ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಲಾರಿಯಲ್ಲಿ ಆಕಸ್ಮಿಕವಾಗಿ ಕಂಡ ಬೆಂಕಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಮಂಗಳೂರಿನಿಂದ ಹಾಸನ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಜು.29 ರಂದು ರಾತ್ರಿ 2.30 ರ ವೇಳೆ ನಡೆದಿದೆ.

KA-44-192  ಸಂಖ್ಯೆಯ ಮಹಾಲಕ್ಷ್ಮಿ ಲಾರಿಯಲ್ಲಿ ಮಂಗಳೂರಿನಿಂದ ಹಾಸನ ಕಡೆಗೆ  ಕಲ್ಲಿದ್ದಲು  ಸಾಗಾಟ ಮಾಡಲಾಗುತ್ತಿದ್ದು,  ಚಾರ್ಮಾಡಿ ಘಾಟಿ ತಲುಪುವ ವೇಳೆ ತಡರಾತ್ರಿಯಾಗಿರುವ ಹಿನ್ನೆಲೆಯಲ್ಲಿ ಲಾರಿಯನ್ನು ಚಾರ್ಮಾಡಿ ಚೆಕ್ ಪೊಸ್ಟ್‌ನಲ್ಲಿ ನಿಲ್ಲಿಸಿದ್ದರು. ಚಾಲಕ ಸೇರಿದಂತೆ ಲಾರಿಯಲ್ಲಿದ್ದ ಇನ್ನೂ ಮೂವರು ಗಾಡಿಯೊಳಗೆ ನಿದ್ರಿಸುತ್ತಿರುವ ವೇಳೆ, ವಾಹನದಲ್ಲಿದ್ದ  ಕಲ್ಲಿದ್ದಲಿನ ಅಡಿಭಾಗದಲ್ಲಿ  ಆಕಸ್ಮಿಕವಾಗಿ  ಬೆಂಕಿ ಕಾಣಿಸಿಕೊಂಡಿದೆ.

ಇದನ್ನು ಮನಗಂಡ  ಚೆಕ್‌ಪೊಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಧರ್ಮಸ್ಥಳ ಪೊಲೀಸರು,  ಕೂಡಲೇ ಲಾರಿಯಲ್ಲಿದ್ದ ನಾಲ್ವರನ್ನೂ ಎಬ್ಬಿಸಿ, ರಕ್ಷಣೆ ಮಾಡಿದ್ದಾರೆ. ಜೊತೆಗೆ ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕದಳ ಹಾಗೂ ಧರ್ಮಸ್ಥಳ ಪೊಲೀಸರ ಸೂಕ್ತ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದ್ದು, ಮುಂದಾಗಬಹುದಾದಂತಹ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣಾಧಿಕಾರಿ ಎಂ.ಗೋಪಾಲ್,ಪ್ರಮುಖ ಅಗ್ನಿಶಾಮಕ ಕೃಷ್ಣ ನಾಯ್ಕ, ಚಾಲಕ ರತನ್, ಮಾರುತಿ ಟಿ.ಅರ್,ಚಾಕೋ.ಕೆ.ಜೆ, ವಿನೋದ್ ರವರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಕೆಲವು ಸಮಯಗಳ ಕಾಲ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.