ನಿವೃತ್ತ ಸಹಾಯಕ ಔಷಧಿ ನಿಯಂತ್ರಕರಿಗೆ ಸನ್ಮಾನ, ಬೀಳ್ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಉಪ ಔಷಧಿ ನಿಯಂತ್ರಕರ ಕಛೇರಿಯಲ್ಲಿ ,ಸಹಾಯಕ ಔಷಧಿ ನಿಯಂತ್ರಕಾರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ರಮಾಕಾಂತ ಕುಂಟೆ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಪ ಔಷಧಿ ನಿಯಂತ್ರಕ ಸುಜಿತ್ ಟಿ.ಪಿ, ಸಹಾಯಕ ಔಷದಿ ನಿಯಂತ್ರಕ ಶಂಕರ ನಾಯಕ್, ದಕ್ಷಿಣ ಕನ್ನಡ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ ದ ಅಧ್ಯಕ್ಷ ಸುಜಿತ್ ಭಿಡೆ, ಕೋಶಾಧಿಕಾರಿಗಳಾದ ವಿನಯ ರೈ, ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ನವೀನ್ಚಂದ್ರ ಕೆ ಎ. ಕಜೆಕಾರ್, ಕಾರ್ಯದರ್ಶಿ ಶ್ರೀಧರ ಕೆ.ವಿ, ಕೋಶಾಧಿಕಾರಿ ಗಣಪತಿ ಭಟ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಅಶ್ವಿನಿ ಅವರ ಪ್ರಾರ್ಥನೆ ಬಳಿಕ ಕಲ್ಲೇರಿಯ ಡಾ.ಸಂತೋಷ್ ಸ್ವಾಗತಿಸಿದರು. ಸನ್ಮಾನ ಸ್ವೀಕರಿಸಿದ ರಮಾಕಾಂತ ಕುಂಟೆ ಅವರು ಸದಸ್ಯರಿಗೆ ಕೃತಜ್ಞತೆ ತಿಳಿಸಿದರು. ಈ ಸಂಧರ್ಭದಲ್ಲಿ ಬಂದಂತಹ ಅತಿಥಿಗಳು ನಿವೃತ್ತರಿಗೆ ಶುಭ ಹಾರೈಸಿದರು. ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರೆ ಕಾರ್ಯದರ್ಶಿ ಶ್ರೀಧರ ಕೆ.ವಿ ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.