ಧರ್ಮಸ್ಥಳ: ದೊಂಡೋಲೆ ವೃತ್ತ ಮತ್ತು ಹೈ ಮಾಸ್ಟ್ ದೀಪದ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ:  ಧರ್ಮಸ್ಥಳ ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಿ| ಕೆ.ಶಶಿಧರ್ ರಾವ್ ಸ್ಮರಣಾರ್ಥ ದೊಂಡೋಲೆಯಲ್ಲಿ ನಿರ್ಮಿಸಲಾದ ದೊಂಡೋಲೆ ವೃತ್ತ ಮತ್ತು ಹೈ ಮಾಸ್ಟ್ ದೀಪದ  ಉದ್ಘಾಟನಾ ಕಾರ್ಯಕ್ರಮ  ಜು.14 ರಂದು ಜರುಗಿತು.

ಧರ್ಮಸ್ಥಳ ಗ್ರಾ.ಪಂ. ಸದಸ್ಯ ಸುಧಾಕರ್ ಗೌಡ ರವರ ನೇತೃತ್ವದಲ್ಲಿ, ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಲಾದ ಈ ದೊಂಡೋಲೆ ವೃತ್ತ ಮತ್ತು ಹೈಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜರವರು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಇದು ನಗರಗಳಲ್ಲಿರುವ ವೃತ್ತದಂತೆ ಕಾಣಿಸುತ್ತಿದ್ದು, ಜಿಲ್ಲೆಯಲ್ಲಿಯೇ ಇದೊಂದು ಮಾದರಿ ವೃತ್ತವಾಗಿದೆ ಎಂದರು. ಶಶಿಧರ್ ರಾವ್ ರವರು ಸಾಮಾಜಿಕ ಚಿಂತಕರಾಗಿದ್ದು, ಸದಾ ಸಮಾಜದ ಬಗ್ಗೆ ಕಾಳಜಿ ಹೊಂದಿದವರಾಗಿದ್ದರು ಎಂದು ದಿ|ಶಶಿಧರ್ ರಾವ್ ರವರನ್ನು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ದೊಂಡೋಲೆ ವೃತ್ತ ನಿರ್ಮಾಣದಲ್ಲಿ ಮೇಸ್ತ್ರಿ ಕೆಲಸ ನಿರ್ವಹಿಸಿದ ಜಯಪ್ರಕಾಶ್, ಸುತ್ತಲಿನ ಕಬ್ಬಿಣದ ಬೇಲಿ ನಿರ್ಮಿಸಿದ ವಿಶ್ವನಾಥ್ ಆಚಾರ್ಯ ಮತ್ತು ಪೈಂಟ್ ಮಾಡಿದ ಹರೀಶ್ ಹಾಗೂ  ಕಾರ್ಯಕ್ರಮದ ರೂವಾರಿ ಸುಧಾಕರ್ ಗೌಡರನ್ನು  ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಪಿ. ಶ್ರೀನಿವಾಸ ರಾವ್, ದಿ| ಶಶಿಧರ್ ರಾವ್ ರವರ ಸಹೋದರರಾದ ಅನಂತ್ ರಾವ್ ಚಾರ್ಮಾಡಿ, ಪುರಂದರ ರಾವ್ ದೊಂಡೋಲೆ, ಮಕ್ಕಳಾದ ಅಜೇಯ್ ರಾವ್, ರಂಜನಿ ಹೊಳ್ಳ , ಸಂಬಂಧಿ ಸೂರ್ಯನಾರಾಯಣ ರಾವ್ ದೊಂಡೋಲೆ, ಸ್ಥಳೀಯರಾದ ಸತ್ಯಪ್ರಿಯ ಭಟ್, ಶ್ರೀನಿವಾಸ್ ಭಟ್, ದಿನೇಶ್ ರಾವ್, ನಿತಿನ್, ಮನೋಹರ್, ಮಧುಕರ್, ಶಿವ, ನವೀನ್, ಡಿ.ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.  ಪೃಥ್ವೀಶ್ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.