ಕುಪ್ಪೆಟ್ಟಿ ಶ್ರೀಗಣೇಶ ಭಜನಾ ಮಂಡಳಿ ಇದರ ವತಿಯಿಂದ ಗುರುಪೂಜಾ ಉತ್ಸವ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂಡಳಿ ಇದರ ವತಿಯಿಂದ 2021-22 ಸಾಲಿನ ಗುರುಪೂಜಾ ಉತ್ಸವ ಹಾಗೂ ಮಕ್ಕಳಿಗೆ ಪುಸ್ತಕ ಮತ್ತು ಬ್ಯಾಗ್ ವಿತರಿಸುವ ಕಾರ್ಯಕ್ರಮ ಆದಿತ್ಯವಾರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿ R.K construction ನ ಮಾಲಕರಾದ ಶ್ರೀ ರಾಧಾಕೃಷ್ಣಮಾತನಾಡಿ ಭಜನಾ ಮಂದಿರದಿಂದ ನಡೆಯುವ ಇಂತಹ ಸಮಾಜಮುಖಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಮಂದಿರಕ್ಕೆ ಸಂಬಂಧಪಟ್ಟಹಾಗೆ ಸಭಾಭವನದ ನಿರ್ಮಾಣದಲ್ಲಿ ಸಂಪೂರ್ಣವಾಗಿ ನಿಮ್ಮ ಜೊತೆ ಕೈಜೋಡಿಸುವುದಾಗಿ ಹೇಳಿದರು.

 


ಇನ್ನೊರುವ ಅತಿಥಿ ಧನ್ವಂತರಿ ಕ್ಲಿನಿಕ್ ನ ಮಾಲಕರಾದ ಡಾ. ನಿರಂಜನ್ ರೈ ಮಾತನಾಡಿ ಸಂಸ್ಕೃತಿಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದು ಅದನ್ನು ಉಳಿಸುವ ಪ್ರಯತ್ನ ನಡೆಯಬೇಕು. ಗುರು-ಹಿರಿಯರನ್ನು ನೆನೆಯುವುದು ನಮ್ಮ ಧರ್ಮ. ಹಿರಿಯರ ಕನಸನ್ನು ನನಸು ಮಾಡುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.
ಶ್ರೀಮತಿ ದೇವಿ ಟೀಚರ್ ಪುಷ್ಪಗಿರಿಮಾತನಾಡಿ ಶ್ರೀ ಗಣೇಶ ಭಜನಾ ಮಂಡಳಿ ಭಜನೆಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಮಾದರಿಯಾಗಿದೆ ಎಂದರು.
ಶ್ರೀಮತಿ ಶಾರದಾ ರೈ ಮಾತನಾಡಿ ಪ್ರತಿಯೊಂದು ಮನೆಯ ಚಿಕ್ಕ ಮಕ್ಕಳಿಂದಲೇ ಭಜನೆಯನ್ನು ಮಾಡುವ ಅಭ್ಯಾಸ ಮಾಡಿಸಿದರೆ ವೈಯಕ್ತಿಕ ನೆಲೆಯಲ್ಲಿ ಮತ್ತು ಸಮಾಜಕ್ಕೆ ಬಹಳ ಉತ್ತಮ. ಮನಸ್ಸಿನ ನಿಯಂತ್ರಣ ಶಾಂತಿ-ನೆಮ್ಮದಿ ಇವೆಲ್ಲವೂ ಭಜನೆಯಿಂದ ಸಾಧ್ಯವಾಗುತ್ತದೆ ಈ ಮೂಲಕ ನಮ್ಮ ಸಂಸ್ಕೃತಿ- ಸಂಸ್ಕಾರವನ್ನು ಉಳಿಸುವ ಪ್ರಯತ್ನ ನಡೆಯಬೇಕಿದೆ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿಸರ್ಗ ಕನ್ಸ್ಟ್ರಕ್ಷನ್ ಮಾಲಕರಾದ ಶ್ರೀ ರಾಜೇಂದ್ರ, ಕಣಿಯೂರು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಗೋಪಾಲಗೌಡ, ಉಪಾಧ್ಯಕ್ಷರಾದ ಶ್ರೀ ಸುನೀಲ್ ಸಾಲಿಯಾನ್,ಪದ್ಮಂಜ ಸಿ. ಎ ಬ್ಯಾಂಕಿನ ಅಧ್ಯಕ್ಷರಾದ ರಕ್ಷಿತ್ ಶೆಟ್ಟಿ ಪಣೆಕ್ಕರ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸುಧೀರ್ ಕೆ ಎನ್,ಆಡಳಿತ ಸಮಿತಿ ಅಧ್ಯಕ್ಷರಾದ ಹರೀಶ್ ಕುಪ್ಪೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ನೀಡಿದ ಪುಸ್ತಕ ಮತ್ತು ಬ್ಯಾಗ್ ನ್ನು ಕೊಡುಗೆಯಾಗಿ ನೀಡಿದವರು ನಿಸರ್ಗ ಕನ್ಸ್ಟ್ರಕ್ಷನ್ ನ ಮಾಲಕರಾದ ಶ್ರೀ ರಾಜೇಂದ್ರ ಇವರು.
ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಸುರೇಶ್ ಹೆಚ್.ಲ್ ನಡೆಸಿಕೊಟ್ಟರು. ಶ್ರೀ ರವಿಪ್ರಕಾಶ್ ಭಟ್ ಅವರು ಸ್ವಾಗತಿಸಿದರು, ರೋಹಿತ್ ಶೆಟ್ಟಿ ವಂದಿಸಿದರು, ಶ್ರೀ ಸುಧೀರ್ ಕೆ. ಎನ್ ಹಲೇಜಿ ಕಾರ್ಯಕ್ರಮವನ್ನು ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.