75ನೇ ಸ್ವಾತಂತ್ರ್ಯೋತ್ಸವ: ಶಾಸಕ ಹರೀಶ್ ಪೂಂಜರಿಂದ ಬೆಳ್ತಂಗಡಿ ಜನತೆಗೆ ದೇಶಭಕ್ತಿ ಗೀತೆ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತ ಸ್ವತಂತ್ರಗೊಂಡು 75 ವರ್ಷಗಳ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ವತಿಯಿಂದ ತಾಲೂಕಿನ ಜನರಿಗಾಗಿ ಆನ್‌ಲೈನ್ ಮೂಲಕ ದೇಶಭಕ್ತಿ ಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ.

ತಾಲೂಕಿನಾದ್ಯಂತ ಎಲ್ಲಾ ಪ್ರತಿಭಾವಂತ ಪುರುಷರು, ಮಹಿಳೆಯರು, ಮಕ್ಕಳು ಈ ದೇಶಭಕ್ತಿಗೀತೆಯಲ್ಲಿ ಸ್ಪರ್ಧಿಸುವ ಅವಕಾಶವಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ 75ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧಾ ವಿಭಾಗವಿದ್ದು, 1-5 ವರ್ಷದವರ ವಿಭಾಗ, 5-10 ವರ್ಷದವರ ವಿಭಾಗ, 10-20ವರ್ಷದವರ ವಿಭಾಗ, 20-40ವರ್ಷದವರ ವಿಭಾಗ ಹಾಗೂ ೪೦ವರ್ಷ ಮೇಲ್ಪಟ್ಟ ವಿಭಾಗದವರು ಪ್ರತ್ಯೇಕವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧಾ ವಿಜೇತರಿಗೆ ರೂ.10,000/- (ಪ್ರಥಮ ಸ್ಥಾನ), ರೂ. 5000/-(ದ್ವಿತೀಯ ಸ್ಥಾನ)ನಗದು ಪುರಸ್ಕಾರ ನೀಡಲಾಗುವುದು.

ಸ್ಪರ್ಧಾರ್ಥಿಗಳು ತಮ್ಮ ಹೆಸರು, ವಿಳಾಸ ಮತ್ತು ಆಧಾರ್‌ಕಾರ್ಡ್ ವಿವರದೊಂದಿಗೆ, ರೆಕಾರ್ಡ್ ಮಾಡಿದ ವಿಡಿಯೋವನ್ನು ಆಗಸ್ಟ್ ೧೦ರೊಳಗಾಗಿ ಮೊಬೈಲ್ ಸಂಖ್ಯೆ 6366698524 ಕ್ಕೆ ವಾಟ್ಸಪ್ ಮೂಲಕ ಕಳುಹಿಸಿಕೊಡಬಹುದಾಗಿದೆ.

ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿದ್ದು, ಯಾವುದೇ ರೀತಿಯ ಎಡಿಟಿಂಗ್ ಮಾಡಿದ ವಿಡಿಯೋವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ ಎಂದು ಶಾಸಕ ಹರೀಶ್ ಪೂಂಜರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.