ಸ್ಪಂದನಾ ಸೇವಾ ಸಂಘದಿಂದ ಕೊಯ್ಯೂರು ಗ್ರಾಮದ ವಿಶ್ವನಾಥ ಗೌಡರಿಗೆ ವೈದ್ಯಕೀಯ ನೆರವು

ಕೊಯ್ಯೂರು: ಕೊಯ್ಯೂರು ಗ್ರಾಮದ ಕಿನ್ಯಾಜೆ ನಿವಾಸಿ ವಿಶ್ವನಾಥ ಗೌಡರವರು ಆಕಸ್ಮಿಕವಾಗಿ ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಚಿಕಿತ್ಸಾ ಸಹಾಯಾರ್ಥ ಸ್ಪಂದನಾ ಸೇವಾ ಸಂಘದ 40ನೇ ಸೇವಾ ಯೋಜನೆಯಡಿ ರೂ.20ಸಾವಿರ ಧನ ಸಹಾಯದ ಚೆಕ್ಕನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ರವೀಂದ್ರನಾಥ್ ಗೌಡ ಪೆರ್ಮುದೆ ರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು, ಮಾಜಿ ನಿರ್ದೇಶಕ ವಿಜಯ್ ಕುಮಾರ್ ಕೊಯ್ಯೂರು, ವಾಣಿ ಸೌಹಾರ್ದ ಕೋ-ಆಪರೇಟೀವ್ ಸೊಸೈಟಿ ನಿರ್ದೇಶಕರುಗಳಾದ ಉಷಾದೇವಿ ಕಿನ್ಯಾಜೆ, ಸುರೇಶ್ ಕೌಡಂಗೆ, ತಾಲೂಕು ಮಹಿಳಾ ವೇದಿಕೆಯ ಕಾರ್ಯದರ್ಶಿ ಗೀತಾ ರಾಮಣ್ಣ ಗೌಡ, ಕೊಯ್ಯೂರು ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಮೈಂದಕೋಡಿ, ಉಪನ್ಯಾಸಕ ದಿವಾ ಕೊಕ್ಕಡ, ಕೊಯ್ಯೂರು ಗ್ರಾ.ಪಂ.ಸದಸ್ಯ ಯಶವಂತ ಗೌಡ, ತಾ.ಪಂ ಮಾಜಿ ಸದಸ್ಯ ಪ್ರವೀಣ್ ಗೌಡ ಮಾವಿನಕಟ್ಟೆ, ವಾಣಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ ಮತ್ತು ಗ್ರಾಮದ ಸ್ವಜಾತಿ ಬಾಂಧವರು, ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.