ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪ್ರಬುದ್ಧ ಆಡಳಿತಗಾರ ಅನುಭವಿ ಬಸವರಾಜ್ ಬೊಮ್ಮಾಯಿಯವರಿಂದ ರಾಜ್ಯ ಮತ್ತಷ್ಟು ಪ್ರಗತಿಯಾಗಲಿದೆ: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನ ರಾಜಭವನದಲ್ಲಿ ಇದೀಗ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಕರ್ನಾಟಕ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿಯವರಿಂದ ಕರ್ನಾಟಕ ರಾಜ್ಯ ಮತ್ತಷ್ಟು ಪ್ರಗತಿಯಾಗಲಿದೆಯೆಂಬ ವಿಶ್ವಾಸವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವ್ಯಕ್ತಪಡಿಸಿದ್ದಾರೆ.

ಜಲ ಸಂಪನ್ಮೂಲ, ನೀರಾವರಿ, ಗೃಹ ಸಂಸದೀಯ ಖಾತೆಗಳನ್ನು ಸಮರ್ಥವಾಗಿ ಸಚಿವಗಿರಿಯಲ್ಲಿ ಕಾರ್ಯನಿರ್ವಹಿಸಿದ ಪ್ರಬುದ್ಧ ಆಡಳಿತಗಾರ ಹಾಗೂ ಅನುಭವಿ ಬಸವರಾಜ್ ಬೊಮ್ಮಯಿಯವರು ಮುಖ್ಯಮಂತ್ರಿಯಾಗಿಯೂ ಯಶಸ್ವಿಯಾಗಲಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರು ಅಭಿನಂದಿಸಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಬೊಮ್ಮಯಿಯವರನ್ನು ಬಿಜೆಪಿಗೆ ಕರೆತಂದ ಬಿ.ಎಸ್ ಯಡಿಯೂರಪ್ಪನವರ ದೂರದೃಷ್ಟಿತ್ವ ಮುಂದಿನ ದಿನಗಳಲ್ಲಿ ಹೆಮ್ಮರವಾಗಿ ಫಲ ನೀಡಲಿದೆ. ಖಂಡಿತವಾಗಿಯೂ ರಾಜ್ಯಕ್ಕೆ ಹಾಗೂ ವಿಶೇಷವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ.
ಮುಖ್ಯಮಂತ್ರಿಯಾಗಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಿರಿಯ ಮುತ್ಸದ್ಧಿಯಾದ ಬಿ.ಎಸ್ ಯಡಿಯೂರಪ್ಪನವರಿಗೂ ಈ ಸಂದರ್ಭದಲ್ಲಿ ಶಾಸಕರು ಅಭಿನಂದನೆಗಳನ್ನು ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.