ಏತ ನೀರಾವರಿ ಯೋಜನೆಗೆ ರೂ.240 ಕೋಟಿ ಅನುದಾನ ಜಾರಿಗೊಳಿಸುವಲ್ಲಿ ಶ್ರಮಿಸಿದ ಶಾಸಕ ಹರೀಶ್ ಪೂಂಜರಿಗೆ ಮೊಗ್ರು ಗ್ರಾಮಸ್ಥರಿಂದ ಅಭಿನಂದನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತುಳುನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮುಗೇರಡ್ಕ ಹಾಗೂ ಬಂದಾರು ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ಯೋಜನೆಗೆ ಬೃಹತ್ ನೀರಾವರಿ ಯೋಜನೆ ಮೂಲಕ ರೂ. 240 ಕೋಟಿ ಅನುದಾನ ಬಿಡುಗಡೆಯಾಗುವಲ್ಲಿ ಪ್ರಮುಖ ಪಾತ್ರವಹಿಸಿದ ಕ್ಷೇತ್ರದ ಶಾಸಕ ಹರೀಶ್ ಪೂಂಜ ರವರನ್ನು ಬಂದಾರು ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರಿಂದ ಜು.19 ರಂದು ಶ್ರಮಿಕ ಕಛೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ಶಾಸಕ ಹರೀಶ್ ಪೂಂಜರನ್ನು ಎತ್ತಿಕೊಂಡು, ಜೈಕಾರ ಹಾಕಿ ಸಂಭ್ರಮಿಸಿದರು. ಇದೇ ವೇಳೆ ಗುಲಾಬಿ ಹೂವಿನ ಬೃಹತ್ ಹಾರವನ್ನು ಹಾಕಿ ಶಾಸಕರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮೊಗೆರಡ್ಕ ದೈವಸ್ಥಾನದ ಮೊಕ್ತೇಸರ ಮನೋಹರ್ ಗೌಡ ಅಂತರ, ಗುತ್ತು ಬಾರಿಕೆ ಮನೆತನದ ಚಂದ್ರಹಾಸ ಗೌಡ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಗ್ರಾ.ಪಂ. ಸದಸ್ಯರು, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಮುಗೇರಡ್ಕ, ಬೂತ್ ಸಮಿತಿ ಅಧ್ಯಕ್ಷ ದುಶ್ಯಂತ್ ಗೌಡ, ಕಾರ್ಯದರ್ಶಿ  ರಮೇಶ್ ನೆಕ್ಕರಾಜೆ, ಸಿ.ಎ ಬ್ಯಾಂಕ್  ಸದಸ್ಯರಾದ ಉದಯ ಭಟ್ ಕೊಳಬ್ಬೆ, ಶೀಲಾವತಿ, ಉದ್ಯಮಿ ಕಡಮ್ಮಜೆ ಫಾರ್ಮ್ ಮಾಲಕ  ದೇವಿಪ್ರಸಾದ್, ಜಯಪ್ರಸಾದ್, ಪುರಂದರ ಗೌಡ ನೈಮರ್, ನವಚೇತನ ಉಪಾಧ್ಯಕ್ಷರು, ಮೊಗ್ರು ಶಕ್ತಿ ಕೇಂದ್ರದ ಪ್ರಮುಖರಾದ ಅಶೋಕ್ ಭಟ್, ಹಿರಿಯರಾದ ಕಿನ್ಯಣ್ಣ ಗೌಡ, ಕೇಶವ ಗೌಡ, ರಾಮಣ್ಣ ಗೌಡ ಎರ್ಮಳ, ಪ್ರವೀಣ್ ಮತ್ತಿಲರು, ಬಾಲಕೃಷ್ಣ ಗೌಡ,  ಡಿ ವಾಸುದೇವ ಗೌಡ ಅಂತರ, ವೀರಪ್ಪ ಗೌಡ ಆರ್ತಿದಡಿ, ಬಾಲಪ್ಪ ಗೌಡ, ಬಾಬು ಗೌಡ, ನಿವೃತ ಪೊಲೀಸ್ ಅಧಿಕಾರಿ, ಕೊರಗಪ್ಪ ಗೌಡ  ಪುಣ್ಕೆದಡಿ, ನೇಮಿಚಂದ್ರ ಎಂ, ಭಾರತ್ ಜಾಲ್ನಡೆ ಹಾಗೂ  ಪಕ್ಷದ ಕಾರ್ಯಕರ್ತರು,  ಗ್ರಾಮಸ್ಥರು ಉಪಸ್ಥಿತರಿದ್ದರು.

ಬೆಳ್ತಂಗಡಿ ಏತ ನೀರಾವರಿ ಯೋಜನೆ ಎಂಬ ಹೆಸರಿನಲ್ಲಿ ಅನುಷ್ಠಾನಗೊಳ್ಳಲಿರುವ ಈ ಯೋಜನೆಯಡಿಯಲ್ಲಿ ಕರಾವಳಿಯ ಜೀವನದಿ ನೇತ್ರಾವತಿಗೆ ಅಡ್ಡಲಾಗಿ 24ಅಡಿ ಅಗಲದ ಸೇತುವೆ ಸಹಿತವಾಗಿರುವ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿದೆ ಮತ್ತು ಮುಗೇರಡ್ಕ ಪ್ರದೇಶವನ್ನು ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ನಡೆಯಲಿದೆ. ತಾಲೂಕಿನ ಸುಮಾರು 10 ಗ್ರಾಮಗಳಿಗೆ ಈ ಯೋಜನೆಯ ಪ್ರಯೋಜನ ಲಭಿಸಲಿದೆ.
ಮೊಗ್ರು, ಬಂದಾರು, ಇಳಂತಿಲ, ಕಣಿಯೂರು, ಉರುವಾಲು, ಕಳಿಯ, ನ್ಯಾಯತರ್ಪು, ಒಡಿಳ್ನಾಲ ಮತ್ತು ಕುವೆಟ್ಟು ಗ್ರಾಮಗಳಿಗೆ ಈ ಯೋಜನೆಯ ಪ್ರಯೋಜನ ಲಭಿಸಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.