ಮೊಗ್ರು: ದೇವರಡ್ಕ-ಕೊಳಬ್ಬೆ ಪ.ಜಾತಿ ಕಾಲೋನಿ ಕಾಂಕ್ರಿಟ್ ರಸ್ತೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮೊಗ್ರು: ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ದೇವರಡ್ಕ-ಕೊಳಬ್ಬೆ ಪ.ಜಾತಿ ಕಾಲೋನಿಯಲ್ಲಿ ರೂ. 10 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರಿಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಜು.19 ರಂದು ಜರುಗಿತು.

ನೂತನ ಕಾಂಕ್ರಿಟ್ ರಸ್ತೆಯನ್ನು ಶಾಸಕ ಹರೀಶ್ ಪೂಂಜರವರ ಮಾರ್ಗದರ್ಶನದಂತೆ ಬಂದಾರು ಗ್ರಾ.ಪಂ ಅಧ್ಯಕ್ಷೆ ಪರಮೇಶ್ವರಿ ಗೌಡರವರು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಂದಾರು ಗ್ರಾ.ಪಂ.  ಉಪಾಧ್ಯಕ್ಷ ಗಂಗಾಧರ್ ಪೂಜಾರಿ, ಗ್ರಾ.ಪಂ. ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ನಿರ್ದೇಶಕರಾದ ಉದಯ ಭಟ್ ಕೊಳಬ್ಬೆ, ಶೀಲಾವತಿ ಮುಗೇರಡ್ಕ, ಬೂತ್ ಸಮಿತಿ ಕಾರ್ಯದರ್ಶಿಗಳಾದ ರಮೇಶ್ ನೆಕ್ಕರಾಜೆ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಮಮತಾ ಕೆಲೆಂಜಿಮಾರು, ನಿವೃತ್ತ ಪೊಲೀಸ್ ಅಧಿಕಾರಿ ಬಾಬು ಗೌಡ, ಕೇಶವ ಜಾಲ್ನದೆ, ಸ್ಥಳೀಯರಾದ ವಿನಯ್, ಸಿದ್ದ, ಗಣೇಶ್, ಹರೀಶ್, ಸುಬ್ಬಯ್ಯ, ಪ್ರವೀಣ್, ಸತೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.