ನೆರಿಯ: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಶ್ರಮದಾನದ ಮೂಲಕ ಚರಂಡಿ ದುರಸ್ಥಿ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನೆರಿಯ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ನೆರಿಯ ಗ್ರಾಮದ ಆಲಂಗಾಯಿ ಆಶ್ರಮ ಶಾಲೆ ಹಾಗೂ ಪರಿಶಿಷ್ಟ ಪಂಗಡದ ಕಾಲೋನಿಗೆ ಹೋಗುವ ರಸ್ತೆಯ ಚರಂಡಿ ಮೇಲೇಯೇ ಮಳೆ ನೀರು ಹರಿದಾಡಿ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು.

ಇದನ್ನು ಮನಗಂಡ ಆಲಂಗಾಯಿ ಯುವಶಕ್ತಿ ಫ್ರೆಂಡ್ಸ್ ಸದಸ್ಯರಿಂದ ಶ್ರಮದಾನದ ಮೂಲಕ ರಸ್ತೆ ಬದಿಯ ಚರಂಡಿ ದುರಸ್ಥಿಗೊಳಿಸಿ, ರಸ್ತೆಯಲ್ಲಿ ನಿಂತಿರುವ ನೀರನ್ನು ಬಿಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಯುವಶಕ್ತಿ ಫ್ರೆಂಡ್ಸ್‌ನ ಸುಧಾಕರ ಆಲಂಗಾಯಿ, ರೂಪೇಶ್, ನೀತೀಶ್, ಅವಿನಾಶ್, ಅಶ್ವಥ್, ಸಚಿನ್, ಸಂಪತ್ ಲೀಲಾಧರ್ ಎ.ಎಸ್, ರಂಜಿತ್, ಉಮೇಶ್, ಲಕ್ಷಣ್, ಪ್ರಕಾಶ್, ಸೋಮಶೇಖರ, ಮೋಹನ್, ವಿಠಲ, ಹರಿಪ್ರಸಾದ್, ಪುಷ್ಪ, ವನಿತಾ, ಚಂದ್ರಾವತಿ, ಸವಿತಾ, ಸ್ಥಳೀಯರು, ಮಹಿಳೆಯರು, ಊರವರು ಉಪಸ್ಥಿತರಿದ್ದು ಶ್ರಮದಾನ ಕಾರ್ಯದಲ್ಲಿ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.