ಸವಣಾಲು ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನ ಜೀರ್ಣೊದ್ಧಾರಕ್ಕೆ ಮುನ್ನುಡಿ

ಸವಣಾಲು: ಇಲ್ಲಿಯ ಬೈರವಕಲ್ಲು ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಸ್ಥಾನದ ಜೀರ್ಣೊದ್ಧಾರ ಮಾಡುವರೇ ಮುನ್ನುಡಿ ಹಾಕಲಾಗಿದ್ದು ನೂತನ ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್‌ನ ಮೂಲಕ ಜೀರ್ಣೊದ್ಧಾರ ಪ್ರಾರಂಭಿಸಲಾಗುವುದು ಎಂದು ಟ್ರಸ್ಟ್‌ನ ಅಧ್ಯಕ್ಷ ಚಿನ್ನಯ್ಯ ಮಲೆಕುಡಿಯ ಮತ್ತು ಕಾರ್ಯದರ್ಶಿ ಜಯಾನಂದ ಪಿ. ಪಿಲಿಕಲ ಹೇಳಿದರು.

ಜು.31 ರಂದು ದೈವಸ್ಥಾನದ ವಠಾರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸವಣಾಲು ಗ್ರಾಮದ ಬೈರಕಲ್ಲು ಎಂಬಲ್ಲಿ ಸುಮಾರು 700 ವರ್ಷಗಳ ಹಿಂದೆ ಬಂಡೆ ಕಲ್ಲಿನ ಮೇಲೆ ನೆಲೆ ನಿಂತಿರುವ ಕ್ಷೇತ್ರವೇ ಶ್ರೀ ಕ್ಷೇತ್ರ ಬೈರವ ಇಲ್ಲಿ ಮಲೆಕುಡಿಯ ಸಮಾಜ ಬಾಂಧವರ ನೇತೃತ್ವದಲ್ಲಿ ವೈಭವಯುತವಾಗಿ ದೈವದ ಕಾರ್ಯ ನಡೆಯುತ್ತಾ ಇತ್ತು.

ಹಲವಾರು ವರುಷಗಳಿಂದ ಯಾವುದೇ ದೈವದ ಕಾರ್ಯ ನಡೆಯದೇ ಸಾಂಪ್ರದಾಯಿಕವಾಗಿ ದೈವದ ಪರ್ವ ಸೇವೆ ನಡೆಯುತ್ತಾ ಬರುತ್ತಿತ್ತು. ಕಳೆದ ಐದು ವರ್ಷಗಳಿಂದ ಇದನ್ನು ಜೀರ್ಣೊದ್ಧಾರ ಮಾಡಬೇಕು ಎಂಬ ಸಂಕಲ್ಪದಿಂದ ಮಲೆಕುಡಿಯ ಸಮಾಜದ ಈ ದೈವಸ್ಥಾನಕ್ಕೆ ಸಂಬಂಧಿಸಿದ ೨೮ ಮನೆಗಳವರು ಪ್ರಾರಂಭಿಸಿರುತ್ತೇವೆ.

ಈ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಅಂದಾಜು ರೂಪಾಯಿ. 1.5 ಕೋಟಿ ವೆಚ್ಚದಲ್ಲಿ ಮಾಡಲು ನಿರ್ಧರಿಸಿದ್ದು ಜನಪ್ರತಿನಿಧಿಗಳು, ಊರ ಎಲ್ಲಾ ಸಮಾಜ ಬಾಂಧವರು, ಸಂಘ ಸಂಸ್ಥೆಗಳು, ಇಲಾಖಾ ವತಿಯಿಂದ ಈ ಜೀರ್ಣೊದ್ಧಾರ ಕಾರ್ಯ ಮಾಡುವರೇ ಎಲ್ಲಾ ಕಾರ್ಯವನ್ನು ಪ್ರಾರಂಭಿಸಿರುತ್ತೇವೆ.

ಹಿಂದಿನ ಕಾಲದಲ್ಲಿ ನಡೆಯುತ್ತಿದ್ದು ಸಂಪ್ರಾದಾಯ ದೈವಸ್ಥಾನ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಬದ್ಧರಾಗಿದ್ದು ಈ ವ್ಯವಸ್ಥೆಗಳಾಗಿ ದೈವಸ್ಥಾನಕ್ಕೆ ಸಂಬಂಧಿಸಿದ 28 ಮನೆಗಳ ಸದಸ್ಯರನ್ನೊಳಗೊಂಡ ಶ್ರೀ ಬೈರವ ಮೂಜಿಲ್ನಾಯ ಪುರುಷರಾಯ ದೈವಗಳ ಸೇವಾ ಟ್ರಸ್ಟ್ ರಚಿಸಲಾಗಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಸಾಂತಪ್ಪ ಮಲೆಕುಡಿಯ, ಗೌರವಾಧ್ಯಕ್ಷ ಮಹಾಬಲ ಮಲೆಕುಡಿಯ, ಕೋಶಾಧಿಕಾರಿ ಸುಂದರ ಮಲೆಕುಡಿಯ, ಗುತ್ತು ಮನೆಯ ಮಾಲಕ ರಾಮಣ್ಣ ಮಲೆಕುಡಿಯ, ಜೊತೆ ಕಾರ್ಯದರ್ಶಿ ಕುಸುಮಾಧರ ಮೊದಲಾದವರು ಹಾಜರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.