ಹೋಲಿ ರಿಡೀಮರ್ ಶಾಲೆಯ ಮುಖ್ಯಶಿಕ್ಷಕ ವಂ.ಫಾ.ಜೇಸನ್ ಮೋನಿಸ್‌ರವರಿಗೆ ಬೀಳ್ಕೊಡುಗೆ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಂಟ್ವಾಳ ತಾಲೂಕಿನ ಲೊರೆಟ್ಟೊ ಶಿಕ್ಷಣ ಸಂಸ್ಥೆಗೆ ವರ್ಗಾವಣೆಗೊಂಡ ವಂ.ಫಾ.ಜೇಸನ್ ಮೋನಿಸ್‌ರವರಿಗೆ ಜು.30ರಂದು ಬೀಳ್ಕೊಡುಗೆ ಸಮಾರಂಭ ಜರುಗಿತು.
ಮಕ್ಕಳ ಬಗ್ಗೆ ಅಪಾರ ಕಾಳಜಿ, ಪ್ರೀತಿ, ಜವಾಬ್ಧಾರಿಯನ್ನು ಹೊಂದಿ ಸ್ನೇಹ ಮನೋಭಾವದಿಂದ ಶಾಲೆಯನ್ನು ಮುನ್ನಡೆಸಿದ ಗುರುಗಳಿಗೆ ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಮಮತಾ ಶೆಟ್ಟಿ ಶುಭ ಹಾರೈಸಿದರು.
ಶಾಲಾ ಸಂಚಾಲಕ ವಂ.ಫಾ. ಜೋಸೆಫ್ ಆಲ್ಫೋನ್ಸ್ ಕಾರ್ಡೋಜ, ಸಹ ಶಿಕ್ಷಕಿ ಬ್ಲೆಂಡಿನ್ ರೋಡ್ರಿಗಸ್, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಸುಭಾಷಿಣಿ ಪಾವಡೆಪ್ಪ ದೊಡಮನಿಯವರು ಗುರುಗಳ ಮುಂದಿನ ಸೇವಾ ಜೀವನಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಅಲೋಶಿಯಸ್ ಲೋಬೊ ಮತ್ತು ಶಿಕ್ಷಕ ರಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಶಾಂತಿ ಪಿರೇರಾ ರವರು ಅಭಿವಂದನಾ ಪತ್ರವನ್ನು ವಾಚಿಸಿದರು. ಶಿಕ್ಷಕಿಯರಾದ ಕು. ಕವಿತಾ ಸ್ವಾಗತಿಸಿ, ಸರಿತಾ ರೊಡ್ರಿಗಸ್ ಕಾರ್ಯಕ್ರಮನಿರೂಪಿಸಿ, ಶಿಕ್ಷಕ-ರಕ್ಷಕ ಸಂಘದ ಸದಸ್ಯೆ ಶರ್ಮಿಳಾ ಮೋರಸ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.