ಪಡಂಗಡಿ: ಪಡಂಗಡಿ ನಿವಾಸಿಯೋರ್ವರನ್ನು ಸಾಧುವಿನ ವೇಷದಲ್ಲಿ ಬಂದ ನಾಲ್ವರು ವಂಚಕರು ಮಂಕುಬೂದಿ ಎರಚಿ ಸುಮಾರು 81,000 ಹಣವನ್ನು ದೋಚಿರುವ ಘಟನೆ ಇತ್ತೀಚೆಗೆ ನಡೆದಿದೆ.
ಪಡಂಗಡಿ ಗ್ರಾ.ಪಂ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸಂತೋಷ್ ಕುಮಾರ್ ಜೈನ್ ರವರೇ ಸಾಧುಗಳ ವಶೀಕರಣಕ್ಕೆ ಮರುಳಾಗಿ ವಂಚಿತರಾದವರು.
ಸಮಾಜ ಸೇವಕ ಸಂತೋಷ್ ಕುಮಾರ್ ಜೈನ್ ರವರು ಮನೆಯಲ್ಲಿರುವ ಸಂದರ್ಭದಲ್ಲಿ ಬೊಲೆರೊ ವಾಹನದಲ್ಲಿ ಸನ್ಯಾಸಿಯ ರೂಪದಲ್ಲಿ ಬಂದ ನಾಲ್ವರು ತಾಲೂಕಿನ ಗಣ್ಯ ವ್ಯಕ್ತಿಯೋರ್ವರ ಮನೆಗೆ ಹೋಗಲು ದಾರಿ ತೋರಿಸುವಂತೆ ಕೇಳಿಕೊಂಡಿದ್ದರು.
ಹಿಂದಿ ಬಾಷೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಸರಿಯಾದ ವಿವರ ನೀಡಿದ ಸಂತೋಷ್ರವರು ಮಾತನಾಡಿದ ಶೈಲಿಯನ್ನು ಗಮನಿಸಿದ ಸನ್ಯಾಸಿಗಳು ಇವರ ಬಗ್ಗೆ, ಇವರ ಮನೆಯ ಬಗ್ಗೆ ವಿಚಾರಿಸಿ, ತಮ್ಮ ಮನೆಗೆ ನಾವು ಬರಬಹುದೇ ಎಂದು ವಿಚಾರಿಸಿದ್ದರು.
ದೈವ, ದೇವರು, ಧಾರ್ಮಿಕತೆಯ ಬಗ್ಗೆ ಅಪಾರ ನಂಬಿಕೆಯಿರುವ ಸಂತೋಷ್ ಕುಮಾರ್ ಜೈನ್ ಅವರು, ಈ ಸನ್ಯಾಸಿಗಳನ್ನೂ ಕೂಡ ಅಷ್ಟೇ ಬೇಗ ನಂಬಿದ್ರು. ಅವರು ಮನೆಯೊಳಗೆ ಬಂದು ಇವರೆದುರು ಕೈ ಉಜ್ಜಿದ ನಂತರ ಸಂತೋಷ್ ನಿನ್ನ ಕೈ ಮೂಸಿ ನೋಡು ಅಂತ ಹೇಳಿದ್ರು. ಈ ವೇಳೆ ಸಂತೋಷ್ ಕುಮಾರ್ ಜೈನ್ರಿಗೆ ಅಗರಬತ್ತಿಯ ವಾಸನೆ ಬಡಿದಿದೆ.
ಇದೇ ವೇಳೆ ಸಂತೋಷ್ ಕುಮಾರ್ಗೆ ಇವರ ಮೇಲೆ ಭಕ್ತಿ ಹೆಚ್ಚಾಗಿ ಆರಂಭದಲ್ಲಿ 5000 ರೂಪಾಯಿ ತಾನಾಗಿಯೇ ನೀಡಿದ್ದಾರೆ.
ಇದಾದ ನಂತರ 25 ಸಾವಿರ ಕೊಡು ಎಂದು ಸನ್ಯಾಸಿಗಳು ಕೇಳಿದ್ದಾರೆ. ಅಷ್ಟು ಹೇಳಿದ್ದೇ ತಡ ಸಂತೋಷ್ ಕುಮಾರ್ ಜೈನ್ ಮರು ಮಾತನಾಡದೇ ೨೫೦೦೦ ನೀಡಿದ್ದಾರೆ. ನಂತರ ಸನ್ಯಾಸಿಗಳು 51000 ಬೇಡಿಕೆ ಇಟ್ಟಿದ್ದು, ಅದನ್ನು ಕೂಡ ಮರು ಮಾತನಾಡದೇ ನೀಡಿದ್ದಾರೆ.
ಈ ವೇಳೆ ಸನ್ಯಾಸಿಗಳು ನಮಗೆ ಹಣ ಕೊಟ್ಟಿರುವುದಕ್ಕೆ ಬೇಸರವಾಗಿದೆಯಾ ಎಂದು ಕೇಳಿದ್ದು, ಸಂತೋಷ್ ಕುಮಾರ್ ಜೈನ್ ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ. ಸನ್ಯಾಸಿಗಳಲ್ಲಿ ಇಬ್ಬರು ಮನೆಯ ಹೊರಗೆ ನಿಂತು ಇವರ ಮನೆಗೆ ಬರುವ ಹುಡುಗರನ್ನು ಮಾತನಾಡಿಸಿಕೊಂಡು, ಅವರು ಮನೆಯೊಳಗೆ ಬಾರದಂತೆ ತಡೆಯುತ್ತಿದ್ದರು.
ಹೀಗೆ ಸನ್ಯಾಸಿಗಳು 81000 ರೂಪಾಯಿ ಪಡೆದು ಹೋದ 45 ನಿಮಿಷಗಳ ನಂತರ ಸಂತೋಷ್ ಕುಮಾರ್ ಜೈನ್ ಗೆ ಏಕಾಏಕಿ ಚಿಂತೆಯಾಗಿದೆ. ನಾನ್ಯಾಕೆ ಅವರಿಗೆ ಹಣ ಕೊಟ್ಟೆ, ನನಗೇನಾಗಿದೆ ಅನ್ನುವ ಭಾವನೆ ಅವರಲ್ಲಿ ಮೂಡಿದೆ. ನಂತರ ಆ ಸನ್ಯಾಸಿಗಳಿಗೆ ಕರೆ ಮಾಡಿ ಮಾತನಾಡುತ್ತಲೇ ಇದ್ದಾರೆ, ಆದರೆ ಸನ್ಯಾಸಿಗಳು ಇವರಿಗೆ ಒಳ್ಳೆಯದಾಗುತ್ತೆ ಅಂತ ಹೇಳುತ್ತಲೇ ಇದ್ದಾರೆ.
ಸಮಾಜ ಸೇವಕ, ಧಾರ್ಮಿಕ ಮುಂದಾಳು, ಜನಪ್ರತಿನಿಧಿಯೂ ಆಗಿರುವ ಸಂತೋಷ್ ಕುಮಾರ್ ಜೈನ್ ಅವರಿಗೆ ಇಂತಹ ಕಪಟ ಸನ್ಯಾಸಿಗಳು ಮೋಸ ಮಾಡಿದ್ದಾರೆ ಅಂದ್ರೆ, ಸಾಮಾನ್ಯರ ಪಾಡೇನು. ಆ ಕಾರಣಕ್ಕೆ ಸಂತೋಷ್ ಕುಮಾರ್ ಜೈನ್ ಸುದ್ದಿ ನ್ಯೂಸ್ ಬೆಳ್ತಂಗಡಿ ಮೂಲಕ ಜನರಿಗೆ ಹೀಗೆ ಮೋಸ ಮಾಡುವವರಿದ್ದಾರೆ ಎಚ್ಚರದಿಂದಿರಿ ಅನ್ನುವ ಸಂದೇಶ ರವಾನಿಸಿದ್ದಾರೆ. ಇಂತಹ ಕಪಟಿಗಳು ನಿಮ್ಮ ಮನೆಗೂ ಬರಬಹುದು. ಜಾಗೃತರಾಗಿರಿ.
ಈ ಬಗ್ಗೆ ಸುದ್ದಿ ನ್ಯೂಸ್ ಬೆಳ್ತಂಗಡಿ ಜೊತೆ ಸಂತೋಷ್ ಕುಮಾರ್ ಜೈನ್ ಮಾತನಾಡಿದ್ದಾರೆ. ಯೂ ಟ್ಯೂಬ್ ನಲ್ಲಿ ಅವರ ಕಿರು ಸಂದರ್ಶನದ ವೀಡಿಯೋ ಈ ಲಿಂಕ್ನಲ್ಲಿ ಲಭ್ಯವಿದೆ
📡YOUTUBE LINK🔗
Ninna anchina moorka nakle g anchane avodu. Dala ಮಂಕು bhoodhi ath. Ninna kaas da ase g inchane avodu.