ಬೆಳ್ತಂಗಡಿ ಬೆಸ್ಟ್ ಫೌಂಡೇಶನ್, ವತಿಯಿಂದ ದೇಶಭಕ್ತಿಗೀತೆ ಹಾಗೂ ಭಾಷಣ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಬೆಸ್ಟ್ ಫೌಂಡೇಶನ್, ಬೆಳ್ತಂಗಡಿ ಇದರ ವತಿಯಿಂದ ಎಪ್ಪತ್ತೈದನೆ ಸ್ವಾತಂತ್ರೋತ್ಸವದ ಪ್ರಯುಕ್ತ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಭಾವಂತರಿಗೆ ದೇಶಭಕ್ತಿಗೀತೆ ಹಾಗೂ ಭಾಷಣ ಸ್ಪರ್ಧೆಯನ್ನು ಆನ್ ಲೈನ್ ಮೂಲಕ ಆಯೋಜಿಸಲಾಗಿದೆ.

ಐದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆಯಲ್ಲಿ ಭಾಗವಹಿಸುವ ಅವಕಾಶವಿದೆ.ಯಾವ ಭಾಷೆಯ ದೇಶಭಕ್ತಿಗೀತೆಯನ್ನು ಕೂಡ ಹಾಡಬಹುದು.
ಭಾಷಣ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯುತ್ತಿದ್ದು ಯಾವುದೇ ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಭಾಗವಹಿಸಬಹುದು. ‘ಯುವ ಜನತೆ ಎದುರಿಸುತ್ತಿರುವ ಉದ್ಯೋಗ ಸಮಸ್ಯೆ ಮತ್ತು ಪರಿಹಾರ’ ಎನ್ನುವ ವಿಷಯದ ಕುರಿತು ಕನ್ನಡ ಭಾಷಣವನ್ನು ಮಾಡಿ 7204978230 ಈ ನಂಬರ್ ಗೆ ವಾಟ್ಸ್‌ಆಪ್‌ನ ಮೂಲಕ ಕಳುಹಿಸಿಕೊಡಬೇಕು.

ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನ 5 ಸಾವಿರ ನಗದು ದ್ವಿತೀಯ ಬಹುಮಾನ 3 ಸಾವಿರ ನಗದು ಹಾಗೂ ಹತ್ತು ಆಕರ್ಷಕ ಬಹುಮಾನಗಳು ಇರಲಿದೆ. ಹಾಗೂ ಅತಿ ಹೆಚ್ಚು ಲೈಕ್ಸ್ ಪಡೆದ 1 ಸ್ಪರ್ಧಿಗೆ ವಿಶೇಷ ಬಹುಮಾನವನ್ನು ನೀಡಿ ಗೌರವಿಸಲಾಗುವುದು.

ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 11 ಹಾಗೂ ಆಗಸ್ಟ್ 15 ರಂದು ಫಲಿತಾಂಶ ಪ್ರಕಟಿಸಲಾಗುವುದು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.