ತೋಟಕ್ಕೆ ನೆಲನೆಲ್ಲಿ ಗಿಡ ತೆಗೆದು ನದಿಯಲ್ಲಿ ತೊಳೆಯಲು ಹೋದ ಮಹಿಳೆ ನದಿಗೆ ಜಾರಿ ಬಿದ್ದು, ನಾಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ತೋಟದಲ್ಲಿ ನೆಲನೆಲ್ಲಿ ಗಿಡ ತೆಗೆದು ನದಿಯಲ್ಲಿ ತೊಳೆಯಲು ಹೋದ ಮಹಿಳೆ ನದಿಗೆ ಜಾರಿ ಬಿದ್ದು, ನಾಪತ್ತೆಯಾಗಿರುವ ಘಟನೆ ಜು.31ರಂದು ರೆಖ್ಯ ಗ್ರಾಮದಲ್ಲಿ ನಡೆದಿದ್ದು, ಅಗ್ನಿ ಶಾಮಕದಳ ಹಾಗೂ ಮುಳುಗು ತಜ್ಞರು ನದಿಯಲ್ಲಿ ಇವರ ಹುಡುಕಾಟವನ್ನು ತೀವ್ರ ಗೊಳಿಸಿದ್ದಾರೆ.


ರೆಖ್ಯ ಗ್ರಾಮದ ಉನ೯ಡ್ಕ ನಿವಾಸಿ ಯು. ಆರ್. ಸುಂದರ ಗೌಡ, ಎಂಬವರ ಪತ್ನಿ ಶ್ರೀ ಮತಿ ಶಕುಂತಳಾ(57ವ ) ನದಿಗೆ ಬಿದ್ದು, ನಾಪತ್ತೆ ಯಾದವರು.
ಸುಂದರ ಗೌಡ ಅವರು ಧಮ೯ಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ತನ್ನ ಪತ್ನಿ ಶ್ರೀಮತಿ ಶಕುಂತಲಾ ರವರಿಗೆ ಹಲವು ಸಮಯದಿಂದ ಪಿತ್ತ ಖಾಯಿಲೆ ಇರುವ ಕಾರಣ ತಲೆ ಸುತ್ತುವಿಕೆ ಇದ್ದುದ ರಿಂದ ಅವರು ನಾಟಿ ಔಷಧಿಯಾಗಿ ನೆಲನೆಲ್ಲಿ ಯನ್ನು ಕಷಾಯವಾಗಿ ಸೇವಿಸುತ್ತಿದ್ದರು. ಅದರಂತೆ ಜು.31ರಂದು ಬೆಳಿಗ್ಗೆ 6 ಗಂಟೆ ಸಮಯಕ್ಕೆ ಅವರು ನೆಲನೆಲ್ಲಿಯನ್ನು ತರಲು ತೋಟಕ್ಕೆ ಹೋದವರು ಬೆಳಿಗೆ 6.30 ಗಂಟೆ ಆದರೂ ಮನೆಗೆ ವಾಪಾಸು ಬಾರದೇ ಇದ್ದುದರಿಂದ, ನಾನು ಹಾಗೂ ಮಗ ಅಭಿಷೇಕ್‌ ಮನೆಯ ಸುತ್ತಮುತ್ತ ತೋಟದ ಬಳಿ ಹುಡುಕಾಡಿದಾಗ ತೋಟದ ಬಳಿ ಇರುವ ಹೊಳೆಯ ಬದಿ ಪತ್ನಿ ಶಕುಂತಳಾ ಅವರ ಚಪ್ಪಲಿ ಪತ್ತೆ ಯಾಗಿರುವುದಾಗಿ ತಿಳಿಸಿದ್ದಾರೆ.


ಶಕುಂತಲ ನೆಲನೆಲ್ಲಿ ತೆಗೆದ ಬಳಿಕ ಅದನ್ನು ತೊಳೆಯಲು ಹೊಳೆಗೆ ಹೋದವರು ಆಕಸ್ಮಿಕವಾಗಿ ಕಾಲುಜಾರಿ ನದಿ ನೀರಿಗೆ ಬಿದ್ದು ಕಾಣೆಯಾಗಿರುವ ಸಾಧ್ಯತೆ ಇರುತ್ತದೆ ಎಂದು ದೂರಿನಲ್ಲಿ ಸಂಶಯ  ವ್ಯಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪಿಲಿಕುಳದಿಂದ ಮುಳುಗುಗಾರರು ಬಂದು ಸಂಜೆ ತನಕ ಹುಡುಕಾಡಿದರೂ ಸಿಗಲಿಲ್ಲ. ಆ.1ರಂದು ಬೆಳಗ್ಗಿನಿಂದ ಶೋಧ ಕಾರ್ಯ ಮುಂದುವರಿದಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.