ವೇಣೂರು ಕರಿಮಣೇಲು ಖಂಡಿಗದಲ್ಲಿ ಮಳೆಯ ನೆರೆಗೆ ಸಿಲುಕಿಕೊಂಡ ದನದ ರಕ್ಷಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಗ್ರಾಮ ಪಂಚಾಯತ್ ಕರಿಮಣೇಲು ಗ್ರಾಮದ ಖಂಡಿಗ ಜಯರಾಮ್ ಶೆಟ್ಟಿಯವರ ಬೆಲೆ ಬಾಳುವ ಜೆರ್ಸಿ ದನವೊಂದು ಜು.22 ರಂದು ಸುರಿದ ಭಾರಿ ಮಳೆಯ ಸಂದರ್ಭ ನೆರೆಯಿಂದ ಪಲ್ಗುಣಿ ನದಿಯ ಮದ್ಯೆ ಸಿಲುಕಿಕೊಂಡಿದ್ದು ನೆರೆಯಲ್ಲಿ ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವೇಣೂರು ಆರಕ್ಷಕ ಠಾಣೆ ಸಿಬ್ಬಂದಿಯವರೊಂದಿಗೆ ಕೈಜೋಡಿಸಿ ದನವನ್ನು ರಕ್ಷಿಸಿದರು.

ಮೂಡುಕೋಡಿ ಗ್ರಾಮದ ಪರಿಣಿತ ಈಜುಗಾರ ಇಂತಿಯಾಝ್ ನಡ್ತಿಕಲ್ ಹಾಗೂ ಹಸನಬ್ಬ ಕೈರೋಳಿ ತಕ್ಷಣ ನೀರಿಗಿಳಿದು ದನವನ್ನು ರಕ್ಷಿಸಿದರು. ಇವರನ್ನು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ದನದ ಮಾಲಕ ಜಯರಾಮ್ ಶೆಟ್ಟಿಯವರು ಅಭಿನಂದಿಸಿದರು.
ಸೂಕ್ತ ಸಮಯದಲ್ಲಿ ಸ್ಪಂದಿಸಿದ ಬೆಳ್ತಂಗಡಿ ಅಗ್ನಿ ಶಾಮಕ ದಳದ ಕೃಷ್ಣ ಮತ್ತು ಸಿಬ್ಬಂದಿಗಳು, ವೇಣೂರು ಆರಕ್ಷಕ ಠಾಣೆ ಉಪನಿರೀಕ್ಷಕ ಲೋಲಾಕ್ಷ ಮತ್ತು ಸಿಬ್ಬಂದಿಗಳಾದ ಲತಾ ಶೆಟ್ಟಿ, ಪ್ರಶಾಂತ್, ದೇವರಾಜ್ ಹಾಗೂ ಮಾಜಿ ಗ್ರಾ.ಪಂ ಸದಸ್ಯ ಯಶೋಧರ ಹೆಗ್ಡೆ ಉಪಸ್ಥಿತರಿದ್ದು ಸಹಕರಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.