ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳ ಸಮಿತಿ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳ ಸಮಿತಿಯ ಸಭೆಯು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಜರುಗಿತು.
ಪ್ರವಾಸೋದ್ಯಮ ಇಲಾಖೆಯಿಂದ ರೂ. 5 ಲಕ್ಷ ಅನುದಾನ ಮಂಜೂರಾಗಿದ್ದು, ಇಲಾಖೆಗೆ ಧನ್ಯವಾದ ಸಲ್ಲಿಸಲಾಯಿತು. ಇದೇ ವೇಳೆ ಕಂಬಳ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಶ್ರೀ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಸುಧೀರ್ ಶೆಟ್ಟಿ ಕೋರಬೆಟ್ಟು, ಉಪಾಧ್ಯಕ್ಷರಾಗಿ ಪದ್ಮನಾಭ ಸುವರ್ಣ, ಕಾರ್ಯದರ್ಶಿಯಾಗಿ ಸದಾಶಿವ ಹೆಗ್ಡೆ, ಜೊತೆ ಕಾರ್ಯದರ್ಶಿಯಾಗಿ ಅವಿನಾಶ್ ಮಾಣೂರು, ಕೋಶಾಧಿಕಾರಿಯಾಗಿ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಹರ್ಷ ಸಂಪಿಗೆತ್ತಾಯ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಭಾಕರ ಬಳ್ಳಮಂಜ, ಗೌರವ ಸಲಹೆಗಾರರಾಗಿ ಅನಂತರಾಮ್ ಗೌಡ ಪಲ್ಲತಲ, ವಿಶ್ವನಾಥ ಕಾರಂದೂರು, ಸಂಜೀವ ಶೆಟ್ಟಿ ಮುಗೆರೋಡಿ, ಕಂಬಳ ಸಮಿತಿಯ ದಾಖಾಲಾತಿ ಜೋಡಣೆಗಾಗಿ ನಾರಾಯಣ ಶೆಟ್ಟಿ ನೆತ್ತರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸತೀಶ್ ಕಾರಂದೂರು, ನಾರಾಯಣ ಪೂಜಾರಿ ಬಳ್ಳಮಂಜ, ವಸಂತ ಮರಕಡ, ಸಂಜೀವ ಮಾಯಿಲೋಡಿ, ಕುಮಾರಯ್ಯ ನಾಯ್ಕ ಮಾಯಿಲೋಡಿ, ಪ್ರಮೋದ್ ಕುಮಾರ್ ಬಳ್ಳಮಂಜ, ಅನಂತ್ರಾಮ ಗೌಡ ಪಲ್ಲತಳ, ಲಕ್ಷ್ಮಣ ಗೌಡ ಪಲ್ಲೆಕೋಡಿ, ರಾಧಾಕೃಷ್ಣ ಶೆಟ್ಟಿ ನೆತ್ತರ, ಗೋಪಾಲ ಮೇಸ್ತ್ರಿ, ನೆತ್ತರ ನಾರಾಯಣ, ಲೆನ್ಸಿ ಪಾಯಿಸ್ ಬಳ್ಳಮಂಜ, ಚಂದಪ್ಪ ಹೆಂಟ್ರೇಲು, ವಸಂತ/ಪದ್ಮನಾಭ ಕಾರಂದೂರು, ವಸಂತ ಕಲ್ಲಿಮಾರು, ಜಯರಾಮ ಮಡಿವಾಳ, ನಾರಾಯಣ ಶೆಟ್ಟಿ ಪಾಪುಂಜ, ಸುಂದರ ಪೂಜಾರಿ ಬಳ್ಳಮಂಜ, ಹರ್ಷ ಬಳ್ಳಮಂಜ, ಚಂದ್ರಕಾಂತ ನಿಡ್ಡಾಜೆ, ಡೀಕಯ್ಯ ಬರಮೇಲು, ಶೇಖರ ಕಜೆ ಮಾಯಿಲೋಡಿ, ಸಂಪತ್ ಕೈಲಾ ಆಯ್ಕೆಯಾದರು.

ಸಮಿತಿ ಕಾರ್ಯದರ್ಶಿ ಕುಮಾರಯ್ಯ ನಾಯ್ಕ ಸ್ವಾಗತಿಸಿ, ವರದಿ ಮಂಡಿಸಿ, ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕಂಬಳ ಸಮಿತಿಯ ಅಧ್ಯಕ್ಷ ದಿ| ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು, ಸದಸ್ಯರಾದ ಗುರುಪ್ರಸಾದ್ ಭಟ್ ಹಾಗೂ ರಘುವೀರ ಶೆಟ್ಟಿ ನೆತ್ತರ ಇವರುಗಳಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಪದ್ಮನಾಭ ಸುವರ್ಣರವರು ಅಗಲಿದ ಕಂಬಳ ಸಮಿತಿಯ ಗಣ್ಯರಿಗೆ ನುಡಿನಮನ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.