ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಬೆಳ್ತಂಗಡಿ ವಲಯ ಸದಸ್ಯರಿಂದ ಸ್ವಚ್ಛತಾ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುವೆಟ್ಟು: ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಬೆಳ್ತಂಗಡಿ ವಲಯ ಸದಸ್ಯರಿಂದ ಕುವೆಟ್ಟು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜು.25 ರಂದು ಸ್ವಚ್ಛತಾ ಕಾರ್ಯ ಜರುಗಿತು.

ಶಾಲಾ ಪರಿಸರದಲ್ಲಿರುವ ಹುಲ್ಲು, ಪೊದರು ಗಿಡಗಳನ್ನು ಕಡಿದು, ಕಸಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿ, ಬೆಳ್ತಂಗಡಿ ಎಸ್‌ಕೆಎಸ್‌ಎಸ್‌ಎಫ್ ಕೋಶಾಧಿಕಾರಿ ಹಕೀಂ ಬಂಗೇರಕಟ್ಟೆ, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ದ.ಕ ಜಿಲ್ಲಾ ಕೌನ್ಸಿಲರ್ ಖಾದರ್ ಬಂಗೇರಕಟ್ಟೆ, ಬೆಳ್ತಂಗಡಿ ರಕ್ತದಾನಿ ಬಳಗದ ಉಸ್ತುವಾರಿ ಅಬೂಬಕ್ಕರ್ ಬಂಗೇರಕಟ್ಟೆ, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ಮಡಂತ್ಯಾರ್ ಕ್ಲಸ್ಟರ್ ಉಸ್ತುವಾರಿ ಬಶೀರ್ ಬಳ್ಳಮಂಜ, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಬೆಳ್ತಂಗಡಿ ಕ್ಲಸ್ಟರ್ ವಿಖಾಯ ಚೇರ್ಮೆನ್ ಉಸ್ಮಾನ್ ಸವಣಾಲು ಹಾಗೂ ಇತರ ವಿಖಾಯ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಮ್. ಸಿರಾಜ್ ಚಿಲಿಂಬಿ ಸ್ಥಾಗತಿಸಿ, ಸಹಶಿಕ್ಷಕ ಸುರೇಶ್ ಶೆಟ್ಟಿ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.