ಉಜಿರೆ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಆಷಾಡ ಡಿಸ್ಕೌಂಟ್ ಸೇಲ್

ಉಜಿರೆ: ಕಳೆದ 6 ವರ್ಷಗಳಿಂದ ಉಜಿರೆ, ಬೆಳ್ತಂಗಡಿ, ಮಡಂತ್ಯಾರು, ಬಂಟ್ವಾಳ ಹಾಗೂ ಉಪ್ಪಿನಂಗಡಿ ನಗರಗಳಲ್ಲಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್&ರೆಡಿಮೇಡ್ ಸಂಸ್ಥೆಯು ಗ್ರಾಹಕರ ಪ್ರೀತಿ, ವಿಶ್ವಾಸಗಳಿಸಿ, ಪ್ರಾಮಾಣಿಕ ಹಾಗೂ ನಗುಮೊಗದ ಸೇವೆ ನೀಡುವುದರೊಂದಿಗೆ ಹೆಸರಾಂತ ವಸ್ತ್ರ ಮಳಿಗೆಯಾಗಿ ಹೊರಹೊಮ್ಮಿದೆ.
ಪ್ರತಿ ವರ್ಷವೂ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮಳಿಗೆಯಲ್ಲಿ ಮಾನ್ಸೂನ್ ಸೇಲ್ ಮೇಳವನ್ನು ಆರಂಭಿಸಿ, ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ಮಾರಾಟ ಮಾಡುಲಾಗುತ್ತಿದ್ದು, ಆದರೆ ಕಳೆದ ಎರಡು ವರ್ಷದಿಂದ ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಲಾಕ್ಡೌನ್ ಇದ್ದುದರಿಂದ ಮಳಿಗೆಗಳಲ್ಲಿ ಯಾವುದೇ ಡಿಸ್ಕೌಂಟ್ ಆಫರ್ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಸರಕಾರದ ಕೊರೊನಾ ನಿಯಮವನ್ನು ಪಾಲಿಸಿಕೊಂಡು ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ನ ಎಲ್ಲಾ ಸಂಸ್ಥೆಗಳಲ್ಲಿ ಆಷಾಡ ಡಿಸ್ಕೌಂಟ್ ಸೇಲ್ ಆರಂಭಿಸಲಾಗಿದ್ದು, ಗ್ರಾಹಕ ಬಂಧುಗಳ ಸಹಕಾರ ಕೋರಲಾಗಿದೆ.

ದೇಶದ ಪ್ರಖ್ಯಾತ ನಗರಗಳಾದ ಬಾಂಬೆ, ಕಲ್ಕತ್ತಾ, ಸೂರತ್, ನಾಗ್ಪುರ ಹಾಗೂ ಅಹಮ್ಮದಾಬಾದ್ ಮುಂತಾದ ಕಡೆಗಳಿಂದ ನೇರವಾಗಿ ಉಡುಪುಗಳನ್ನು ಖರೀದಿಸಿ ಅತೀ ಕಡಿಮೆ ಬೆಲೆಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ವಿಶೇಷವಾಗಿ ಗ್ರಾಹಕರಿಗೆ ಅನುಕೂಲವಾಗಲೆಂದು ಪ್ರತೀ ಖರೀದಿಯಲ್ಲಿ 20% ಡಿಸ್ಕೌಂಟ್ ಆಫರ್ ನೀಡಲಾಗಿದ್ದು, ಪ್ರತಿ ದಿನ ಬೆಳಿಗ್ಗೆ ಗಂಟೆ 9ರಿಂದ ರಾತ್ರಿ 7ರ ತನಕ ಗ್ರಾಹಕರು ಬಟ್ಟೆಗಳನ್ನು ಖರೀದಿಸಲು ಅವಕಾಶವಿದೆ ಎಂದು ಶ್ರೀ ದುರ್ಗಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮೋಹನ್ ಚೌಧರಿ ತಿಳಿಸಿದ್ದಾರೆ.
ವೈಶಿಷ್ಟ್ಯಗಳು
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ
ಹವಾನಿಯಂತ್ರಿತ ಮಳಿಗೆ
ಪ್ರತಿ ಖರೀದಿಯ ಮೇಲೆ 20% ಡಿಸ್ಕೌಂಟ್
ಏಕಕಾಲದಲ್ಲಿ ಸಂಸ್ಥೆಯ ಐದು ಮಳಿಗೆಗಳಲ್ಲಿ ಆಷಾಡ ಸೇಲ್ ವ್ಯವಸ್ಥೆ
ಎಲ್ಲಾ ಕಂಪೆನಿಯ ವಿವಿಧ ವಿನ್ಯಾಸದ ಬಟ್ಟೆಗಳು ಲಭ್ಯ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.