ಕಗ್ಗತ್ತಲಲ್ಲೇ ಇದ್ದಾರೆ ಮಾಳಿಗೆಬೈಲಿನ ನಿವಾಸಿಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಅಳದಂಗಡಿ: “ಎಲ್ಪ ವರ್ಷ ಕರಿಂಡ್, ನನಲಾ ಕರೆಂಟ್ ಬತ್ತ್‌ದಿಜ್ಜಿ. ಮಾತೆರ್ಲ ಪನ್ಪೆರ್ ಕರೆಂಟ್ ಕೊರ್ಪಾಂದ್, ವೋಟ್ ಮುಗಿಬೊಕ್ಕ ಸುದ್ದಿ ಇಜ್ಜಿ. ಎಂಚಲಾ ಪುಟ್ಟುದ, ಇಂಚನೆ ಸಯಿಪುನ ನನ… ಸೋಲಾರ್ ಇತ್ತ್ಂಡಲಾ ಮರಿಯಾಲಡ್ ಒಂಜಿ ಬಲ್ಬುಲಾ ಪೊತ್ತುಜಿ.” ಇದು ಕಗ್ಗತ್ತಲಲ್ಲೇ ಬದುಕು ಕಟ್ಟಿಕೊಂಡವರ ಮನದ ಮಾತು.
ಈಗಲೂ ಕೂಡ ಚಿಮಿಣಿ ದೀಪದ ಬೆಳಕಿನಲ್ಲೇ ಅಲ್ಲಿ ಬದುಕು ಸಾಗುತ್ತಿದೆ. ಚಿಮಿಣಿ ಹೊಗೆ ತಿಂದುಕೊಂಡೇ ಇಲ್ಲಿನ ಗೃಹಿಣಿಯರ ಅಡುಗೆ ಕೆಲಸ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ!

ಹೌದು, ನಂಬಲಿಕ್ಕೆ ಅಸಾಧ್ಯವಾದರೂ ಈ ಸುದ್ದಿ ನಿಜ! ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಬಲ್ಯ, ಮಾಳಿಗೆಬೈಲು ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 30 ಕುಟುಂಬಗಳಿಗೆ ಈ ಡಿಜಿಟಲ್ ಯುಗದಲ್ಲಿಯೂ ಚಿಮಿಣಿ ದೀಪವೇ ಆಧಾರ ಎಂಬ ಸುದ್ದಿಯನ್ನು
ಅಳದಂಗಡಿ: “ಎಲ್ಪ ವರ್ಷ ಕರಿಂಡ್, ನನಲಾ ಕರೆಂಟ್ ಬತ್ತ್‌ದಿಜ್ಜಿ. ಮಾತೆರ್ಲ ಪನ್ಪೆರ್ ಕರೆಂಟ್ ಕೊರ್ಪಾಂದ್, ವೋಟ್ ಮುಗಿಬೊಕ್ಕ ಸುದ್ದಿ ಇಜ್ಜಿ. ಎಂಚಲಾ ಪುಟ್ಟುದ, ಇಂಚನೆ ಸಯಿಪುನ ನನ… ಸೋಲಾರ್ ಇತ್ತ್ಂಡಲಾ ಮರಿಯಾಲಡ್ ಒಂಜಿ ಬಲ್ಬುಲಾ ಪೊತ್ತುಜಿ.” ಇದು ಕಗ್ಗತ್ತಲಲ್ಲೇ ಬದುಕು ಕಟ್ಟಿಕೊಂಡವರ ಮನದ ಮಾತು.
ಈಗಲೂ ಕೂಡ ಚಿಮಿಣಿ ದೀಪದ ಬೆಳಕಿನಲ್ಲೇ ಅಲ್ಲಿ ಬದುಕು ಸಾಗುತ್ತಿದೆ. ಚಿಮಿಣಿ ಹೊಗೆ ತಿಂದುಕೊಂಡೇ ಇಲ್ಲಿನ ಗೃಹಿಣಿಯರ ಅಡುಗೆ ಕೆಲಸ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಡೆಯುತ್ತಿದೆ!

ಹೌದು, ನಂಬಲಿಕ್ಕೆ ಅಸಾಧ್ಯವಾದರೂ ಈ ಸುದ್ದಿ ನಿಜ! ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಲ್ಕೇರಿಮೊಗ್ರು ಗ್ರಾಮದ ಬಲ್ಯ, ಮಾಳಿಗೆಬೈಲು ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು ೩೦ ಕುಟುಂಬಗಳಿಗೆ ಈ ಡಿಜಿಟಲ್ ಯುಗದಲ್ಲಿಯೂ ಚಿಮಿಣಿ ದೀಪವೇ ಆಧಾರ ಎಂಬ ಸುದ್ದಿಯನ್ನು
ಕೇಳಿದಾಗ ‘ಸುದ್ದಿ ನ್ಯೂಸ್ ಬೆಳ್ತಂಗಡಿ’ ತಂಡಕ್ಕೆ ಅಚ್ಚರಿಯಾಗಿತ್ತು. ಹಾಗಾದರೆ ವಿದ್ಯುತ್ ಸಂಪರ್ಕವಿಲ್ಲದೇ ಬದುಕುತ್ತಿರುವ ಆ ಭಾಗದ ಜನರ ಜೀವನ ಹೇಗಿದೆ? ಈ ಕಾಲದಲ್ಲೂ ಅವರೆಲ್ಲಾ ಹೇಗೆ ಬದುಕುತ್ತಿದ್ದಾರೆ? ಇಲ್ಲಿ ವಾಸಿಸುತ್ತಿರುವ ಮಕ್ಕಳು, ಮಹಿಳೆಯರು ಮತ್ತು ವಯೋವೃದ್ಧರ ಕತೆ ಏನು? ಎಂಬೆಲ್ಲಾ ಪ್ರಶ್ನೆಗಳನ್ನು ಇಟ್ಟುಕೊಂಡು ಮಾಳಿಗೆಬೈಲಿನ ನಿವಾಸಿಗಳನ್ನು ನಮ್ಮ ತಂಡ ಮಾತನಾಡಿಸಲೆಂದು ಹೋದ ಸಂದರ್ಭದಲ್ಲಿ ಅಚ್ಚರಿ ಕಾಡಿತ್ತು.
ಅಳದಂಗಡಿ ಬಸ್ ನಿಲ್ದಾಣದಿಂದ ಬಲಕ್ಕೆ ಸಾಗುವ ದಾರಿಯಲ್ಲಿ ಹೋದಾಗ ಸುತ್ತಲೂ ತೋಟ ಮತ್ತು ಕಾಡಿನ ಹಸಿರು ಕಣ್ಣಿಗೆ ಬೀಳುತ್ತದೆ. ಈ ರೀತಿ ಕಾಡಿನ ದಾರಿಯಾದರೂ ಬಹುತೇಕ ಕಡೆಗಳಲ್ಲಿ ಕಾಂಕ್ರೀಟಿಕರಣವಾಗಿದೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗಡಿಗಳು ಇರುವ ಪ್ರದೇಶದಲ್ಲಿ ಕಾಂಕ್ರಿಟೀಕರಣಕ್ಕೆ ಅವಕಾಶ ಇಲ್ಲದಿರುವುದರಿಂದ ಅಲ್ಲಲ್ಲಿ ಮಣ್ಣಿನ ರಸ್ತೆಗಳಿವೆ. ಶಾಸಕರ ನಿಧಿಯಿಂದ ರಸ್ತೆ ಕಾಂಕ್ರೀಟಿಕರಣವಾದ ಬೋರ್ಡ್‌ಗಳನ್ನು ಹಾಕಲಾಗಿದೆ. ಹೀಗೆ ಏರು-ತಗ್ಗಿನ ರಸ್ತೆಯಲ್ಲಿ ಸುಮಾರು ೮ ಕಿಲೋಮೀಟರ್ ಸಾಗಿದಾಗ ನಮಗೆ ಸಿಗುವುದೇ ಬಲ್ಯ ಮಾಳಿಗೆಬೈಲು ಪ್ರದೇಶ.

ನಮ್ಮ ತಂಡ ಅಲ್ಲಿಗೆ ತಲುಪಿದಾಗ ಇಳಿಕತ್ತಲು ಆವರಿಸಿಕೊಳ್ಳತೊಡಗಿತ್ತು, ಕೆಲಸಗಳಿಗೆ ತೆರಳಿದವರು ಮನೆಗೆ ವಾಪಾಸಾಗುತ್ತಿದ್ದರು. ಕತ್ತಲಾಗುತ್ತ ಪರಿಸರದಲ್ಲಿ ಮೌನ ಆವರಿಸುತ್ತಿದ್ದಂತೆ ಕಾಡುಗುಡ್ಡದಿಂದ ಹರಿದುಬರುತ್ತಿದ್ದ ತೊರೆಯ ನೀರಿನ ಶಬ್ದ ಜೋರಾಗುತ್ತಿತ್ತು. ಇದೇ ಸಂದರ್ಭದಲ್ಲಿ ಕತ್ತಲು ತುಂಬಿದ್ದ ಒಂದೊಂದೇ ಮನೆಗಳನ್ನು ನಮ್ಮ ತಂಡ ಪ್ರವೇಶಿಸಿ ಅಲ್ಲಿನವರ ಅನುಭವ, ಅಭಿಪ್ರಾಯ, ನೋವುಗಳಿಗೆ ನಾವು ಕಿವಿಯಾದೆವು.
ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ ಸೋಲಾರ್ ; ಮಳೆಗಾಲದಲ್ಲಿ ಇಲ್ಲಿನವರ ಬದುಕು ಬಲು ದುಸ್ತರ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಈ ಪ್ರದೇಶದಲ್ಲಿ ನಾವು ಹೋದ ಕೆಲವು ಮನೆಗಳಲ್ಲಿ ವಿದ್ಯುತ್ ದೀಪಗಳಿದ್ದವು, ಟಿವಿ, ರೇಡಿಯೋ ಇತು,, ಸಾಲದೆಂಬಂತೆ ಮನೆ ಪೂರ್ತಿ ವಯರಿಂಗ್ ಕೂಡ ಆಗಿತ್ತು. ಬಹುತೇಕ ಮನೆಗಳಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ ಕೆಲವು ಮನೆಗಳಲ್ಲಿ ಒಂದೊಂದು ದೀಪ ಉರಿಯುತ್ತಿತ್ತು, ಉಳಿದ ಮನೆಗಳಲ್ಲಿ ಅದೂ ಇಲ್ಲ. ಕಾರಣ, ಸೋಲಾರ್ ಮಳೆಗಾಲದಲ್ಲಿ ಹೆಚ್ಚಾಗಿ ಕೆಲಸ ಮಾಡುವುದಿಲ್ಲ. ಕೆಲವರ ಮನೆಯಲ್ಲಿ ಸರಕಾರಿ ಸೋಲಾರ್ ವ್ಯವಸ್ಥೆಗಳಿದ್ರೆ, ಮತ್ತೆ ಕೆಲವು ಮನೆಗಳಲ್ಲಿ ಅವರೇ ಸ್ವಂತ ಖರ್ಚಿನಲ್ಲಿ ಸೋಲಾರ್ ಅಳವಡಿಸಿಕೊಂಡಿದ್ದಾರೆ. ಏನೇ ಆದ್ರೂ ಈ ಭಾಗದ ನಿವಾಸಿಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಅನ್ನುವುದು ಇಲ್ಲಿಯತನಕವೂ ಮರೀಚಿಕೆಯಾಗಿದೆ.

ಚಿಮಿಣಿ ಬೆಳಕಲ್ಲೇ ಓದು-ಬರಹ! – ದೀಪ ಬೆಳಗಿಸಲು ಸಿಗುತ್ತಿಲ್ಲ ಸೀಮೆಎಣ್ಣೆ ; ದುಬಾರಿ ಡೀಸೆಲೇ ಗತಿ!
ಮಳೆಗಾಲದಲ್ಲಿ ಇಲ್ಲಿನ ಮನೆಯೊಳಗೆ ಚಿಮಿಣಿಯದ್ದೇ ಬೆಳಕು, ಮಕ್ಕಳೂ ಸಹ ಚಿಮಿಣಿ ದೀಪದ ಬೆಳಕಿನಲ್ಲೇ ಓದುತ್ತಾ, ಬರೆಯುತ್ತಿರುತ್ತಾರೆ. ಇದು ಅವರ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಗಂತ ಚಿಮಿಣಿ ದೀಪ ಬಿಟ್ಟರೆ, ಮಳೆಗಾಲದಲ್ಲಿ ಬೇರೆ ಗತಿಯಿಲ್ಲ. ಅಲ್ಲದೇ ಚಿಮಿಣಿ ದೀಪಕ್ಕೆ ಬಳಸುವ ಸೀಮೆಎಣ್ಣೆ ಈಗ ನ್ಯಾಯಬೆಲೆ ಅಂಗಡಿಗಳಲ್ಲಿ ದೊರೆಯುತ್ತಿಲ್ಲ. ಹಾಗಾಗಿ, ಇವರೆಲ್ಲಾ ದುಬಾರಿ ಬೆಲೆಯ ಡೀಸೆಲ್‌ಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಅಡುಗೆ ಮನೆಗೂ ಚಿಮಿಣಿಯೇ ಬೆಳಕಿಂಡಿ!; ಬೀಡಿ ಕಟ್ಟುವವರಿಗೂ ಚಿಮಿಣಿಯೇ ಆಧಾರ!
ಚಿಮಿಣಿ ದೀಪದಿಂದ ನಮಗೊಂದು ಮುಕ್ತಿ ಕೊಡಿ ಎಂದು ಇಲ್ಲಿನ ಮಹಿಳೆಯರು ಸ್ಥಳೀಯಾಡಳಿತ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತವನ್ನು ಕೋರಿಕೊಳ್ಳುತ್ತಿದ್ದಾರೆ. ಯಾಕೆಂದ್ರೆ ಇವರ ಪ್ರತಿಯೊಂದು ಮನೆ ಕೆಲಸ, ಅಡುಗೆ ತಯಾರಿ ಇತ್ಯಾದಿ ಎಲ್ಲದಕ್ಕೂ ನಾವು ಚಿಮಿಣಿಯನ್ನೇ ನೆಚ್ಚಿಕೊಳ್ಳಬೇಕಿದೆ. ಬೀಡಿ ಕಾರ್ಮಿಕರು ಕೂಡ ಚಿಮಿಣಿ ಬೆಳಕಿನಲ್ಲೇ ಬೀಡಿ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದಾರೆ.

ವಿದ್ಯುತ್ ಸಂಪರ್ಕಕ್ಕೆ ರಾಷ್ಟ್ರೀಯ ಉದ್ಯಾನವನದ ನೆಪ! ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸ್ವಾತಂತ್ರ್ಯ ಬಂದು 75 ವರ್ಷವಾದರೂ ವಿದ್ಯುತ್ ಇಲ್ಲ!
ಈ ಭಾಗದ ಜನರು ವಿದ್ಯುತ್‌ಗಾಗಿ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಮಾತ್ರವಲ್ಲದೇ ತಮ್ಮ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಅಡ್ಡಿಯಾಗಿರುವ ಕಾನೂನು ವಿಚಾರಗಳ ಬಗ್ಗೆಯೂ ತಿಳಿದುಕೊಂಡು ಆರೇಳು ಇಲಾಖೆಗಳನ್ನು ಅಲೆದು ಈ ಭಾಗಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಇರುವ ತೊಡಕುಗಳನ್ನು ನಿವಾರಿಸಿಕೊಳ್ಳುವಲ್ಲಿಯೂ ಮುಂದಡಿ ಇಟ್ಟಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಈ ಭಾಗದ ಕೆಲ ಪ್ರದೇಶಗಳು ಸೇರುವುದರಿಂದ ಅರಣ್ಯ ಇಲಾಖೆ ಸೇರಿದಂತೆ ಕೆಲವೊಂದು ಪ್ರಮುಖ ಇಲಾಖೆಗಳಿಂದ ಅನುಮತಿ ಸಿಗದೇ ಇರುವುದು ಇವರ ವಿದ್ಯುತ್ ಸಂಪರ್ಕದ ಕನಸಿಗೆ ಅಡ್ಡಿಯಾಗಿದೆ. ಹಾಗಂತ ಇಲಾಖೆಗಳ ಬೆನ್ನು ಬಿದ್ದು ಕೆಲಸ ಮಾಡಿದ್ರೆ ಇಲ್ಲಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ. ಇಂತಹದ್ದೆ ಅರಣ್ಯ ಪ್ರದೇಶ ಬಾಂಜಾರು ಮಲೆಗೂ ಈಗ ವಿದ್ಯುತ್ ಸಂಪರ್ಕವಾಗಿದೆ. ಆದರೆ ತಮ್ಮ ಸಂಕಷ್ಟವನ್ನು ಪರಿಹರಿಸುವಲ್ಲಿ ಈ ಭಾಗದ ಜನಪ್ರತಿನಿಧಿಗಳು ಕಳೆದ 75 ವರ್ಷಗಳಿಂದ ನಿರ್ಲಕ್ಷ್ಯ ವಹಿಸಿರುವ ಕುರಿತು ಇಲ್ಲಿನವರಿಗೆ ಬೇಸರವಿದೆ. ಆದರೆ ಕಳೆದ ಐದಾರು ವರ್ಷಗಳಿಂದ ಇಲ್ಲಿನವರು ಹೋರಾಟ ಮಾಡಿ, ಶ್ರಮಪಟ್ಟು ಹಲವಾರು ಬಾರಿ ಬೇರೆ ಬೇರೆ ಇಲಾಖೆಗಳಿಗೆ ಅಳೆದು, ಬೆಂಗಳೂರು, ಮಂಗಳೂರಿಗೆ ಅರ್ಜಿಗಳನ್ನು ಕೊಟ್ಟು ಪಟ್ಟಿರುವ ಪ್ರಯತ್ನಕ್ಕೆ ಫಲಸಿಗುವ ಲಕ್ಷಣಗಳು ಇದೀಗ ಗೋಚರಿಸುತ್ತಿವೆಯಾದರೂ ಇಷ್ಟು ವರ್ಷಗಳಲ್ಲಿ ಈ ಭಾಗದ ಜನ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿ ಕತ್ತಲಿನಲ್ಲೇ ಬದುಕು ನಡೆಸಿದ್ದಕ್ಕೆ ಹೊಣೆ ಯಾರೆಂಬ ಪ್ರಶ್ನೆ ನಮ್ಮ ಮುಂದೆ ಭೂತಾಕಾರವಾಗಿ ನಿಲ್ಲುತ್ತದೆ.

ಕತ್ತಲಿನಲ್ಲೇ ಬದುಕುತ್ತಿರುವ ವೃದ್ಧ ದಂಪತಿಗಳಿಗೆ ಬೇಕಾಗಿದೆ ನೆರವಿನ ಹಸ್ತ
ಬಲ್ಯದ ಬಾಬು ಪೂಜಾರಿ ಮತ್ತು ಜಾನಕಿ ದಂಪತಿಗಳ ಬದುಕು ನಿಜಕ್ಕೂ ಎಂತವರ ಕಣ್ಣಲ್ಲೂ ಕಣ್ಣೀರು ತರಿಸುವಂತಿದೆ. 70 ವರ್ಷದ ಬಾಬು ಅವರಿಗೆ ಒಂದು ಬಾರಿ ಪಾರ್ಶ್ವವಾಯು ಆಘಾತವೂ ಆಗಿದೆ. ಇರುವ ನಾಲ್ವರು ಮಕ್ಕಳಲ್ಲಿ ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಇರುವೊಬ್ಬ ಮಗನೂ ದೂರದಲ್ಲಿ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದಾರೆ. ಆದರೆ ಈ ವೃದ್ಧ ದಂಪತಿ ಮಾತ್ರ ಹಳೆಯ ಮನೆಯಲ್ಲಿ ಚಿಮಿಣಿ ದೀಪದ ಬೆಳಕಿನಲ್ಲೇ ತಮ್ಮ ಬದುಕು ಸವೆಸುತ್ತಿದ್ದಾರೆ. ಇಲ್ಲಿನ ಕೆಲವು ಮನೆಗಳಿಗೆ ಸೋಲಾರ್ ವ್ಯವಸ್ಥೆಯಾದ್ರೂ ಇದೆ, ಆದರೆ ಇವರಿಗೆ ಇಂದಿಗೂ ಚಿಮಿಣಿ ದೀಪದ ಬೆಳಕೇ ಆಧಾರ. ಇನ್ನೂ ದುರಂತವೆಂದರೆ ಈ ದಂಪತಿ ವಾಸಿಸುತ್ತಿರುವ ಮನೆಯೂ ಸ್ವಂತದಲ್ಲ, ಬದಲಾಗಿ ತಮ್ಮ ಧಣಿಗಳಿಗೆ ಸೇರಿದ್ದು ಎಂದು ಈ ದಂಪತಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳುತ್ತಾರೆ. ವಿದ್ಯುತ್ ಬೇಕು ಅಂತ ಆಸೆ ಅದೆಷ್ಟೋ ವರ್ಷಗಳಿಂದ ಇತ್ತು, ಆದರೆ ಈಗ ಸಾಯುವತನಕ ಇಲ್ಲಿಯೇ ಇರುತ್ತೇವೆ. ಈಗ ಇರುವ ರೀತಿಯೇ ಬದುಕು ಸಾಗಿಸುತ್ತೇವೆ. ಎಂದು ಹೇಳುವಾಗ ಕಣ್ಣೀರು ಬರುತ್ತದೆ. ಈ ಇಳಿವಯಸ್ಸಿನಲ್ಲೂ ಸರಿಯಾದ ವ್ಯವಸ್ಥೆಯಿಲ್ಲದೇ ಬದುಕು ಸಾಗಿಸುತ್ತಿರುವ ಈ ವೃದ್ಧ ದಂಪತಿಗೆ ಸೂಕ್ತ ನೆರವಿನ ಅಗತ್ಯವಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.