ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಹುಟ್ಟುಹಬ್ಬ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಸೇವಾಭಾರತಿ ಸಂಸ್ಥಾಪಕರಾದ  ಕೆ. ವಿನಾಯಕ ರಾವ್ ರವರ 51ನೇ ವರ್ಷದ ಹುಟ್ಟುಹಬ್ಬವನ್ನು ಜು.29 ರಂದು ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಆಚರಿಸಲಾಯಿತು.

ಕೆ. ವಿನಾಯಕ ರಾವ್ ರವರು ಮಾತನಾಡಿ, ಸೇವಾಧಾಮದಲ್ಲಿರುವ ದಿವ್ಯಾಂಗರ ಕಷ್ಟನಷ್ಟದ ಜೀವನವನ್ನು ಹತ್ತಿರದಿಂದ ಗಮನಿಸುವ ಜೊತೆಗೆ, ಅವರೊಂದಿಗೆ ಬೆರೆತು ಹುಟ್ಟುಹಬ್ಬ ಆಚರಿಸುವುದರಿಂದ ಅರ್ಥಪೂರ್ಣವಾಗುತ್ತದೆ ಎಂದರು. ಸ್ವತ: ಬೆನ್ನುಮೂಳೆ ಮುರಿತಗೊಂಡು ಅನುಭವಿಸಿದ ಜೀವನದ ನೋವುಗಳನ್ನು ಮೆಲುಕು ಹಾಕಿದ ಅವರು, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ  ಕೃಷ್ಣ ಭಟ್ ರವರು ಸೇವಾಧಾಮಕ್ಕೆ ನೀಡುತ್ತಿರುವ ನಿರಂತರ ಸಹಕಾರವನ್ನು ಸ್ಮರಿಸಿದರು. ಬಳಿಕ ತಮ್ಮ ನಾಲ್ಕು ಚಕ್ರದ ಸ್ಕೂಟರ್ ಅನ್ನು ಸೇವಾಧಾಮದ ಫಲಾನುಭವಿಗಳ ಉಪಯೋಗಕ್ಕಾಗಿ ಸಮರ್ಪಿಸಿದರು.

ಈ ಸಂದರ್ಭ ಸೇವಾಧಾಮದ ಮೆಂಟರ್ ಬಾಲಕೃಷ್ಣ, ಕೃಷ್ಣ ಭಟ್, ಶಿಬಿರಾರ್ಥಿಗಳು, ಅವರ ಪೋಷಕರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಸೇವಾಧಾಮದ ಉಸ್ತುವಾರಿ ಕೇಶವ. ಎಮ್, ಕನ್ಯಾಡಿ ಸ್ವಾಗತಿಸಿ, ನಿರೂಪಿಸಿದರು. ಸೇವಾಧಾಮದ  ಸಂಚಾಲಕ ಕೆ. ಪುರಂದರ ರಾವ್ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.