ಕೊಕ್ಕಡ ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಗ್ರಾಮ ಪಂಚಾಯತ್ ಕೊಕ್ಕಡ, ಕಾರ್ಮಿಕರ ಇಲಾಖೆ ಮತ್ತು ಭಾರತೀಯ ಮಜದೂರ್ ಸಂಘ ಗ್ರಾಮ ಸಮಿತಿ ಕೊಕ್ಕಡ ವತಿಯಿಂದ ಕೊಕ್ಕಡ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ 196 ಕಿಟ್ ವಿತರಣೆ ಕಾರ್ಯಕ್ರಮವು ಜು.26 ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಯೋಗೀಶ್ ಅಲಂಬಿಲ ಮಾತನಾಡಿ ಕರ್ನಾಟಕ ಸರಕಾರ ಕಾರ್ಮಿಕರ ಇಲಾಖೆ ಕೊಡಮಾಡುವ ಸೌಲಭ್ಯವನ್ನು ಗ್ರಾಮದ ಇನ್ನಷ್ಟು ಶ್ರಮ ಜೀವಿಗಳು ಪಡೆಯಲು ಕಾರ್ಮಿಕರ ಇಲಾಖೆಯಲ್ಲಿ ನೋಂದವಣಿ ಮಾಡಬೇಕು. ಕಾಲಕಾಲಕ್ಕೆ ರಿನೀವಲ್ ಮಾಡಬೇಕು ಒಳ್ಳೆಯ ಸೇವೆ ನೀಡುತ್ತಿರುವ ಭಾರತೀಯ ಮಜಾದೂರ್ ಸಂಘ ಮೂಲಕ ನೋಂದಾವಣೆ ಮಾಡಿಕೊಳ್ಳಲು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮಾತನಾಡಿ ಗ್ರಾಮದ ಜನತೆ ಸರಕಾರಿ ಸೌಲಭ್ಯಗಳನ್ನು ಪಂಚಾಯತ್ ಮೂಲಕ ಪಡೆಯಲು ಆಯಾ ಬೂತು ಸದಸ್ಯರ ಸಹಕಾರ ಪಡೆಯುವಂತೆ ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಪವಿತ್ರ, ಭಾರತೀಯ ಮಜಾದೂರ್ ಸಂಘ ಕಾರ್ಯದರ್ಶಿ ವಸಂತ್ ನಾಯ್ಕ್ ಓಣಿತ್ತರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ಹಾಗೂ, ಪಂಚಾಯತ್ ಸದಸ್ಯರಾದ ಪ್ರಭಾಕರ್, ಲತಾ, ಪುರುಷೋತ್ತಮ್, ಶರತ್, ವಿಶ್ವನಾಥ, ಪ್ರಮೀಳಾ, ವನಜಾಕ್ಷಿ ಹಾಗೂ ಬೇಬಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕೇಶವ ಹಲ್ಲಿಂಗೇರಿ ನಿರೂಪಿಸಿ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿದರು, ಲತಾ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.