕಾಡಿದಾಗ ತೋಟದ ಹೊಳೆಯ ಬದಿ ಚಪ್ಪಲಿ ಮತ್ತು ಕೋಡೆ ಪತ್ತೆ ಯಾಗಿತ್ತು.
ಶಕುಂತಲ ಅವರು ಆಕಸ್ಮಿಕವಾಗಿ ಕಾಲು
ಜಾರಿ ನದಿ ನೀರಿಗೆ ಬಿದ್ದು ಕಾಣೆಯಾಗಿದ್ದಾರೆ ಎಂದು ಸಂಶಯ ವ್ಯಕ್ತಪಡಿಸಿ ಸುಂದರ ಗೌಡರು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಿದ್ದರು.
ಸ್ಥಳಕ್ಕೆ ಧಮ೯ಸ್ಥಳ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಪಿಲಿಕುಳದಿಂದ ಮುಳುಗುಗಾರರು ಬಂದು ಸಂಜೆ ತನಕ ಹುಡುಕಾಟ ನಡೆಸಿದ್ದು ಆ.1ರಂದು ಬೆಳಗ್ಗಿನಿಂದ ಶೋಧ ಕಾರ್ಯ ಮುಂದುವರಿಸಿದಾಗ ಮೃತದೇಹ ಎಂಜಿರ ಸಮೀಪ ನದಿ ಬದಿ ಪತ್ತೆಯಾಗಿದೆ. ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಾಗಿಸಿಕೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.