ನಾರಾವಿ: ಪ್ರಗತಿ ಬಂಧು ಸ್ವಸಹಾಯ ತಂಡಗಳಿಗೆ ಲಾಭಾಂಶ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ಮತ್ತು ಕೆನರಾ ಬ್ಯಾಂಕಿನ ಸಹಯೋಗದೊಂದಿಗೆ ನಾರಾವಿ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮವು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.

ನಾರಾವಿ ವಲಯದ 280 ಸಂಘಗಳಿಗೆ ಸುಮಾರು ರೂ 1.50 ಕೋಟಿ ಲಾಭಾಂಶವನ್ನು ವಿತರಿಸಲಾಯಿತು. ಉಜಿರೆ ಹಾಗೂ ನಾರಾವಿ ಅತೀ ಹೆಚ್ಚು ಲಾಭಾಂಶ ಪಡೆದ ವಲಯಗಳಾಗಿವೆ. ಈ ಸಂದರ್ಭದಲ್ಲಿ ಎರಡು ತಂಡದ ಸದಸ್ಯರಿಗೆ ಪರಿಕರ ವಿತರಣೆ ಮಾಡಲಾಯಿತು. ಹೊಸದಾಗಿ ಪ್ರಾರಂಭಗೊಂಡ 7 ತಂಡಗಳಿಗೆ ನಿರ್ಣಯ ಪುಸ್ತಕ ವಿತರಿಸಿ ಶುಭಕೋರಲಾಯಿತು.

ಕಾರ್ಯಕ್ರಮವನ್ನು ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ  ಉದ್ಘಾಟಿಸಿ ಶುಭಹಾರೈಸಿದರು. ನಾರಾವಿ ವಲಯ ಒಕ್ಕೂಟದ ಅಧ್ಯಕ್ಷ ಯಶೋಧರ ಮರೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಯಶವಂತ್ ಯೋಜನೆಯ ಬಗ್ಗೆ ಪ್ರಸ್ತಾಪಿಸಿ ಮಾಹಿತಿ ನೀಡಿದರು. ಮುಖ್ಯ ಅಥಿತಿಗಳಾಗಿ ನಾರಾವಿ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ನಿತ್ಯಾನಂದ ನಾವರ, ನಾರಾವಿ ಗ್ರಾ.ಪಂ ಉಪಾಧ್ಯಕ್ಷ ಉದಯ ಹೆಗ್ಡೆ, ಪ್ರಗತಿಪರ ಕೃಷಿಕ ರತ್ನಾಕರ ಹೊಳೆಹೊದ್ದು, ಅಂಡಿಂಜೆ ಗ್ರಾ.ಪಂ ಅಧ್ಯಕ್ಷೆ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾ ಪ್ರತಿನಿಧಿ ಹರಿನಾಕ್ಷಿ ಪ್ರಾರ್ಥಿಸಿ, ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ಸ್ವಾಗತಿಸಿ, ಮೇಲ್ವಿಚಾರಕಿ ದಮಯಂತಿ ನಿರೂಪಿಸಿ, ಸುರೇಶ್ ವಂದಿಸಿದರು. ನಾರಾವಿ ವಲಯದ ಪ್ರಗತಿ ಬಂಧು ಸ್ವಸಹಾಯ ತಂಡಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.