ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಪರಿವರ್ತನೆಗಾಗಿ ನಡಿಗೆ ವಿನೂತನ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಮುಂದಿನ ಪೀಳಿಗೆಗಾಗಿ ಪರಿಸರದ ಹಸಿರನ್ನು ಉಳಿಸಿ, ಬೆಳೆಸುವ ಸಲುವಾಗಿ, ನಡ ಗ್ರಾಮದ ನರಸಿಂಹ ಗಡದಿಂದ ಲಾಯಿಲ ಗ್ರಾಮದ ” ಹರಿದ್ವಾರ ” (ಧನಂಜಯ ರಾವ್ ಅವರ ನಿವಾಸ) ದವರೆಗೆ ಸುಮಾರು 6 ಕಿ.ಮೀ ದಾರಿಯುದ್ದಕ್ಕೂ ಕಾಲ್ನಡಿಗೆಯಲ್ಲಿ ಬಂದು ಸುಮಾರು 10,000 ಹಲಸಿನ ಬೀಜ, 5 ಕೆ.ಜಿ ಬಿದಿರಿನ ಬೀಜಗಳನ್ನು ಪಕೃತಿಗೆ ಎಸೆಯುತ್ತಾಪರಿಸರದ ಹಸಿರನ್ನು ಹೆಚ್ಚಿಸುವ “ಪರಿವರ್ತನೆಗಾಗಿ ನಡಿಗೆ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬೆಳಿಗ್ಗೆ ರೋಟರಿ ನಿಕಟಪೂರ್ವ ಅಧ್ಯಕ್ಷ ಧನಂಜಯ ರಾವ್ ರವರ ನಿವಾಸದಲ್ಲಿ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿ ರವರುಗದ್ದೆಗೆ ಹಾಲನ್ನು ಹಾಕುವ ಮೂಲಕ “ವಾಟರ್ ಬ್ಯಾಂಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅರಣ್ಯ ರಕ್ಷಕ ಸುಭಾಷ್ ಮತ್ತು ಸತೀಶ್ ಡಿ’ಸೋಜ ರವರನ್ನು ಸನ್ಮಾನಿಸಲಾಯಿತು ಹಾಗೂ ಇಬ್ಬರು ವಿದ್ಯಾರ್ಥಿನಿಯರಿಗೆ ವಿದ್ಯಾ ನಿಧಿಯನ್ನು ವಿತರಿಸಲಾಯಿತು.

ರೋಟರಿ ಕುಟುಂಬದ ಸುಮಾರು ನೂರು ಜನರ ತಂಡ ನಡ ಗ್ರಾಮದ ನರಸಿಂಹ ಗಡದವರೆಗೆ ವಾಹನಗಳಲ್ಲಿ ತೆರಳಿ ಅಲ್ಲಿನ ಗ್ರಾಮ ವಾಸಿಗಳಿಗೆ ಬೇರೆ ಬೇರೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ, ಕಾರ್ಯದರ್ಶಿ ಅಬೂಬಕ್ಕರ್, ಎಂ.ವಿ.ಭಟ್, ಶ್ರೀಕಾಂತ್ ಕಾಮತ್, ಅತಿಥೇಯರಾದ ಧನಂಜಯ ರಾವ್, ರಾಜಶ್ರೀ ರಾವ್, ರೋಟರಿ ನಿಕಟ ಪೂರ್ವ ಕಾರ್ಯದರ್ಶಿ ಶ್ರೀಧರ ಕೆ.ವಿ, ಗಾಯತ್ರಿ ಶ್ರೀಧರ್, ಡಾ| ಶಶಿಕಾಂತ ಡೋಂಗ್ರೆ, ಡಾ| ದೀಪಾಲಿ ಡೋಂಗ್ರೆ, ಡಾ| ಶಶಿಧರ ಡೋಂಗ್ರೆ, ಡಾ.ಸುಷ್ಮಾ ಡೋಂಗ್ರೆ ಹಾಗೂ ರೋಟರಿ ಸದಸ್ಯರುಗಳು ಭಾಗವಹಿಸಿದ್ದರು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.