ಬೆಳ್ತಂಗಡಿ ಲಯನ್ಸ್ ಕ್ಲಬ್ 48 ನೇ ಅಧ್ಯಕ್ಷರಾಗಿ ರಾಜೀವ ಡಿ ಗೌಡ ಅಧಿಕಾರ ಸ್ವೀಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ ಪ್ರಸಕ್ತ ಸಾಲಿನ  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಜು.21ರಂದು ನಡೆಯಿತು.
ಲಯನ್ಸ್ ಜಿಲ್ಲೆಯ ದ್ವಿತೀಯ ಉಪರಾಜ್ಯಪಾಲ ಡಾ| ಮೆಲ್ವಿನ್ ಡಿ’ಸೋಜ ರವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರೆವೇರಿಸಿದರು. ಬಳಿಕ ಮಾತನಾಡಿದ ಅವರು ಮೆಲ್ವಿನ್ ಜೋನ್ಸ್ ರವರು ಆರಂಭಿಸಿದ ಲಯನ್ಸ್ ಸಂಸ್ಥೆ ಸುಮಾರು 200 ದೇಶಗಳಿದ್ದು, 14 ಲಕ್ಷಕ್ಕಿಂತಲೂ ಅಧಿಕ ಸದಸ್ಯರನ್ನು ಹೊಂದಿರುವ ಅತೀ ದೊಡ್ಡ ಸೇವಾ ಸಂಸ್ಥೆಯಾಗಿದೆ. ಹೊಸದಾಗಿ ಅಧಿಕಾರ ವಹಿಸಿಕೊಂಡ ಪದಾಧಿಕಾರಿಗಳು ಅವರ ಜವಾಬ್ದಾರಿಗಳನ್ನು ಅರಿತು ಕೆಲಸ ಮುಂದುವರಿಸಿದರೆ ಸಂಸ್ಥೆ ಅಭಿವೃದ್ಧಿಯಾಗುವುದು. ಲಯನ್ಸ್ ಕ್ಲಬ್ ಸದಸ್ಯರು ಸಮಾಜ ಸೇವೆ ಮಾಡಿ ಎಂದರು.

ನೂತನ ಸಾಲಿನ ಅಧ್ಯಕ್ಷ ರಾಜೀವ ಗೌಡ ರವರು ಅಧಿಕಾರ ಪದ ಸ್ವೀಕರಿಸಿ ಕಾರ್‍ಯಕ್ರಮವನ್ನು ಮುಂದುವರೆಸಿದರು. ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ  ರವೀಂದ್ರ ಶೆಟ್ಟಿ ಬಳಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ತಮಗೆ ಸಹಕಾರ ನೀಡಿದವರನ್ನು ಅಭಿನಂದಿಸಿದರು. ಹಾಗೂ ಲ| ದತ್ತಾತ್ರೇಯ ಹಾಗೂ ಅನಂತಕೃಷ್ಣರವರನ್ನು ಸನ್ಮಾನಿದರು.

ಇದೇ ವೇಳೆ ಸ್ಕೌಡ್ಸ್ & ಗೈಡ್ಸ್ ನಲ್ಲಿ  ರಾಷ್ಟ್ರೀಯ ಪ್ರಶಸ್ತಿ ವಿಜೇತ ಪ್ರಾಪ್ತಿ ವಿ ಶೆಟ್ಟಿ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೂ  ಅಶಕ್ತ ಕುಟುಂಬಕ್ಕೆ ಧನಸಹಾಯ ಹಸ್ತಾಂತರಿಸಲಾಯಿತು.

ವೇದಿಕೆಯ ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಜೈನ್, ವಲಯಾಧ್ಯಕ್ಷ ವಸಂತ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಪೂಜಾರಿ ಬಂಟ್ವಾಳ, ವಿವಿಧ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರುಗಳಾದ ಸುಧೀರ್ ಭಂಡಾರಿ, ಮಾರ್ಟಿನ್ ಡಿ.ಸಿಲ್ವಾ, ಆನಂದ ಸಿಂದೂರು, ವಿನೋದ್ ಬಿ ಸಾಲ್ಡಾನಾ, ನಿತಿನ್ ಪಚ್ಚೇರಿ ಮೊದಲಾದವರು  ಉಪಸ್ಥಿತರಿದ್ದರು.

ನೂತನ ಕಾರ್ಯದರ್ಶಿ ದತ್ತಾತ್ರೇಯ ವರದಿ ವಾಚಿಸಿದರು. ವಸಂತ ಸುವರ್ಣ ಅತಿಥಿಗಳ  ಪರಿಚಯವಿತ್ತರು. ಕೋಶಾಧಿಕಾರಿ ಅನಂತಕೃಷ್ಣ  ಧನ್ಯವಾದವಿತ್ತರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.