ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವತಿಯಿಂದ ಇತ್ತೀಚೆಗೆ ನಿಧನರಾದ ಕುಡ್ತುಲಾಜೆ ದಿ| ಗೋಪಾಲಕೃಷ್ಣ ಭಟ್ ರವರಿಗೆ ಶ್ರದ್ದಾಂಜಲಿ ಸಭೆಯು ಜು.28ರಂದು ಸೌತಡ್ಕ ಗಣೇಶ ಕಲಾ ಭವನದಲ್ಲಿ ಜರುಗಿತು.
ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಪ್ರಾರಂಭದಲ್ಲಿ ನಿತ್ಯಪೂಜೆ, ನೈವೇದ್ಯ ಸೇವೆಯನ್ನು ಪ್ರಾರಂಭಿಸಿ, ದೇವಸ್ಥಾನ ಅಭಿವೃದ್ಧಿ ಹೊಂದುವಂತೆ ಮಾಡಿದ ಕುಡ್ತುಲಾಜೆ ಗೋಪಾಲಕೃಷ್ಣ ಭಟ್ ರವರಿಗೆ ಕೊಕ್ಕಡದ ಹಿರಿಯ ವೈದ್ಯ ಡಾ| ಮೋಹನ್ದಾಸ್ ಗೌಡ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್, ಮಾಜಿ ಅಧ್ಯಕ್ಷ ಕೃಷ್ಣ ಭಟ್ ರವರು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾವಡಪ್ಪ ದೊಡಮನಿ, ಕೊಕ್ಕಡ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷ ಈಶ್ವರ್ ಭಟ್, ಕೊಕ್ಕಡ ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ, ಕುಡ್ತುಲಾಜೆ ದಿ| ಗೋಪಾಲಕೃಷ್ಣ ಭಟ್ರವರ ಪತ್ನಿ ಸರಸ್ವತಿ, ಪುತ್ರ ಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗ್ರಾ.ಪಂ. ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪುರಂದರ ಗೌಡ ಕಡೀರ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಧನ್ಯವಾದವಿತ್ತರು.