ಬೆಳ್ತಂಗಡಿ: ಎಂಡೋ‌ ಸಂತ್ರಸ್ತರ ಮಾಸಾಶನ ಹೆಚ್ಚಿಸುವಂತೆ ಸಚಿವರಿಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಎಂಡೋ ಸಂತ್ರಸ್ತರಿಗೆ ಸೂಕ್ತ ಮಾಸಾಸನ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಹಾಗೂ ಕೊಕ್ಕಡದ ನೂತನ ಸಮುದಾಯ ಆಸ್ಪತ್ರೆಯಲ್ಲಿ ಎಂಡೋ ಪೀಡಿತರಿಗೆ ಸೂಕ್ತ ಸೌಲಭ್ಯಗಳನ್ನು ದೊರೆಯುವಂತಾಗಬೇಕು ಎಂಬ ಬಗ್ಗೆ ಎಂಡೋ ಸಂತ್ರಸ್ತರ ಪರವಾಗಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು ಅವರು ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ರಾಜ್ಯದ ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋ‌ಸಂತ್ರಸ್ತರೆಂದು ಸುಮಾರು 9 ಸಾವಿರ ಜನರನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, 2011 ರಲ್ಲಿ ನ್ಯಾಯಲಯದ ಆದೇಶದ ಪ್ರಕಾರ ಶೇ.60ಕ್ಕಿಂತ ಹೆಚ್ಚು ಬಾಧಿತರಾದವರಿಗೆ 3000 , ಶೇ.25  ಕ್ಕಿಂತ ಹೆಚ್ಚು ಶೇ.60ಕ್ಕಿಂತ ಒಳಗೆ ಬಾಧಿತರಾದವರಿಗೆ 1500 ಮಾಸಾಶನ ನೀಡಲಾಗುತ್ತಿದೆ .

ಆದರೆ ಆ ಬಳಿಕ ಈ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ. ಆದುದರಿಂದ ಸಚಿವರು ಈ‌ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ನಮಗೆ ನ್ಯಾಯ ಕೊಡಬೇಕು.
3000 ಮಾಸಾಶನ ಪಡೆಯುತ್ತಿದ್ದವರಿಗೆ 5000 , ಮತ್ತು 1500 ಮಾಸಾಸನ ಪಡೆಯುತ್ತಿದ್ದವರಿಗೆ 3000 ಮಾಸಾಶನ ಹಾಗೂ ನೀಲಿ ಸ್ಮಾರ್ಟ್ ಕಾರ್ಡ್ ಹೊಂದಿರುವ ಎಂಡೋಸಂತ್ರಸ್ತರಿಗೂ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ‌ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎಂಡೋ‌ ಸಂತ್ರಸ್ತರ ಬೇಡಿಕೆ ಬಗ್ಗೆ ಶಾಸಕ‌ ಹರೀಶ್ ಪೂಂಜ‌ ಅವರು ಆಗಾಗ ನನ್ನಲ್ಲಿ ಮತ್ತು‌ ಮುಖ್ಯಮಂತ್ರಿ ಯವರಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಉಸ್ತುವಾರಿ ಸಚಿವರೂ ಪ್ರಯತ್ನಿಸುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ನಿಮ್ಮ ಬೇಡಿಕೆಗಳಿಗೆ ಸರಕಾರದ ಕಡೆಯಿಂದ ಪೂರಕ ಸ್ಪಂದನೆ ನೀಡಲಾಗುವುದು ಎಂದರು.
ಸ್ಥಳೀಯ ಗ್ರಾ.ಪಂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.