ರಿವರ್ಸ್ ತೆಗೆಯುವ ವೇಳೆ ಮಹಿಳೆಗೆ ಡಿಕ್ಕಿ ಹೊಡೆದ ಟೆಂಪೊ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಡಂಗಡಿಯ ಮುಟ್ಟಿಯವರ ಎರಡೂ ಕಾಲುಗಳಿಗೆ ಗಂಭೀರ ಏಟು

ಪಡಂಗಡಿ: ಪಡಂಗಡಿ ಗ್ರಾ.ಪಂ ವ್ಯಾಪ್ತಿಯ ಪೊಯ್ಯೆಗುಡ್ಡೆ ಎಂಬಲ್ಲಿ ಚಿಕನ್ ಸೆಂಟರ್‌ಗೆ ಕೋಳಿಗಳನ್ನು ಅನ್‌ಲೋಡ್ ಮಾಡಿ ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಟೆಂಪೊ ವಾಹನವು ಹಿಂದೆ ನಿಂತಿದ್ದ ಮಹಿಳೆಯೋರ್ವರಿಗೆ ಡಿಕ್ಕಿ ಹೊಡೆದು, ಆಕೆಯ ಕಾಲಿನ ಮೇಲೆ ಹಾದು ಹೋದ ದುರ್ಘಟನೆ ನಡೆದಿದೆ.
ಘಟನೆಯಿಂದ ಪಡಂಗಡಿಯ ಮುಟ್ಟಿ (65.ವ) ಎಂಬವರ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೂಡಲೇ ಪಡಂಗಡಿ ಗ್ರಾ.ಪಂ ಸದಸ್ಯ ಸಂತೋಷ್ ಕುಮಾರ್ ಜೈನ್, ರಾಮ ಪೊಯ್ಯೆಗುಡ್ಡೆ, ಪ್ರವೀಣ್ ಭಂಡಾರಿ, ಹರೀಶ್ ಗರ್ಡಾಡಿ, ಅಹಮ್ಮದ್ ಬಾವ, ಮೊದಲಾದರ ಸೂಕ್ತ ಸಹಕಾರದಿಂದ ಗುರುವಾಯನಕೆರೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.