ಮಡಂತ್ಯಾರ್ ಗ್ರಾಮ ಪಂಚಾಯತ್‌ನಲ್ಲಿ ನೀರು ನೈರ್ಮಲ್ಯ ಸಮಿತಿ ಸದಸ್ಯರ ತರಬೇತಿ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ದ.ಕ ಜಿಲ್ಲಾ ಪಂಚಾಯತ್ ಗ್ರಾ.ಕು.ನೀ,ನೈ ಇಲಾಖೆ, ತಾ.ಪಂ ಬೆಳ್ತಂಗಡಿ, ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಮಡಂತ್ಯಾರು ಗ್ರಾ.ಪಂ ಸಭಾಂಗಣದಲ್ಲಿ ಜು.23 ರಂದು ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಹಾಗೂ ಪಂಚಾಯತ್ ರಾಜ್ ಸದಸ್ಯರಿಗೆ ವಿಶೇಷ ಕಾರ್ಯಾಗಾರವು ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ಶಶಿಪ್ರಭಾ ಹಾಗೂ ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೂರ್ಯನಾರಾಯಣ ಭಟ್‌ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಜಲಜೀವನ್ ಮಿಷನ್ ಧ್ಯೇಯ್ಯೋದ್ಧೇಶ ಮತ್ತು ನೀರು ನೈರ್ಮಲ್ಯ ಸಮಿತಿ ರಚನೆ, ಜವಾಬ್ದಾರಿ ಕುರಿತು ಜೆ.ಜೆ.ಎಮ್ ಜಿಲ್ಲಾ ತಂಡದ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಮಾತನಾಡಿದರು. ಎಫ್.ಟಿ.ಕೆ ಕಿಟ್ ಪರೀಕ್ಷಾ ವಿಧಾನದ ಬಗ್ಗೆ ಬೆಳ್ತಂಗಡಿ ಪ್ರಯೋಗಾಲಯದ ಹಿರಿಯ ರಾಸಾಯನಿಕ ತಜ್ಞೆ ಸುಮಲತಾ ಮತ್ತವರ ಸಹ ಸಿಬ್ಬಂದಿ ಆದಿತ್ಯ ಅವರು ಪ್ರಾತ್ಯಕ್ಷಿಕೆ ನೀಡಿದರು. ತಾಂತ್ರಿಕ ವಿಷಯದ ಬಗ್ಗೆ ಸಮುದಾಯ ಇಂಜಿನಿಯರ್ ಅಶ್ವಿನ್ ಮಾಹಿತಿ ನೀಡಿದರು.

ಅನುಷ್ಠಾನ ಪ್ರಗತಿ ಪರಿಶೀಲನೆ ಚರ್ಚೆ ನಡೆಯಿತು. ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿ ಮಹಾಂತೇಶ್ ಹಿರೇಮಠ್ ಸಹಕರಿಸಿದರು. ತರಬೇತಿಯಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು-ಸದಸ್ಯರು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮಡಂತ್ಯಾರು ಗ್ರಾ.ಪಂ ಕಾರ್ಯದರ್ಶಿ ಮೋರ್ಲಿಸ್ ಕ್ರಿಸ್ತಿನ ಸ್ವಾಗತಿಸಿದರು. ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.