ಯೋಧ ಏಕನಾಥ ಶೆಟ್ಟಿಯವರ ಮನೆಯವರಿಂದ ಶಿಶುಮಂದಿರದ ವಠಾರದಲ್ಲಿ ಸಸಿ ನೆಡುವ ಕಾರ್ಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ :  ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದ ಬಳಿಯ ನಿವಾಸಿ, ವಾಯುಸೇನೆಯ ಯೋಧ ಏಕನಾಥ ಶೆಟ್ಟಿಯವರು ಕಣ್ಮರೆಯಾಗಿ ಇಂದಿಗೆ (ಜು.22) ಐದು ವರ್ಷ ಪೂರ್ಣಗೊಂಡಿದೆ.  ಇವರ ಸವಿನೆನಪಿನಲ್ಲಿ  ಅವರ  ಮನೆಯವರಿಂದ ಗುರುವಾಯನಕೆರೆ ಶಿಶುಮಂದಿರದ ವಠಾರದಲ್ಲಿ ಗಿಡನೆಡುವ ಕಾರ್ಯಕ್ರಮ ಜು.22 ರಂದು ಜರುಗಿತು.

ಈ ವೇಳೆ ಯೋಧ ಏಕನಾಥ ಶೆಟ್ಟಿಯವರ ಧರ್ಮಪತ್ನಿ  ಜಯಂತಿ ಶೆಟ್ಟಿ, ಪುತ್ರ ಅಕ್ಷಯ್, ಸಂಬಂಧಿಕರಾದ ಶಶಿರಾಜ್ ಶೆಟ್ಟಿ ಶಕ್ತಿನಗರ, ಪುಷ್ಪರಾಜ ಶೆಟ್ಟಿ ಹಾಗೂ ಸ್ಥಳೀಯರು, ಆಪ್ತರು ಉಪಸ್ಥಿತರಿದ್ದು, ಗಿಡನೆಡುವ ಕಾರ್ಯದಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಶಿಶುಮಂದಿರದ ವಠಾರದಲ್ಲಿ ಹಾಗೂ ಕುವೆಟ್ಟು ಗ್ರಾ.ಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 100 ಸಸಿಗಳನ್ನು ನಾಟಿ ಮಾಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.