ಶಾಸಕ ಹರೀಶ್ ಪೂಂಜ ಅನುದಾನ ಮಂಜೂರಾತಿಯಲ್ಲಿ ಸುಳ್ಳು ಲೆಕ್ಕ ನೀಡಿದ್ದಾರೆ: ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಗಂಭೀರ ಆರೋಪ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು ತಮ್ಮ ಮೂರು ವರ್ಷಗಳ ಶಾಸಕತ್ವದ ಅವಧಿಯಲ್ಲಿ 833.96 ಕೋಟಿ ರೂಪಾಯಿಗಳ ಅನುದಾನವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಕ್ಕೆ ತರಿಸಿರುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ಲೆಕ್ಕ ನೀಡಿರುವ ಹರೀಶ್ ಪೂಂಜ ಅವರು ಕ್ಷೇತ್ರದ ಜನತೆಗೆ ತಪ್ಪು ಲೆಕ್ಕವನ್ನು ನೀಡಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅವರು ದಾಖಲೆಗಳ ಸಹಿತ ಜು.28 ರಂದು ಪ್ರವಾಸಿ ಬಂಗಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಮಾತ್ರವಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಶಾಸಕರೊಂದಿಗೆ ಬಹಿರಂಗ ಚರ್ಚೆಗೂ ಸಿದ್ಧವಿರುವುದಾಗಿ ಹೇಳಿರುವ ವಸಂತ ಬಂಗೇರ ಅವರು ಶಾಸಕ ಪೂಂಜ ಅವರು ಸೂಚಿಸುವ ಕಡೆ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಬಹಿರಂಗ ಚರ್ಚೆ ನಡೆಸಲು ಬದ್ಧನೆಂದು ಸವಾಲು ಹಾಕಿದ್ದಾರೆ. ಒಂದು ವೇಳೆ ಈ ಚರ್ಚೆಯ ಸಂದರ್ಭದಲ್ಲಿ ಶಾಸಕ ಪೂಂಜ ಅವರು ತಾವು ಹೇಳಿಕೊಂಡಿರುವಂತೆ 833.96 ಕೋಟಿ ರೂಪಾಯಿಗಳ ಅನುದಾನ ಕ್ಷೇತ್ರಕ್ಕೆ ತಂದಿರುವುದು ಸಾಬೀತುಗೊಂಡಲ್ಲಿ ತಾನೆ ಸ್ವತಃ ಶಾಸಕರನ್ನು ಸಾರ್ವಜನಿಕವಾಗಿ ಸನ್ಮಾನಿಸುತ್ತೇನೆ, ಇಲ್ಲವಾದಲ್ಲಿ ಶಾಸಕರು ಕ್ಷೇತ್ರದ ಜನತೆಯ ಕ್ಷಮೆ ಕೋರಬೇಕೆಂದು ಮಾಜಿ ಶಾಸಕ ವಸಂತ ಬಂಗೇರ ಅವರು ಇದೇ ಸಂದರ್ಭದಲ್ಲಿ ಸವಾಲೆಸದರು.

ಶಾಸಕರ 833.96 ಕೋಟಿ ರೂಪಾಯಿಗಳ ಅನುದಾನದ ಹಿಂದಿರುವ ಸಂಪೂರ್ಣ ಲೆಕ್ಕಗಳನ್ನು ಇಂದಿನ ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಬಿಚ್ಚಿಟ್ಟ ಮಾಜಿ ಶಾಸಕರು, ಎಲ್ಲಾ ಇಲಾಖೆಗಳಿಂದ ತರಿಸಿಕೊಂಡ ಮಾಹಿತಿಗಳನ್ನು ಪರಿಶೀಲಿಸಿದ ಬಳಿಕ ಶಾಸಕ ಹರೀಶ್ ಪೂಂಜ ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರಕ್ಕೆ ತಂದಿರುವ ಅನುದಾನ ಕೇವಲ 455.76 ಕೋಟಿ ರೂಪಾಯಿಗಳಾಗಿದ್ದು ಉಳಿದಂತೆ 168.17 ಕೋಟಿ ರೂಪಾಯಿಗಳು ತಮ್ಮ ಶಾಸಕತ್ವದ ಅವಧಿಯಲ್ಲಿ ಮಂಜೂರುಗೊಂಡ ಅನುದಾನ, 200.48 ಕೋಟಿ ರೂಪಾಯಿಗಳು ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ ಮತ್ತು ವಿಧಾನ ಪರಿಷತ್ ಸದಸ್ಯರಾಗಿರುವ ಹರೀಶ್ ಕುಮಾರ್ ಅವರ ಅನುದಾನಗಳು ಮತ್ತು ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರ ಅನುದಾನ ಹಾಗೂ ಕ್ಷೇತ್ರಕ್ಕೆ ನಿಯಮಿತವಾಗಿ ಬರುವ ಅನುದಾನಗಳಾಗಿವೆ ಎಂಬ ವಿವರಗಳನ್ನು ಮಾಜಿ ಶಾಸಕರು ಇದೇ ಸಂದರ್ಭದಲ್ಲಿ ಬಹಿರಂಗಗೊಳಿಸಿದರು.

ಒಟ್ಟಾರೆಯಾಗಿ ಪತ್ರಿಕಾ ಜಾಹಿರಾತಿನಲ್ಲಿ ಶಾಸಕ ಹರೀಶ್ ಪೂಂಜ ಅವರು 368.58 ಕೋಟಿ ರೂಪಾಯಿಗಳ ತಪ್ಪು ಲೆಕ್ಕವನ್ನು ಜನತೆಗೆ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಜಿ ಶಾಸಕ ವಸಂತ ಬಂಗೇರ ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಂಜನ್ ಜಿ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಪಕ್ಷದ ಒಕ್ತಾರ ಮನೋಹರ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ದಿವ್ಯಜ್ಯೋತಿ, ಮಾಜಿ ಸದಸ್ಯರುಗಳಾದ ಪ್ರವೀಣ್ ಗೌಡ, ಜಯರಾಮ್, ಓಬಯ್ಯ, ಸುಶೀಲಾ, ಕಿಸಾನ್ ಘಟಕದ ಸತೀಶ್ ಶೆಟ್ಟಿ, ಅಭಿನಂದನ್ ಹರೀಶ್ ಕುಮಾರ್, ಅಬ್ದುಲ್ ರಹಿಮಾನ್ ಪಡ್ಪು, ಸಾಮಾಜಿಕ ಜಾಲತಣದ ಸಂದೀಪ್ ಅರುವ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.