ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ನೀರು ಮತ್ತು ನೈರ್ಮಲ್ಯ ಕಾರ್ಯಾಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ : ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಕ್ಷೆತ್ರ ಮಟ್ಟದ ಕಾರ್ಯಕರ್ತರ ತರಬೇತಿ ಕಾರ್ಯಾಗಾರ ಜು.20 ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾ ಭವನದಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕಿನ ವಿವಿಧ 10 ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ನಡೆದ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಜಲಜೀವನ್ ಮಿಷನ್ ಯೋಜನೆಯಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಪಾತ್ರ, ಕುಡಿಯುವ ನೀರಿಗಾಗಿ ಸರಕಾರಗಳು ಇದುವರೆಗೂ ಜಾರಿಗೆ ತಂದ ಹಿಂದಿನ-ಇಂದಿನ ಯೋಜನೆಗಳ ಸಂಪೂರ್ಣ ಮಾಹಿತಿ ಹಾಗು ಜಲಜೀವನ್ ಮಿಷನ್  ಧ್ಯೋಯೇದ್ದೇಶಗಳ ಕುರಿತು ಜೆಜೆಎಮ್ ಜಿಲ್ಲಾ ಮುಖ್ಯಸ್ಥ ಶಿವರಾಮ್ ಪಿ.ಬಿ ಅವರು ಮಾತನಾಡಿದರು. ಎಫ್.ಟಿ.ಕೆ ಕಿಟ್ ಪರೀಕ್ಷಾ ವಿಧಾನದ ಬಗ್ಗೆ ಬೆಳ್ತಂಗಡಿ ಪ್ರಯೋಗಾಲಯದ ಹಿರಿಯ ರಾಸಾಯನಿಕ ತಜ್ಞೆ ಸಮಲತಾ ಮತ್ತವರ ಸಹ ಸಿಬ್ಬಂದಿ ಆದಿತ್ಯ ಅವರು ಪ್ರಾತ್ಯಕ್ಷಿಕೆ ನೀಡಿದರು.

ಈ ಸಂದರ್ಭದಲ್ಲಿ ಅನುಷ್ಠಾನ ಪ್ರಗತಿ ಪರಿಶೀಲನೆ ಚರ್ಚೆ ನಡೆಯಿತು.ಅನುಷ್ಠಾನ ಬೆಂಬಲ ಸಂಸ್ಥೆಯ ಸಿಬ್ಬಂದಿಗಳಾದ ಮಹಾಂತೇಶ್ ಹಿರೇಮಠ್ ಸಹಕರಿಸಿದರು. ದ.ಕ ಜಿಲ್ಲಾ ಪಂಚಾಯತ್ ಗ್ರಾ.ಕು.ನೀ,ನೈ ಇಲಾಖೆ, ತಾ.ಪಂ ಬೆಳ್ತಂಗಡಿ, ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತರಬೇತಿಯಲ್ಲಿ ಧರ್ಮಸ್ಥಳ, ಬೆಳಾಲು, ನಿಡ್ಲೆ, ಕೊಕ್ಕಡ, ಪಟ್ರಮೆ, ಪುದುವೆಟ್ಟು,ಶಿಬಾಜೆ, ಶಿಶಿಲ, ಕಳೆಂಜ, ಅರಸಿನಮಕ್ಕಿ, ಒಟ್ಟು 10 ಗ್ರಾಮ ಪಂಚಾಯಿತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು. ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಸನ್ನ, ನಿಡ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಬ್ಬಾರ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಧರ್ಮಸ್ಥಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೆಂಕಪ್ಪ ಗೌಡ ಸ್ವಾಗತಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.