ಲಾಯಿಲಾ ಗ್ರಾಮ ಪಂಚಾಯತಿ ವತಿಯಿಂದ ಕೊರೊನ ವಾರಿಯರ್ಸ್ ರವರಿಗೆ ಅಭಿನಂದನೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಲಾಯಿಲ: ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಕೊರೊನಾ ವಾರಿಯರ್ಸ್ ಗಳಿಗೆ ಅಭಿನಂದನಾ ಕಾರ್ಯಕ್ರಮವು ಜು. 24ರಂದು ಲಾಯಿಲ ಭಾರತ್ ಮಾತಾ ಸಭಾ ಭವನದಲ್ಲಿ ಜರುಗಿತು.


ಗ್ರಾ.ಪಂ ಅಧ್ಯಕ್ಷೆ  ಆಶಾ  ಬೆನಡಿಕ್ಟ  ಸಲ್ದಾನರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿ,   ಲಾಯಿಲ ಗ್ರಾ.ಪಂ ವ್ಯಾಪ್ತಿಯಲ್ಲಿ 8 ಗ್ರಾಮಗಳು ಸೀಲ್ ಡೌನ್ ಆಗಿತ್ತು. ಸುಮಾರು 80 ಮಂದಿ ನಾಗರೀಕರಿಗೆ ಕೊರೊನಾ ಸೋಂಕು ದೃಢಪಟ್ಟು, ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಪ್ರಸ್ತುತ 26 ಮಂದಿ ನಾಗರಿಕರಿಗೆ ಸೋಂಕು ದೃಢಗೊಂಡಿದ್ದು, ಇನ್ನು ಕೊರೊನ ಮುಕ್ತ ಗ್ರಾಮ ಆಗಿಲ್ಲ.  ತಮ್ಮ ಜೀವದ ಹಂಗು ತೊರೆದು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಹಾಗೂ ಕೊರೊನಾವನ್ನು ನಿಯಂತ್ರಿಸುವಲ್ಲಿ ಹಗಲು ರಾತ್ರಿ  ಶ್ರಮಿಸಿದ ಕೊರೊನಾ ವಾರಿಯರ್ ಗಳು, ಗ್ರಾ.ಪಂ.  ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರಿಗೆ ಹಾಗೂ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.


ಉದಯ್ ಕುಮಾರ್ ರವರು ಕೊರೋನ ಸಂದರ್ಭದ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಮಾರು 30 ಮಂದಿ ಕೊರೊನ ವಾರಿಯರ್ಸ್  ಗಳಿಗೆ ಸನ್ಮಾನ ಮಾಡಲಾಯಿತು.
ಕರ್ನಾಟಕ ವಿಧಾನಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ ಮಾತನಾಡಿ ಕೊರೊನ ಸಂದರ್ಭದಲ್ಲಿ ಕೊರೊನ ವಾರಿಯರ್ಸ್ ಮತ್ತು ಪಂಚಾಯತಿ ಸದಸ್ಯರು ಜಾತಿ ಮತ ಧರ್ಮ ಬೇಧವಿಲ್ಲದೆ ಕೆಲಸ ಮಾಡಿದಿರಿ ನಿಮಗೆ ಅಭಿನಂದನೆಗಳು. ಕೊರೊನ ಸಂದರ್ಭದಲ್ಲಿ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿರಿ. ಹಾಗೆಯೇ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಪಂಚಾಯತ್ ಸದಸ್ಯರಿಗಿದೆ . ಕೋವಿಡ್ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ. ಅವರು ತೆಗೆದುಕೊಂಡ ನಿರ್ಣಯ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಎಎಸ್ಐ ರಾಮಯ್ಯ ಹೆಗ್ಡೆ. ಗ್ರಾ.ಪಂ. ಕಾರ್ಯದರ್ಶಿ ಪುಟ್ಟಸ್ವಾಮಿ. ಸದಸ್ಯರಾದ ದಿನೇಶ್ ,ಆಶಾ .ಸವಿತಾ. ಪ್ರಸಾದ್ .ಚಿದಾನಂದ ಶೆಟ್ಟಿ. ಹರಿಕೃಷ್ಣ. ಹರೀಶ್ ಕುಲಾಲ್. ಸುಗಂಧಿ .ಮರಿಯಮ್ಮ. ಸಾರಮ್ಮ. ರಜನಿ. ಜಯಂತಿ ಎಂಕೆ ಉಪಸ್ಥಿತಿ ಇದ್ದರು
ಗ್ರಾಮ ಪಂಚಾಯತ್ ಸದಸ್ಯರಾದ ಅರವಿಂದ ಕಾರ್ಯಕ್ರಮ ನಿರೂಪಿಸಿ. ಸದಸ್ಯರಾದ ಮಹೇಶ್ ಸ್ವಾಗತಿಸಿ ಉಪಾಧ್ಯಕ್ಷರಾದ ಗಣೇಶ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.