ಮುಂಡಾಜೆ: ರೋಟರಿ ಸಮುದಾಯ ದಳದ ಪದಗ್ರಹಣ

ಮುಂಡಾಜೆ: ಬೆಳ್ತಂಗಡಿ ರೋಟರಿ ಕ್ಲಬ್‌ನ ಅಂಗ ಸಂಸ್ಥೆಯಾದ ಮುಂಡಾಜೆ ರೋಟರಿ ಸಮುದಾಯ ದಳದ 2021-22 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜು.30 ರಂದು ಜರುಗಿತು.

ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆಯಲ್ಲಿ ತೊಡಗಿದವರಿಗೆ ಸವಾಲುಗಳಿವೆ, ಸವಾಲುಗಳನ್ನು ಎದುರಿಸಿ ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಸಂಘ-ಸಂಸ್ಥೆಗಳು ಗೌರವಕ್ಕೆ ಅರ್ಹವಾಗಿರುತ್ತವೆ ಎಂದು ಹೇಳಿದರು.

ಕಾರ್ಯದರ್ಶಿ ಅಬೂಬಕರ್, ನಿಕಟಪೂರ್ವ ಅಧ್ಯಕ್ಷ ಬಿಕೆ ಧನಂಜಯ ರಾವ್, ನಿರ್ದೇಶಕ ಕಜೆ ವೆಂಕಟೇಶ್ವರ ಭಟ್, ಆರ್.ಸಿ.ಸಿ. ಅಧ್ಯಕ್ಷ ಪಿ.ಸಿ. ಸೆಬಾಸ್ಟಿಯನ್, ನಿಕಟಪೂರ್ವ ಕಾರ್ಯದರ್ಶಿ ವಿಘ್ನೇಶ್ ಪ್ರಭು ಉಪಸ್ಥಿತರಿದ್ದರು.

ಕೋವಿಡ್ ಸಂದರ್ಭ ವಿಶೇಷ ಕರ್ತವ್ಯ ನಿರ್ವಹಿಸಿದ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಕಾವ್ಯಾ ವೈಪನಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಾ ಎ.ಎಸ್., ಕೋವಿಡ್ ವಾರಿಯರ್ ಆಗಿ ಸ್ವಯಂ ಪ್ರೇರಣೆಯಿಂದ ದುಡಿದ ರಮೇಶ್, ಸಮಾಜಸೇವಕ ಗುರುರಾಜ ಪ್ರಭು ರವರನ್ನು ಗೌರವಿಸಲಾಯಿತು.

ಆರ್.ಸಿ.ಸಿ. ಯ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ಎ. ಹೆಬ್ಬಾರ್ ಸ್ವಾಗತಿಸಿದರು. ಅವನಿ ಹೆಬ್ಬಾರ್ ಹಾಗೂ ಗೋಪಾಲಕೃಷ್ಣ ಜೋಷಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಹರಿಪ್ರಸಾದ್ ಭಟ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.