ಜಿ.ಪಂ ಮತ್ತು ತಾ.ಪಂ. ಕ್ಷೇತ್ರಗಳಿಗೆ ಒಳಪಟ್ಟ ಗ್ರಾಮಗಳ ವಿವರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜಿಲ್ಲಾ ಪಂಚಾಯತು ಮತ್ತು ತಾಲೂಕು ಪಂಚಾಯತು ಕ್ಷೇತ್ರಗಳಿಗೆ ರಾಜ್ಯ ಚುನಾವಣಾ ಆಯೋಗ ಕರುಡು ಮೀಸಲಾತಿ ಪಟ್ಟಿ ಪ್ರಕಟಗೊಳಿಸಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಇದುವರೆಗೆ 7 ಜಿಲ್ಲಾ ಪಂಚಾಯತು ಕ್ಷೇತ್ರ ಹಾಗೂ 26 ತಾಲೂಕು ಪಂಚಾಯತು ಕ್ಷೇತ್ರಗಳು ಕಾರ್ಯನಿರ್ವಹಿಸುತ್ತಿತ್ತು. ಇದೀಗ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಮಾಡಲಾದ ಕ್ಷೇತ್ರ ಪುನರ್‌ವಿಂಗಡಣೆಯಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 8 ಜಿಲ್ಲಾ ಪಂಚಾಯತು ಮತ್ತು 21 ತಾಲೂಕು ಪಂಚಾಯತು ಅಸ್ತಿತ್ವಕ್ಕೆ ಬಂದಿದೆ.

1 ಜಿಲ್ಲಾ ಪಂಚಾಯತು ಕ್ಷೇತ್ರ ಹೆಚ್ಚಳಗೊಂಡಿದ್ದು, ತಾಲೂಕು ಪಂಚಾಯತು ಕ್ಷೇತ್ರವನ್ನು 21 ಕ್ಕೆ ಇಳಿಸಲಾಗಿದೆ. ಹಿಂದೆ ಒಂದು ತಾ.ಪಂ ಕ್ಷೇತ್ರ ವಿಂಗಡಣೆಗೆ 10 ಸಾವಿರ ಜನಸಂಖ್ಯೆಯನ್ನು ಆಧಾರಿಸಲಾಗಿತ್ತು. ಆದರೆ ಈ ಬಾರಿ ಜನಸಂಖ್ಯೆಯನ್ನು 12,500ಕ್ಕೆ ಏರಿಸಿದ್ದರಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಇದ್ದ 26 ತಾ.ಪಂ ಕ್ಷೇತ್ರ 21ಕ್ಕೆ ಇಳಿಕೆ ಕಂಡಿದೆ. ಇದೇ ರೀತಿ ಜಿ.ಪಂ ಕ್ಷೇತ್ರ ವಿಂಗಡಣೆಯಲ್ಲಿ ಹಿಂದೆ 40 ಸಾವಿರ ಜನಸಂಖ್ಯೆಗೆ ಒಂದು ಜಿ.ಪಂ ಕ್ಷೇತ್ರವನ್ನು ಪರಿಗಣಿಸಲಾಗಿತ್ತು. ಆದರೆ ಈ ಬಾರಿ ಜಿ.ಪಂ ಕ್ಷೇತ್ರಗಳ ಪುನರ್‌ವಿಂಗಡಣೆಯಲ್ಲಿ ಜನಸಂಖ್ಯೆಯನ್ನು 35 ಸಾವಿರಕ್ಕೆ ಇಳಿಸಿದ್ದರಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಒಂದು ಜಿ.ಪಂ ಕ್ಷೇತ್ರ ಜಾಸ್ತಿಯಾಗಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ಪುನರ್‌ವಿಂಗಡಣೆಗೊಂಡ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಒಳಪಟ್ಟ ಗ್ರಾಮಗಳು ಹಾಗೂ ಆಯಾಯ ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಪ್ರಕಟಿಸಿದ ಕರುಡು ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.