ಭಾರತೀಯ ಮಜ್ದೂರು ಸಂಘದ ಸಂಸ್ಥಾಪನ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಭಾರತೀಯ ಮಜ್ದೂರು ಸಂಘದ ಸಂಸ್ಥಾಪನ ದಿನಾಚರಣೆಯನ್ನು ಬಿ.ಎಂ.ಸ್ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ.ಕೆ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಬಿ.ಎಂ.ಎಸ್ ಕಾರ್ಯಾಲಯದಲ್ಲಿ ಅಚರಿಸಲಾಯಿತು.

ಬಿ.ಎಂ.ಎಸ್ ತಾಲೂಕು ಸಮಿತಿ ಸದಸ್ಯ ವಿಜಯ ಜೀ ಅರಳಿ ರವರು ಬೌದ್ಧಿಕ ನೀಡಿ, ರಾಷ್ಟ್ರದಲ್ಲಿ ಬಿಎಂಸ್ ಕಾರ್ಮಿಕ ಸಂಘಟನೆಯನ್ನು ಸ್ಥಾಪನೆ ಮಾಡಿದ ದತ್ತೋಪಂತ ಠೆಂಗಡಿಜೀ ಅವರ ಜೀವನ ವ್ರತ್ತಾಂತ ಹಾಗೂ ಅವರು ರಾಷ್ಟ್ರೀಯತೆಯ ವಿಚಾರಧಾರೆಯೊಂದಿಗೆ ಕಾರ್ಮಿಕರನ್ನು ಒಗ್ಗೂಡಿಸಲು ತನ್ನ ಜೀವನವನ್ನು ಮೀಸಲಿಟ್ಟು ದೇಶದಲ್ಲಿ ಕಾರ್ಮಿಕ ಸಂಘಟನೆಯ ಬಲಗೊಳ್ಳಲು ಅವರ ಪಾತ್ರದ ಬಗ್ಗೆ ವಿವರಿಸಿದರು.

ಸಮಿತಿ ಅಧ್ಯಕ್ಷ ಅಧ್ಯಕ ಉದಯ ಬಿ.ಕೆ ಮಾತನಾಡಿ ರಾಷ್ಟ್ರಿಯ ಸ್ವಯಂ ಸೇವಕ ಸಂಘದ ಸಿದ್ಧಾಂತದೊಂದಿಗೆ ದತ್ತೋಪಂತ ಥೆಂಗಡಿಜಿವರ ವಿಚಾರಧಾರೆಯೊಂದಿಗೆ ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರನ್ನು ಸಂಘಟಿಸಿ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವುದು ನಮ್ಮ ಆದ್ಯತೆಯಾಗಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ದುಡಿಯುತ್ತಿರುವ ತಾಲೂಕಿನ ಬೇರೆ ಬೇರೆ ಕಾರ್ಮಿಕದನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿ ಪ್ರಮುಖರಾದ ಗಣೇಶ್ ಕರ್ಕೇರ ಪೆರಾಡಿ, ಶೇಖರ ಅಂಡಿಂಜೆ, ಪುರಂದರ ಗೌಡ ಮೊಗ್ರು, ಸಮಿತಿ ಉಪಾಧ್ಯಕ್ಷ ಚಂದ್ರಕಲಾ ಸಿ.ಕೆ, ಪ್ರಮೋದ್‌ರಾಜ್ ಪೆರಾಡಿ, ಕುಮಾರನಾಥ್ ಶೆಟ್ಟಿ ಕಲ್ಮಂಜ, ಸಾಂತಪ್ಪ ಕಲ್ಮಂಜ ಹಾಗೂ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ದಯಾನಂದ, ಕಾರ್ಯದರ್ಶಿ ನಾಗರಾಜ್ ಮಾಚಾರು ಹಾಗೂ ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಪ್ರಮುಖರು ಉಪಸ್ಥಿತರಿದ್ದರು.
ಬಿಎಂಸ್‌ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಸ್ವಾಗತಿಸಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.