ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಹಿರಿಯ ಸದಸ್ಯರಾಗಿದ್ದು ಪ್ರಸ್ತುತ ಅನಾರೊಗ್ಯದಿಂದ ಬಳಲುತ್ತಿರುವ ಶ್ರೀ ಲಕ್ಷ್ಮಣ್ ಶೆಟ್ಟಿಗಾರ್ ರವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ, ಮಿತ್ರಮಂಡಳಿಯ ಮತ್ತು ವನಿತಾ ಸಮಾಜದ ವತಿಯಿಂದ ಮತ್ತು ಸದಸ್ಯರಿಂದ ಸಂಗ್ರಹಿತ ಧನ ಸಹಾಯವನ್ನು ಚಿಕಿತ್ಸೆಗಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಿತ್ರಮಂಡಳಿಯ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷರಾದ ಮೋಹನ್ ಸಾಲ್ಯಾನ್ , ಸಮಿತಿ ಸದಸ್ಯರಾದ ರಾಜೇಂದ್ರ ಕೆ ವಿ, ಮಂಜಪ್ಪ ಮೂಲ್ಯ ,ಹರೀಶ್ಚಂದ್ರ ಶೆಟ್ಟಿಗಾರ್, ಮಿತ್ರ ಮಂಡಳಿಯ ಸದಸ್ಯರುಗಳಾದ ದಿನಕರ್ ಶೆಟ್ಟಿ ಅಂಕದಳ, ಸುನಿಲ್ ಜೇಮ್ಸ್ ಅಂಚನ್, ಉಪಸ್ಥಿತರಿದ್ದರು.