ಸಹೋದರಿಗೆ ಹಲ್ಲೆ ನಡೆಸಿದ ಆರೋಪ: ಆರೋಪಿ ಮುಂಡಾಜೆಯ ಸತೀಶ್‌ಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಸುಮಾರು  ವರ್ಷಗಳ ಹಿಂದೆ ಮುಂಡಾಜೆಯ ವ್ಯಕ್ತಿಯೋರ್ವರು ತನ್ನ ಸಹೋದರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ಒಂದು ವರ್ಷದ ಕಠಿಣ ಕಾರಾಗ್ರಹ ಶಿಕ್ಷೆ ಪ್ರಕಟಿಸಿದೆ.
ಮುಂಡಾಜೆ ಗ್ರಾಮದ ದೇವಿಗುಡಿ ಕೂಳೂರು ನಿವಾಸಿ ಆರೋಪಿ ಸತೀಶ್ ಯಾನೆ ಸ್ಕಾರ್ಪಿಯೋ ಸತೀಶ್ ಎಂಬಾತನು ತನ್ನ ಸಹೋದರಿ ಸಜೀದಾ ಎಂಬವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕ ಆಯುಧದಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ 2013ರ ಎಪ್ರಿಲ್ 13 ರಂದು ನಡೆದಿತ್ತು.
ಈ ಬಗ್ಗೆ ಆರೋಪಿಯ ಸಹೋದರಿ ಸಜೀದಾ ಯಾನೆ ಸರಿತಾರವರ ಪತಿ ಪ್ರವೀಣ್ ಡಿ ಎಂಬವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯ ಆಗಿನ ಮುಖ್ಯ ಆರಕ್ಷಕರಾಗಿದ್ದ ಹೊನ್ನಪ್ಪ ಗೌಡ ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮೊಕದ್ದಮೆಯಲ್ಲಿ ಒಟ್ಟು 8 ಮಂದಿಯನ್ನು ಸಾಕ್ಷಿಗಳಾಗಿ ವಿಚಾರಿಸಲಾಗಿದ್ದು, ವಾದ ವಿವಾದಗಳನ್ನು ಆಲಿಸಿದ ಬೆಳ್ತಂಗಡಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಲಯದ ನ್ಯಾಯಾಧೀಶರಾದ ಸತೀಶ್ ಕೆ.ಜಿ. ಯವರು ಆರೋಪಿ ಎಸಗಿರುವ ಅಪರಾಧವು ರುಜುವಾತಾದ ನಿಟ್ಟಿನಲ್ಲಿ ಆರೋಪಿಯನ್ನು ದೋಷಿಯೆಂದು ನಿರ್ಣಯಿಸಿ ಐಪಿಸಿ ಕಲಂ 324 ರಡಿ ಅಪರಾಧಕ್ಕಾಗಿ 1 ವರ್ಷ ಕಠಿಣ ಕಾರಾಗ್ರಹ ಶಿಕ್ಷೆ, 5000/- ದಂಡ, ದಂಡ ತೆರಲು ತಪ್ಪದಲ್ಲಿ 6 ತಿಂಗಳ ಸಾದಾ ಕಾರಾಗ್ರಹ ಶಿಕ್ಷೆ ಹಾಗೂ 2000/- ದಂಡ, ತೆರಲು ತಪ್ಪಿದಲ್ಲಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ನೊಂದ ಪಕ್ಷಕಾರರಾದ ಗಾಯಾಳು ಸರಿತ ಇವರಿಗೆ ಸೂಕ್ತ ಪರಿಹಾರ ಪಡೆಯುವರೇ ಆಗಸ್ಟ್ 7ರಂದು ಮಂಗಳೂರಿನ ದ.ಕ. ಜಿಲ್ಲಾ ಕಾನೂನು ಸೇವೆಗಳು ಪ್ರಾಧಿಕಾರಕ್ಕೆ ಹಾಜರಾಗುವಂತೆ ಆದೇಶಿಸಿ ತೀರ್ಪು ಹೊರಡಿಸಿರುತ್ತಾರೆ.
ಪ್ರಕರಣದಲ್ಲಿ ಬೆಳ್ತಂಗಡಿ ಸ.ಸ. ಅಭಿಯೋಜಕರಾದ ದಿವ್ಯಾರಾಜ್ ವಾದ ಮಂಡಿಸಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.