ದ್ವಿತೀಯ ಪಿಯುಸಿ ಫಲಿತಾಂಶ: ತಾಲೂಕಿನ 6 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದುಗೊಂಡಿದ್ದರೂ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ಅಂಕ ನೀಡಲಾಗಿದ್ದು, ಜು.20ರಂದು ಫಲಿತಾಂಶ ಪ್ರಕಟಗೊಂಡಿದೆ. ತಾಲೂಕಿನ 6ಮಂದಿ ವಿದ್ಯಾರ್ಥಿಗಳು 600ರಲ್ಲಿ 600 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದು, 20 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿಯ ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಉಜಿರೆ ಶ್ರೀ ಧ.ಮಂ ಕಾಲೇಜಿನ ಸಮೀಕ್ಷಾ, ಮಡಂತ್ಯಾರು ಸೇ.ಹಾ.ಕಾಲೇಜಿನ ಸಿಂಚನಾ, ವಾಣಿ ಪ.ಪೂ.ಕಾಲೇಜಿನ ಜ್ಯೋತಿಕಾ, ಶ್ರೀ ಧ.ಮಂ ವಸತಿ ಕಾಲೇಜಿನ ದೀಪಕ್ ಹೆಬ್ಬಾರ್, ತಾಲೂಕಿನವರಾಗಿದ್ದು, ಮೂಡಬಿದ್ರೆ ಎಕ್ಸಲೆಂಟ್ ಕಾಲೇಜಿನಲ್ಲಿ ಕಲಿಯುತ್ತಿದ್ದ ಮನೀಷಾ ಮತ್ತು ಹಾಸನ ಮಾಸ್ಟರ್ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಯುತ್ತಿದ್ದ ಗೌತಮ್ ಗೌಡ 600ಕ್ಕೆ 600 ಅಂಕ ಗಳಿಸಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.
ಎಸ್.ಡಿ.ಎಂ ಪ.ಪೂ.ಕಾಲೇಜು ಉಜಿರೆ: ಉಜಿರೆ ಎಸ್‌ಡಿಎಂ ಪ.ಪೂ.ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 1114 ಮಂದಿ ವಿದ್ಯಾರ್ಥಿಗಳಲ್ಲಿ 263 ಮಂದಿ ಉನ್ನತ ಶ್ರೇಣಿ, 761 ಪ್ರಥಮ, 90 ಮಂದಿ ದ್ವಿತೀಯ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ 116 ವಿದ್ಯಾರ್ಥಿಗಳಲ್ಲಿ 11 ಡಿಸ್ಟಿಂಕ್ಷನ್, 64 ಪ್ರಥಮ, 41 ಮಂದಿ ದ್ವಿತೀಯ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ತೇಜಸ್ವಿ 597 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 597 ಮಂದಿಯಲ್ಲಿ 206 ಡಿಸ್ಟಿಂಕ್ಷನ್, 384 ಪ್ರಥಮ, 7 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಈ ವಿಭಾಗದಲ್ಲಿ ಸಮೀಕ್ಷಾ ೬೦೦ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 401 ವಿದ್ಯಾರ್ಥಿಗಳಲ್ಲಿ 46 ಡಿಸ್ಟಿಂಕ್ಷನ್, 313 ಪ್ರಥಮ, 42 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಐಶ್ವರ್ಯ 596 ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಾಣಿ ಪ.ಪೂ.ಕಾಲೇಜು ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಒಟ್ಟು 450 ವಿದ್ಯಾರ್ಥಿಗಳಲ್ಲಿ 103 ಮಂದಿ ಡಿಸ್ಟಿಂಕ್ಷನ್, 315 ಪ್ರಥಮ ಹಾಗೂ 32 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 141  ಮಂದಿಯಲ್ಲಿ 44 ಡಿಸ್ಟಿಂಕ್ಷನ್, 95 ಪ್ರಥಮ, 2 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಜ್ಯೋತಿಕಾ 600 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 258 ಮಂದಿಯಲ್ಲಿ 53 ಡಿಸ್ಟಿಂಕ್ಷನ್, 190 ಪ್ರಥಮ ಹಾಗೂ 15 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ವಿಭಾಗದಲ್ಲಿ ಸಿಂಥಿಯಾ ರೊಡ್ರಿಗಸ್ 597 ಅತೀ ಹೆಚ್ಚು ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 51 ಮಂದಿಯಲ್ಲಿ 6 ಡಿಸ್ಟಿಂಕ್ಷನ್, 30 ಪ್ರಥಮ, 15 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ನಮೃತಾ 588 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಅನುಗ್ರಹ ಪ.ಪೂ. ಕಾಲೇಜು ಉಜಿರೆ:
ಅನುಗ್ರಹ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ 70 ವಿದ್ಯಾರ್ಥಿಗಳಲ್ಲಿ 21 ಡಿಸ್ಟಿಂಕ್ಷನ್, 42 ಪ್ರಥಮ, 6 ಮಂದಿ ದ್ವೀತಿಯ, ಒಬ್ಬ ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 53 ಮಂದಿಯಲ್ಲಿ 20 ಡಿಸ್ಟಿಂಕ್ಷನ್, 31 ಪ್ರಥಮ, 2 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ವೈಷ್ಣವಿ ವಿ. ಆಚಾರ್ಯ 592 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ 17 ಮಂದಿಯಲ್ಲಿ 1 ಡಿಸ್ಟಿಂಕ್ಷನ್, 11 ಪ್ರಥಮ, 4 ಮಂದಿ ದ್ವಿತೀಯ ಹಾಗೂ ಒಬ್ಬ ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ. ಜೋಸ್ನಾ ಕೆ.ಎಫ್ 545 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸಂತ ತೆರೆಸಾ ಪ.ಪೂ.ಕಾಲೇಜು ಬೆಳ್ತಂಗಡಿ:
ಸಂತ ತೆರೆಸಾ ಪ.ಪೂ.ಕಾಲೇಜಿನ 60 ವಿದ್ಯಾರ್ಥಿಗಳಲ್ಲಿ 5 ಮಂದಿ ಉನ್ನತ ಶ್ರೇಣಿ, 36 ಮಂದಿ ಪ್ರಥಮ, 19 ಮಂದಿ ದ್ವೀತಿಯ ಶ್ರೇಣಿ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 48 ಮಂದಿಯಲ್ಲಿ 4  ಡಿಸ್ಟಿಂಕ್ಷನ್, 30 ಪ್ರಥಮ, 14 ಮಂದಿ ದ್ವೀತಿಯ ಶ್ರೇಣಿ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಪ್ರಜ್ವಲ್ ಸೆರಾವೋ 560 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ 12 ಮಂದಿಯಲ್ಲಿ 1 ಡಿಸ್ಟಿಂಕ್ಷನ್, 6 ಪ್ರಥಮ, 5  ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಪೃಥ್ವಿ 533 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸೇಕ್ರೇಡ್ ಹಾರ್ಟ್ ಪ.ಪೂ.ಕಾ. ಮಡಂತ್ಯಾರು:
ಸೇ.ಹಾ.ಪ.ಪೂ.ಕಾ.ಮಡಂತ್ಯಾರಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ 266 ವಿದ್ಯಾರ್ಥಿಗಳಲ್ಲಿ 58 ಡಿಸ್ಟಿಂಕ್ಷನ್, 157 ಪ್ರಥಮ, 49  ದ್ವೀತಿಯ, 2 ಮಂದಿ ತೃತೀಯ ಶ್ರೇಣಿ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ 38 ಮಂದಿಯಲ್ಲಿ 1 ಡಿಸ್ಟಿಂಕ್ಷನ್, 13 ಪ್ರಥಮ, 22 ದ್ವೀತಿಯ, 2 ಮಂದಿ ತೃತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಪ್ರೇಮ್‌ರಾಜ್ ಮೆಂತೆರೋ 556 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 172 ಮಂದಿಯಲ್ಲಿ 37 ಡಿಸ್ಟಿಂಕ್ಷನ್, 108 ಪ್ರಥಮ, 27 ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಸಿಂಚನಾ 600 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 56 ಮಂದಿಯಲ್ಲಿ 20 ಡಿಸ್ಟಿಂಕ್ಷನ್, 36 ಪ್ರಥಮ ಮಂದಿ ಪ್ರಥಮ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಲೇನಿಶಾ ಕೊರೆಯ 599 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಎಸ್.ಡಿ.ಎಂ ವಸತಿ ಶಾಲೆ ಉಜಿರೆ:
ಉಜಿರೆ ಎಸ್.ಡಿ.ಎಂ ವಸತಿ ಶಾಲೆಯ ವಿಜ್ಞಾನ ವಿಭಾಗದ 151 ವಿದ್ಯಾರ್ಥಿಗಳಲ್ಲಿ 85 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 65  ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಎಂ.ಡಿ ದೀಪಕ್ ಹೆಬ್ಬಾರ್ 600 ಅಂಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.
ಕುಂಭಶ್ರೀ ಪ.ಪೂ.ಕಾಲೇಜು ವೇಣೂರು:
ಕುಂಭಶ್ರೀ ಪ.ಪೂ. ಕಾಲೇಜು ವೇಣೂರಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 22 ಮಂದಿ ವಿದ್ಯಾರ್ಥಿಗಳಲ್ಲಿ 5 ಮಂದಿ ಡಿಸ್ಟಿಂಕ್ಷನ್, 16 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 11 ವಿದ್ಯಾರ್ಥಿಗಳಲ್ಲಿ 3 ಮಂದಿ ಉನ್ನತ ಶ್ರೇಣಿ, 8 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಸಹನಾ 594 ಅತೀ ಹೆಚ್ಚು ಅಂಕಗಳಿದ್ದಾರೆ. ಕಲಾ ವಿಭಾಗದಲ್ಲಿ 11 ಮಂದಿ ವಿದ್ಯಾರ್ಥಿಗಳಲ್ಲಿ 2 ಮಂದಿ ಡಿಸ್ಟಿಂಕ್ಷನ್, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವೀತಿಯ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಪೂಜಾ ಟಿ.ಎಲ್ 577 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸ.ಪ.ಪೂ.ಕಾಲೇಜು ಬೆಳ್ತಂಗಡಿ:
ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯಲ್ಲಿ ಕಲಾ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ 203 ವಿದ್ಯಾರ್ಥಿಗಳಲ್ಲಿ 7 ಮಂದಿ ಡಿಸ್ಟಿಂಕ್ಷನ್, 137 ಪ್ರಥಮ, 47 ಮಂದಿ ದ್ವೀತಿಯ, 2 ಮಂದಿ ತೃತೀಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 106 ರಲ್ಲಿ 4 ಡಿಸ್ಟಿಂಕ್ಷನ್, 57 ಪ್ರಥಮ, 33 ಮಂದಿ ದ್ವೀತಿಯ 2 ಮಂದಿ ತೃತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ರಂಜನಿ 524 ಅತೀ ಹೆಚ್ಚು ಅಂಕ ಪಡೆದವರು.
ವಾಣಿಜ್ಯ ವಿಭಾಗದಲ್ಲಿ 85 ವಿದ್ಯಾರ್ಥಿಗಳಲ್ಲಿ 2 ಡಿಸ್ಟಿಂಕ್ಷನ್, 68 ಪ್ರಥಮ, 14 ಮಂದಿ ದ್ವೀತಿಯ ಶ್ರೇಣಿಯನ್ನು ಪಡೆದುಕೊಂಡಿದ್ದು, ಸುಮಂತ್ 568 ಅತೀ ಹೆಚ್ಚು ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 12 ಮಂದಿಯಲ್ಲಿ 1 ಡಿಸ್ಟಿಂಕ್ಷನ್, 11 ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಶಶಿಕಲಾ 538 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸ.ಪ.ಪೂ.ಕಾಲೇಜು ಅಳದಂಗಡಿ:
ಸ.ಪ.ಪೂ.ಕಾಲೇಜು ಅಳದಂಗಡಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ 85 ವಿದ್ಯಾರ್ಥಿಗಳಲ್ಲಿ 2 ಮಂದಿ ಡಿಸ್ಟಿಂಕ್ಷನ್, 52 ಪ್ರಥಮ, 31 ದ್ವೀತಿಯ ಶ್ರೇಣಿಯನ್ನು ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 35 ಮಂದಿಯಲ್ಲಿ 12 ಪ್ರಥಮ, 23 ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಶ್ರೇಯಾ 474 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 29 ಮಂದಿಯಲ್ಲಿ 21 ಪ್ರಥಮ, 8 ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ನಯನ ವಿ. ಹೆಗ್ಡೆ 503 ಅತೀ ಹೆಚ್ಚು ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 21 ಮಂದಿಯಲ್ಲಿ 2 ಡಿಸ್ಟಿಂಕ್ಷನ್, 19 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಅನುಪ್ರಿಯಾ 543 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸ.ಪ.ಪೂ.ಕಾಲೇಜು ಕೊಕ್ರಾಡಿ:
ಸ.ಪ.ಪೂ.ಕಾಲೇಜು ಕೊಕ್ರಾಡಿಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ 61 ಮಂದಿ ವಿದ್ಯಾರ್ಥಿಗಳಲ್ಲಿ 4 ಡಿಸ್ಟಿಂಕ್ಷನ್, 39 ಪ್ರಥಮ, 18 ಮಂದಿ ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 25 ಮಂದಿಯಲ್ಲಿ 12 ಮಂದಿ ಪ್ರಥಮ, 13 ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದು, ಪುಷ್ಪಾ 482 ಅತೀ ಹೆಚ್ಚು ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 36 ಮಂದಿಯಲ್ಲಿ 4 ಡಿಸ್ಟಿಂಕ್ಷನ್, 27 ಪ್ರಥಮ, 5 ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಸುಜನನ್ 591 ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಸ.ಪ.ಪೂ.ಕಾಲೇಜು ಪದ್ಮುಂಜ:
ಸ.ಪ.ಪೂ.ಕಾಲೇಜು ಪದ್ಮುಂಜದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ 33 ಮಂದಿಯಲ್ಲಿ 17 ಪ್ರಥಮ, 10 ಮಂದಿ ದ್ವೀತಿಯ, 6 ಮಂದಿ ತೃತೀಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 16 ಮಂದಿಯಲ್ಲಿ 3 ಪ್ರಥಮ, 8 ದ್ವೀತಿಯ, 5 ಮಂದಿ ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ಸುಹನಾ 405 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 17 ಮಂದಿಯಲ್ಲಿ 14 ಪ್ರಥಮ, 2 ದ್ವೀತಿಯ, ಒಬ್ಬ ತೃತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಧನ್ಯ 497 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸ.ಪ.ಪೂ.ಕಾಲೇಜು ವೇಣೂರು:
ಸ.ಪ.ಪೂ.ಕಾಲೇಜು ವೇಣೂರಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 208 ವಿದ್ಯಾರ್ಥಿಗಳಲ್ಲಿ 22 ಡಿಸ್ಟಿಂಕ್ಷನ್, 131 ಪ್ರಥಮ, 54 ದ್ವೀತಿಯ ಒಬ್ಬ ತೃತೀಯ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ.
ಕಲಾ ವಿಭಾಗದಲ್ಲಿ 73  ಮಂದಿಯಲ್ಲಿ 1 ಡಿಸ್ಟಿಂಕ್ಷನ್, 31 ಪ್ರಥಮ, 40 ದ್ವೀತಿಯ, ಒಬ್ಬ ತೃತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಈ ವಿಭಾಗದಲ್ಲಿ ನಿಖಿತಾ 555 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 94 ಮಂದಿಯಲ್ಲಿ 6 ಡಿಸ್ಟಿಂಕ್ಷನ್, 74 ಪ್ರಥಮ, 14 ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಸಿಂಚನಾ 575 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 41 ಮಂದಿಯಲ್ಲಿ 15 ಡಿಸ್ಟಿಂಕ್ಷನ್, 26 ಮಂದಿ ಪ್ರಥಮ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಪ್ರಧಾನ್ 588 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಸ.ಪ.ಪೂ.ಕಾಲೇಜು ನಡ:
ಸ.ಪ.ಪೂ.ಕಾಲೇಜು ನಡದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ 84 ವಿದ್ಯಾರ್ಥಿಗಳಲ್ಲಿ 6 ಡಿಸ್ಟಿಂಕ್ಷನ್, 53 ಪ್ರಥಮ, 23 ದ್ವೀತಿಯ 2 ಮಂದಿ ತೃತೀಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 39 ಮಂದಿಯಲ್ಲಿ 1 ಡಿಸ್ಟಿಂಕ್ಷನ್, 23 ಪ್ರಥಮ, 14 ದ್ವೀತಿಯ, ಒಬ್ಬ ತೃತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಕಾವ್ಯ 525 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 45 ಮಂದಿಯಲ್ಲಿ 5 ಡಿಸ್ಟಿಂಕ್ಷನ್, 30 ಪ್ರಥಮ, 9 ದ್ವೀತಿಯ ಒಬ್ಬ ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿಭಾಗದಲ್ಲಿ ರೂಪಲತಾ 575  ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಪ.ಪೂ.ಕಾಲೇಜು ಮುಂಡಾಜೆ:
ಪ.ಪೂ.ಕಾಲೇಜು ಮುಂಡಾಜೆಯಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ 121 ಮಂದಿಯಲ್ಲಿ 15 ಡಿಸ್ಟಿಂಕ್ಷನ್, 72 ಪ್ರಥಮ, 30 ದ್ವೀತಿಯ, 4 ಮಂದಿ ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ 44  ಮಂದಿಯಲ್ಲಿ 4 ಡಿಸ್ಟಿಂಕ್ಷನ್, 18 ಪ್ರಥಮ, 18 ದ್ವೀತಿಯ 4 ತೃತೀಯ ಶ್ರೇಣಿ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ರಕ್ಷಿತಾ ಪಿ.ಎನ್ 557 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 77 ಮಂದಿಯಲ್ಲಿ 11 ಡಿಸ್ಟಿಂಕ್ಷನ್, 54 ಪ್ರಥಮ, 12 ದ್ವೀತಿಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ನಿತೇಶ್ 557 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ:
ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ, ಹಾಗೂ ಕಲಾ ವಿಭಾಗದಲ್ಲಿ ಒಟ್ಟು 131 ವಿದ್ಯಾರ್ಥಿಗಳಲ್ಲಿ 10 ಮಂದಿ ಡಿಸ್ಟಿಂಕ್ಷನ್, 89 ಪ್ರಥಮ, 30 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ತೃತೀಯ ಶ್ರೇಣೀಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 28 ಮಂದಿಯಲ್ಲಿ 5 ಡಿಸ್ಟಿಂಕ್ಷನ್, 23 ಪ್ರಥಮ, ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಹರ್ಷಿನಿ 575 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 81 ಮಂದಿಯಲ್ಲಿ 3 ಡಿಸ್ಟಿಂಕ್ಷನ್, 55 ಪ್ರಥಮ ಹಾಗೂ 21 ದ್ವಿತೀಯ, 2 ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ವಿಭಾಗದಲ್ಲಿ ತಾಥ್ವಿಕ್ 596 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ 22 ಮಂದಿಯಲ್ಲಿ 2 ಡಿಸ್ಟಿಂಕ್ಷನ್, ಪ್ರಥಮ 11, 9 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಈ ವಿಭಾಗದಲ್ಲಿ ಧನುಶ್ರೀ 562 ಅಂಕ ಪಡೆದುಕೊಂಡಿದ್ದಾರೆ.
ಸೈಂಟ್ ಆಂಟನಿ ಪದವಿ ಪೂರ್ವ ಕಾಲೇಜು ನಾರಾವಿ:
ಸೈಂಟ್ ಆಂಟನಿ ಪದವಿ ಪೂರ್ವ ಕಾಲೇಜು ನಾರಾವಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ 98 ಮಂದಿಯಲ್ಲಿ 27 ಡಿಸ್ಟಿಂಕ್ಷನ್, 58 ಪ್ರಥಮ, 13 ಮಂದಿ ದ್ವೀತಿಯ ಶ್ರೇಣಿ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಒಟ್ಟು 27 ಮಂದಿ ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 15 ಡಿಸ್ಟಿಂಕ್ಷನ್ ಮತ್ತು 12 ಮಂದಿ ಪ್ರಥಮ ದರ್ಜೆಯಲ್ಲಿ ತೆರ್ಗಡೆಯಾಗಿರುತ್ತಾರೆ. ಈ ವಿಭಾಗದಲ್ಲಿ ಸ್ನೇಹ 587 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 66 ಮಂದಿಯಲ್ಲಿ 12 ಮಂದಿ ಡಿಸ್ಟಿಕ್ಷನ್, 45 ಮಂದಿ ಪ್ರಥಮ ಶ್ರೇಣೀಯಲ್ಲಿ, ಹಾಗೂ 9 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಕ್ಷಿರಾಜ 570 ಅತೀ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 5 ಮಂದಿಯಲ್ಲಿ 1 ಪ್ರಥಮ, 4 ಮಂದಿ ದ್ವಿತೀಯ ಶ್ರೇಣಿ ಪಡೆದಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಕೊಕ್ಕಡ:
ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಒಟ್ಟು 10 ಮಂದಿಯಲ್ಲಿ 1 ಡಿಸ್ಟಿಂಕ್ಷನ್, ಹಾಗೂ 9 ಮಂದಿ ಪ್ರಥಮ ಶ್ರೇಣಿಯನ್ನು ಪಡೆದಿದ್ದಾರೆ. ಈ ವಿಭಾಗದಲ್ಲಿ ಫಾತೀಮತ್ ಸಫ್ರೀನಾ 535 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 34 ಮಂದಿಯಲ್ಲಿ 1 ಡಿಸ್ಟಿಂಕ್ಷನ್ ಹಾಗೂ 12 ಮಂದಿ ಪ್ರಥಮ ದರ್ಜೆ, ಹಾಗೂ 21 ಮಂದಿ ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ರಿಫಾಹತ್ 520 ಅಂಕ ಪಡೆದುಕೊಂಡಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಅರಸಿನಮಕ್ಕಿ:
ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಒಟ್ಟು 23 ಮಂದಿಯಲ್ಲಿ 2 ಮಂದಿ ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ 19 ಮಂದಿ, ಹಾಗೂ 2 ಮಂದಿ ದ್ವಿತೀಯ ದರ್ಜೆ ತೆರ್ಗಡೆಹೊಂದಿದ್ದಾರೆ. ಈ ವಿಭಾಗದಲ್ಲಿ ದಿಕ್ಷೀತ್ ಯು 529 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 17 ಮಂದಿಯಲ್ಲಿ 7 ಮಂದಿ ಪ್ರಥಮ ದರ್ಜೆ, ಹಾಗೂ 10 ಮಂದಿ ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ. ಈ ವಿಭಾಗದಲ್ಲಿ ವನಿತಾ 409 ಅಂಕ ಪಡೆದುಕೊಂಡಿದ್ದಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಕೊಯ್ಯೂರು:
ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಒಟ್ಟು 6 ಮಂದಿಯಲ್ಲಿ 1 ಮಂದಿ ಡಿಸ್ಟಿಂಕ್ಷನ್, ಪ್ರಥಮ ದರ್ಜೆಯಲ್ಲಿ 5 ಮಂದಿ ತೇರ್ಗಡೆಹೊಂದಿದ್ದಾರೆ. ಈ ವಿಭಾಗದಲ್ಲಿ ನೆಫೀಸತುಲ್ ಇಶ್ರಾ 525 ಅಂಕ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 6 ಮಂದಿಯಲ್ಲಿ 3 ಮಂದಿ ಪ್ರಥಮ ದರ್ಜೆ, ಹಾಗೂ 3 ಮಂದಿ ದ್ವಿತೀಯ ದರ್ಜೆ ಪಡೆದುಕೊಂಡಿದ್ದಾರೆ.

ಈ ಬಾರಿಯ ದ್ವೀತಿಯ ಪಿಯುಸಿ ಪಬ್ಲೀಕ್ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಆರು ಮಂದಿ ವಿದ್ಯಾರ್ಥಿಗಳು 600 ರಲ್ಲಿ 600 ಅಂಕಗಳನ್ನು ಗಳಿಸಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಸುಲ್ಕೇರಿಮೊಗ್ರು ವರ್ಪಾಳೆ ದೇವಿಪ್ರಸಾದ್ ನಿವಾಸಿ ಜಗನ್ನಾಥ ಬಿ.ಕೆ ಮತ್ತು ಶರ್ಮಿಳಾ ದಂಪತಿ ಪುತ್ರಿ ಉಜಿರೆ ಶ್ರೀ ಧ.ಮಂ ಕಾಲೇಜಿನ ವಿದ್ಯಾರ್ಥಿನಿ ಸಮೀಕ್ಷಾ, ಶಿಬಾಜೆ ಗ್ರಾಮದ ನಿವಾಸಿ ದಿವಾಕರ್ ಹೆಬ್ಬಾರ್ ಮತ್ತು ಉಮಾ ಡಿ. ಹೆಬ್ಬಾರ್ ದಂಪತಿ ಪುತ್ರ ಉಜಿರೆ ಎಸ್.ಡಿ.ಎಂ ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿ ದೀಪಕ್ ಹೆಬ್ಬಾರ್, ಪಾಂಡವರಕಲ್ಲು ಶ್ರೀಧರ ಮತ್ತು ಭಾರತಿ ದಂಪತಿ ಪುತ್ರಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿನಿ ಸಿಂಚನಾ, ಮುಂಡಾಜೆ ಗ್ರಾಮದ ನೈಯಾಲು ನಿವಾಸಿ ಜಯಾನಂದ ಪೂಜಾರಿ ಮತ್ತು ಲೀಲಾ ದಂಪತಿ ಪುತ್ರಿ ವಾಣಿ ಪದವಿ ಪೂರ್ವ ಕಾಲೇಜು ಹಳೆಕೋಟೆ ಬೆಳ್ತಂಗಡಿಯ ಜ್ಯೋತಿಕಾ ಎನ್ ಈ ಸಾಧನೆಯನ್ನು ಮಾಡಿದವರು. ಇದರ ಜೊತೆಗೆ ಬೆಳ್ತಂಗಡಿ ತಾಲೂಕಿ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ ನಿವೃತ್ತ ಸೈನಿಕ ರುಕ್ಮಯ ಗೌಡ ಹಾಗೂ ವೇದಾವತಿಯವರ ಪುತ್ರಿ, ಮೂಡಬಿದಿರೆಯ ಕಲ್ಲಬೆಟ್ಟಿನ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ ಮನಿಷಾ ಹಾಗೂ ಉಜಿರೆ ಗ್ರಾಮದ ಕೂಡಿಗೆ ನಿವಾಸಿ ಉಜಿರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಗೌಡ ಮತ್ತು ಪುಣ್ಯ ದಂಪತಿ ಪುತ್ರ ಹಾಸನದ ಮಾಸ್ಟರ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಗೌತಮ್ ಗೌಡ ಕೂಡಾ ಈ ಸಾಧನೆಯನ್ನು ಮಾಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.